ಹೋರಾಟಗಾರ್ತಿ ದಿಶಾ ಬಂಧನದ ಬೆನ್ನಲ್ಲೇ “ಟೂಲ್ ಕಿಟ್” ಗೆ ಸಂಬಂಧಿಸಿ ಇನ್ನಷ್ಟು ಬಂಧನದ ಸಾಧ್ಯತೆ

disha ravi
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(15-02-2021): ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಅವರು ಪೋಸ್ಟ್ ಮಾಡಿದ ಟೂಲ್ ಕಿಟ್ ಗೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಬೆಂಗಳೂರು ಮೂಲದ ಹೋರಾಟಗಾರ್ತಿ ದಿಶಾ ರವಿ ಅವರನ್ನು ಬಂಧಿಸಲಾಗಿದೆ. ಆದರೆ ಟೂಲ್ ಕಿಟ್ ಗೆ ಸಂಬಂಧಿಸಿದಂತೆ ಇನ್ನಷ್ಟು ಬಂಧನದ ಸಾಧ್ಯತೆಗಳಿವೆ.

ದಿಶಾ ರವಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ಪೊಲೀಸರು, ಈ ಪ್ರಕರಣದ ಮೊದಲ ಬಂಧನವಾಗಿದೆ ಎಂದು ಹೇಳಿದರು. ಫೆಬ್ರವರಿ 3 ರಂದು  ಟೂಲ್ ಕಿಟ್ ನ್ನು ಸಿದ್ದಪಡಿಸಿದ್ದಾರೆ ಮತ್ತು ಇತರ ಅನೇಕ ಜನರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ದಿಶಾರವಿಯನ್ನು ನ್ಯಾಯಾಲಯ ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಪೊಲೀಸರು ಇನ್ನೂ ಇಬ್ಬರು ಶಂಕಿತರಾದ ಶಾಂತನು ಮತ್ತು ನಿಕಿತಾ ಅವರನ್ನು ಹುಡುಕುತ್ತಿದ್ದಾರೆ ಮತ್ತು ಮುಂಬೈ ಮತ್ತು ಇತರ ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಭಾನುವಾರದ ವಿಚಾರಣೆಯ ಸಮಯದಲ್ಲಿ ದಿಶಾ ರವಿ ಕುಸಿದುಬಿದ್ದರು ಮತ್ತು ಥನ್ಬರ್ಗ್ ಟ್ವೀಟ್ ಮಾಡಿದ ಡಾಕ್ಯುಮೆಂಟ್ನಲ್ಲಿ ಕೇವಲ ಎರಡು ಸಾಲುಗಳನ್ನು ಮಾತ್ರ ದಿಶಾ ಸಂಪಾದಿಸಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾರೆ.  ದೆಹಲಿ ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಿ ಗ್ರೆಟಾ ಥನ್ ಬರ್ಗ್ ಹೇಗೆ ಪ್ರತಿಭಟನೆ ಮಾಡಬೇಕೆಂದು ಟೂಲ್ ಕಿಟ್ ಟ್ವೀಟ್ ಮಾಡಿದ್ದರು. ಇದು ವ್ಯಾಪಕ ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು