ನವದೆಹಲಿ: ಒಂದು ವರ್ಷದೊಳಗೆ ದೇಶದಲ್ಲಿರುವ ಎಲ್ಲಾ ಟೂಲ್ ಬೂತ್ಗಳನ್ನು ತೆಗೆದು ಹಾಕಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇಂದು ಸಂಸತ್ನಲ್ಲಿ ಹೇಳಿದ್ದಾರೆ.
ಟೂಲ್ ಬೂತ್ ಬದಲಾಗಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಬರಲಿದ್ದು, ಇದು ಕಾರುಗಳನ್ನು ಟ್ರ್ಯಾಕ್ ಮಾಡಿ ನೇರವಾಗಿ ಟೋಲ್ ಸಂಗ್ರಹಿಸಲಿದೆ ಎಂದು ಹೇಳಿದ್ದಾರೆ. ಒಮ್ಮೆ ಈ ವ್ಯವಸ್ಥೆ ಜಾರಿಗೆ ಬರುತ್ತಿದ್ದಂತೆ ದೇಶದೆಲ್ಲೆಡೆ ತಡೆ ರಹಿತ ಸಂಚಾರ ಸಾಧ್ಯವಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ.
“ಒಂದು ವರ್ಷದೊಳಗೆ ದೇಶದ ಎಲ್ಲಾ ಟೋಲ್ ಬೂತ್ಗಳನ್ನು ತೆಗೆದುಹಾಕಿ ಜಿಪಿಎಸ್ ಮೂಲಕ ಟೋಲ್ ಸಂಗ್ರಹ ಮಾಡಲಾಗುತ್ತದೆ ಎಂದು ನಾನು ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ” ಎಂದು ಗಡ್ಕರಿ ಗುರುವಾರ ಲೋಕಸಭೆಯಲ್ಲಿ ಹೇಳಿದ್ದಾರೆ.
ಜಿಪಿಎಸ್ ವ್ಯವಸ್ಥೆಯನ್ನು ರಷ್ಯಾದ ಸಹಾಯದಿಂದ ಜಾರಿಗೆ ತರಲಾಗುವುದು ಎಂದು ಹೇಳಿರುವ ಅವರು, ಬಳಕೆದಾರರ ಖಾತೆಯಿಂದ ನೇರವಾಗಿ ಹಣ ಕಡಿತ ಮಾಡಲಾಗುವುದು ತಿಳಿಸಿದ್ದಾರೆ.