ಮಾಹುವಾ ಮೊಯಿತ್ರಾ ನಿವಾಸಕ್ಕೆ ಸಶಸ್ತ್ರ ಅಧಿಕಾರಿಗಳ ನೇಮಕ| ನನ್ನ ಚಲನವಲನಗಳ ಮೇಲೆ ಕಣ್ಣಿಡಲಾಗಿದೆ ಎಂದ ಟಿಎಂಸಿ ಸಂಸದೆ

mahuva
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(13-02-2021): ಮೂವರು ಸಶಸ್ತ್ರ ಅಧಿಕಾರಿಗಳನ್ನು ಅನುಮತಿಯಿಲ್ಲದೆ ನನ್ನ ಮನೆಯ ಹೊರಗೆ ನಿಯೋಜಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಾಹುವಾ ಮೊಯಿತ್ರಾ ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದಾರೆ.

ಮಾಹುವಾ ಮೊಯಿತ್ರಾ ಪತ್ರದಲ್ಲಿ ತನ್ನ ಮನೆಯ ಹೊರಗೆ ನಿಯೋಜಿಸಲಾಗಿರುವ ಮೂವರು ಸಶಸ್ತ್ರ ಅಧಿಕಾರಿಗಳನ್ನು ತೆಗೆದುಹಾಕುವಂತೆ ವಿನಂತಿಸಿಕೊಂಡಿದ್ದಾರೆ. ನಾನು ಕೆಲವು ರೀತಿಯ ತಪಾಸಣೆಗೆ ಒಳಗಾಗಿದ್ದೇನೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಬಾರಖಂಬಾ ರಸ್ತೆ ನನ್ನ ನಿವಾಸದಲ್ಲಿ ಮೂರು ಬಿಎಸ್‌ಎಫ್ ಶಸ್ತ್ರಸಜ್ಜಿತ ಅಧಿಕಾರಿಗಳನ್ನು ನನ್ನ ನಿವಾಸದ ಹೊರಗೆ ನಿಯೋಜಿಸಲಾಗಿದೆ ಎಂದು ಮೊಯಿತ್ರಾ ಬರಾಖಂಬಾ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ತಿಳಿಸಿದ ಪತ್ರದಲ್ಲಿ ಬರೆದಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು