ಬೆಂಗಳೂರು: ತೃತೀಯ ಲಿಂಗಿಗಳಿಂದ ನಡೆಸಲಾಗುತ್ತಿದ್ದ ಅನಾಥಾಶ್ರಮದಲ್ಲಿ ಆಹಾರ, ಔಷಧಿಗಳಿಗೆ ಬರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ತೃತೀಯ ಲಿಂಗಿಗಳಿಂದಲೇ ನಡೆಸಲಾಗುತ್ತಿದ್ದ ಅನಾಥಾಶ್ರಮವೊಂದರಲ್ಲಿ ಆಹಾರ ಮತ್ತು ಔಷಧಿಗಳಿಗೆ ಕೊರತೆ ಉಂಟಾಗಿದ್ದು, ಆಶ್ರಿತರ ಬದಕು ಅಡಕತ್ತರಿಯಲ್ಲಿ ಸಿಲುಕಿದೆ.

ಕೆಲವು ತೃತೀಯ ಲಿಂಗಿಗಳು ಸೇರಿಕೊಂಡುನಮ್ಮನೆ ಸುಮ್ಮನೇಎಂಬ ಹೆಸರಿನಲ್ಲಿ ನಗರದ ಗಂಗೊಂಡನಹಳ್ಳಿ ಸರ್ಕಲ್‌ನ ಸಮೀಪದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ಅನಾಥಾಲಯ ನಿರ್ಮಿಸಿದ್ದರು. ಅದರಲ್ಲಿ ಬುದ್ಧಿ ಮಾಂದ್ಯ, ಕಿವುಡು, ಮೂಕ ಇತ್ಯಾದಿ ತೊಂದರೆ ಅನುಭವಿಸುತ್ತಿರುವ 22 ಮಂದಿ ವಿಶೇಷ ಚೇತನದ ಮಂದಿಗೆ ಆಶ್ರಯ ನೀಡಿದ್ದರು.

ತಮ್ಮ ಸ್ವಂತ ದುಡಿಮೆ ಮತ್ತು ವಿವಿಧ ದಾನಿಗಳ ನೆರವಿನಿಂದ  ತೃತೀಯ ಲಿಂಗಿಗಳು ಆಶ್ರಮ ನಡೆಸುತ್ತಿದ್ದರು. ಕೋವಿಡ್ ಸಂದಿಗ್ಧತೆ ಮತ್ತು ಲಾಕ್ಡೌನ್ ತಂದಿರುವ ಆರ್ಥಿಕ ಸಂಕಷ್ಟಗಳಿಂದಾಗಿ ಅನಾಥಾಲಯ ಮತ್ತು ಅದರಲ್ಲಿರುವ ಆಶ್ರಯ ಪಡೆದಿರುವವರ ಭವಿಷ್ಯ ತೂಗುಯ್ಯಾಲಯದಲ್ಲಿದೆ.

ಲಾಕ್ಡೌನ್ ಘೋಷಣೆಯ ಬಳಿಕ ಕೆಲಸಕ್ಕೂ ಹೋಗಲಾಗುತ್ತಿಲ್ಲ. ದಾನಿಗಳೂ ಹತ್ತಿರ ಸುಳಿಯುತ್ತಿಲ್ಲ ಎಂದು ಅನಾಥಾಲಯದ ವಕ್ತಾರರು ಬೇಸರ ವ್ಯಕ್ತಪಡಿಸಿದ್ದಾರೆ.

ತೃತೀಯ ಲಿಂಗಿಗಳು ಎಂದರೆ ಬೀದಿಯಲ್ಲಿ ಭಿಕ್ಷೆ ಬೇಡುವವರು ಎಂಬ ಭಾವನೆ ಜನರಲ್ಲಿದೆ. ಇದನ್ನು ಬದಲಿಸಬೇಕು ಮತ್ತು ನಮ್ಮಿಂದಾದ ಸಹಾಯವನ್ನು ಅಗತ್ಯವುಳ್ಳವರಿಗೆ ನೀಡಬೇಕು ಎಂಬ ಉದ್ಧೇಶದಿಂದ ಇಂತಹ ಯೋಜನೆಯನ್ನು ಕೈಗೆತ್ತಿಕೊಂಡಿದ್ದೆವು. ಆದರೆ ಲಾಕ್ಡೌನ್ ಕಾರಣದಿಂದ ಸ್ವಂತ ಉದ್ಯೋಗಕ್ಕೆ ಹೋಗಲೂ, ದಾನಿಗಳಿಂದ ಹಣ ಸಂಗ್ರಹಿಸಲೂ ಸಾಧ್ಯವಾಗಿಲ್ಲ. ಇದರಿಂದಾಗಿ ಸಂಸ್ಥೆ ಆರಂಭಿಸಿ ನಾಲ್ಕು ತಿಂಗಳು ಪೂರ್ಣಗೊಳ್ಳುತ್ತಿರುವ ಹೊತ್ತಲ್ಲೇ ಸಂಕಷ್ಟಕ್ಕೆ ಒಳಗಾಗಿದೆ ಎಂದು ಅವರು ಹೇಳುತ್ತಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು