ಟೆಕ್ಸಾಸ್(26-10-2020): ಮಗುವಿನ ಮೂರನೇ ವರ್ಷದ ಜನ್ಮದಿನಾಚರಣೆಯ ಸಂಭ್ರಮದ ದಿನ. ಆಚರಣೆ ಮುಗಿದ ಬಳಿಕ ನೆಂಟರೆಲ್ಲರೂ ಒಂದೆಡೆ ಸೇರಿ ಇಸ್ಪೀಟು ಆಡುತ್ತಿದ್ದರು. ಮಗು ಮನೆಯ ಬೇರೊಂದು ಭಾಗದಲ್ಲಿತ್ತು. ಇದ್ದಕ್ಕಿದ್ದಂತೆ ಗುಂಡು ಸಿಡಿದ ಸದ್ದು ಕೇಳಿ ಬಂತು. ಸದ್ದು ಕೇಳಿದ ಕಡೆ ಧಾವಿಸಿದಾಗ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತ್ತು.
ಈ ಘಟನೆ ನಡೆದಿರುವುದು ಅಮೇರಿಕಾ ಸಂಯುಕ್ತ ಸಂಸ್ಥಾನದ ಟೆಕ್ಸಾಸಿನಲ್ಲಿ. ಜನ್ಮದಿನಾಚರಣೆಯಲ್ಲಿ ಭಾಗವಹಿಸಲು ಮನೆಗೆ ಬಂದಿರುವ ಓರ್ವ ನೆಂಟನ ಬಂದೂಕು ಈ ದುರಂತಕ್ಕೆ ಕಾರಣವಾಗಿದೆ. ಅತನ ಜೇಬಿನಿಂದ ಆತನರಿಯದೇ ಬಿದ್ದ ಬಂದೂಕನ್ನು ಮಗು ಎತ್ತಿಕೊಂಡು ಅಡುತ್ತಿತ್ತು.
ಅಲ್ಲಿ ಇಂತಹ ಘಟನೆಗಳು ನಡೆಯುವುದು ಇದು ಮೊದಲನೆಯ ಸಲವೇನೂ ಅಲ್ಲ. ಬರೇ ಈ ಒಂದು ವರ್ಷದಲ್ಲೇ ಸುಮಾರು 229 ಮಕ್ಕಳಿಗೆ ಈ ರೀತಿ ಆಕಸ್ಮಿಕವಾಗಿ ಗುಂಡು ತಾಗಿದೆ. ಅದರಲ್ಲಿ 97 ಮಕ್ಕಳು ಬಲಿಯಾಗಿದ್ದಾರೆ.