ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಕಿರುಕುಳ| ಮೂವರು ಸೇನಾ ಸಿಬ್ಬಂದಿಗಳು ಅರೆಸ್ಟ್

solidrse
Share on facebook
Share on twitter
Share on linkedin
Share on whatsapp
Share on telegram
Share on email
Share on print

ಶ್ರೀನಗರ(17-02-2021): ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಬಾಲಕಿಯನ್ನು ಅಪಹರಿಸಿ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೂವರು ಸೇನಾ ಸೈನಿಕರನ್ನು ಬಂಧಿಸಿದ್ದಾರೆ.

ಬಂಡಿಪೋರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಮಲಿಕ್ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದು, ಪ್ರಕರಣದ “ಸೂಕ್ಷ್ಮ ಸ್ವರೂಪ” ವನ್ನು ಪರಿಗಣಿಸಿ ಮೂವರು ಸೈನಿಕರ ವಿರುದ್ಧ  ಸೆಕ್ಸನ್ 341, 363 (ಅಪಹರಣ) ಮತ್ತು 511 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಅಜಾಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಸಂತ್ರಸ್ತೆ ಅಪ್ರಪ್ತೆಯಾಗಿದ್ದಾರೆ.  ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಎಸ್‌ಎಸ್‌ಪಿ ಮಲಿಕ್ ದಿ ವೈರ್‌ಗೆ ತಿಳಿಸಿದ್ದಾರೆ.

ಆರೋಪಿಗಳನ್ನು ಸುಬೇದಾರ್ ಹರ್ಬಚನ್ ಸಿಂಗ್, ನಾಯಕ್ ಅಮಿತ್ ತಹಕೋರ್ ಮತ್ತು ಹವಾಲ್ದಾರ್ ಮಂಜೂರ್ ಎಂದು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ಬಂಡಿಪೋರಾ ಜಿಲ್ಲೆಗಳ ಸಫಾಪೋರಾ ಪ್ರದೇಶದಿಂದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದರು.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು