ತೈಲ ಬೆಲೆಯಲ್ಲಿ ನಿರಂತರ ಏರಿಕೆ | ಸರಕಾರಕ್ಕೆ ಮುನ್ನೆಚ್ಚರಿಕೆ ನೀಡಿದ ರಿಸರ್ವ್ ಬ್ಯಾಂಕ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ನಿರಂತರವಾಗಿ ಏರುತ್ತಿರುವ ತೈಲ ಬೆಲೆಯ ವಿಚಾರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸರಕಾರಕ್ಕೆ ಮುನ್ನೆಚ್ಚರಿಕೆ ನೀಡಿದೆ. ಕೇಂದ್ರ ಮತ್ರು ರಾಜ್ಯ ಸರಕಾರಗಳು ತೈಲ ಬೆಲೆಯೇರಿಕೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಅದು ಆಗ್ರಹಿಸಿದೆ.

ಕೋವಿಡ್ ಹಿನ್ನೆಲೆಯಲ್ಲಿ ಜನರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಇದು ಹಣದುಬ್ಬರಕ್ಕೆ ಕಾರಣವಾಗುವುದು. ಜೊತೆಗೆ ತೈಲ ಬೆಲೆಯೂ ನಿರಂತರವಾಗಿ ಏರುತ್ತಿದ್ದರೆ, ಹಣದುಬ್ಬರದ ವೇಗವು ಇನ್ನಷ್ಟು ಹೆಚ್ಚಾಗಬಹುದೆಂದು ರಿಸರ್ವ್ ಬ್ಯಾಂಕ್ ಮುನ್ನೆಚ್ಚರಿಕೆ ನೀಡಿದೆ. ಅಲ್ಲದೇ ಖರ್ಚುವೆಚ್ಚಗಳೂ ಜಾಸ್ತಿಯಾಗಬಹುದೆಂದು ಅದು ಹೇಳಿದೆ.

ತೈಲ ಬೆಲೆ ಇಳಿಕೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೂಕ್ತ ಕೈಗೊಳ್ಳಬೇಕೆಂದು ಆಗ್ರಹಿಸಿದೆ. ಆಮದು ಮಾಡಲಾದ ತೈಲದ ಮೇಲಿನ ಅಬಕಾರಿ ಸುಂಕ (Excise duty) ಮತ್ತು ಮೇಲ್ತೆರಿಗೆ(ಸೆಸ್) ಗಳನ್ನು ಕೇಂದ್ರ ಸರಕಾರವು ಕಡಿಮೆ ಮಾಡಬೇಕು. ಅದೇ ರೀತಿ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಯನ್ನು ಆಯಾ ರಾಜ್ಯ ಸರಕಾರಗಳು ಕಡಿತ ಗೊಳಿಸಬೇಕೆಂದು ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು