ಗೂಗಲ್ ಮ್ಯಾಪ್ ನೋಡಿ ಕಳ್ಳತನ| ಬೀಗ ಹಾಕಿರುವ ಮನೆಗಳೇ ಇವರ ಟಾರ್ಗೆಟ್

arrested
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಳಗಾವಿ (27-10-2020: ಗೂಗಲ್‌ ಮ್ಯಾಪ್‌ ಬಳಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಕೊಲ್ಲಾಪುರ ಜಿಲ್ಲೆಯಇಸ್ಪುರಲಿ ಗ್ರಾಮದ ಪ್ರಶಾಂತ ಕಾಶೀನಾಥ ಕರೋಶಿ, ಧಾಮಣೆ ಗ್ರಾಮದ ಅವಿನಾಶ ಶಿವಾಜಿ ಬಂಧಿತರು. ಇವರಿಂದ 28 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ಮೂಲದ ಈ ಕಳ್ಳರು ಗೂಗಲ್‌ ಮ್ಯಾಪ್‌ ಮೂಲಕ ಮನೆಗಳಿಗೆ ಸ್ಕೆಚ್‌ ಹಾಕುತ್ತಿದ್ದರು. ಬಳಿಕ ಬಂದು ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡುತ್ತಿದ್ದರು.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು