ಬಿಹಾರದಲ್ಲಿ ರಿಸಲ್ಟ್ ನ ಅಂಕಿಗಳು ನಿಜವಾಗಿ ಗೆದ್ದವರು ಯಾರೆಂದು ಹೇಳುವುದಿಲ್ಲ! ಫಲಿತಾಂಶಗಳ ಸುತ್ತ ಒಂದು ನೋಟ…

bihar election result
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(11-11-2020): ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಮಂಗಳವಾರ ಆರಂಭವಾಗಿ ಮತಎಣಿಕೆ ಬುಧವಾರ ಮುಂಜಾನೆ ಪೂರ್ಣಗೊಂಡಿದೆ.

ಅತ್ಯಂತ ನಿಕಟ ಸ್ಪರ್ಧೆಯಲ್ಲಿ, ಯಾವಾಗಲೂ ಮುನ್ನಡೆ ಸಾಧಿಸುತ್ತಿದ್ದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್(ಎನ್ ಡಿಎ) 125 ಸ್ಥಾನಗಳೊಂದಿಗೆ ವಿಜೇತರಾಗಿ ಹೊರಹೊಮ್ಮಿದೆ. ಈ ಪೈಕಿ ಬಿಜೆಪಿ 74 ಸ್ಥಾನಗಳನ್ನು ಗೆದ್ದಿದೆ, ನಿತೀಶ್ ಕುಮಾರ್ ಅವರ ಜನತಾದಳ (ಯುನೈಟೆಡ್) 43 ಸ್ಥಾನ, ದಿ ವಿಕಾಸ್ಶೀಲ್ ಇನ್ಸಾನ್ ಪಾರ್ಟಿ 4 ಮತ್ತು ಹಿಂದೂಸ್ತಾನ್ ಅವಾಮ್ ಪಾರ್ಟಿ (ಜಾತ್ಯತೀತ) 4 ಸ್ಥಾನಗಳಲ್ಲಿ ಗೆಲುವನ್ನು ದಾಖಲಿಸಿದೆ.

ಎನ್ ಡಿಎ ಬಿಹಾರದಲ್ಲಿ ಸರಕಾರ ರಚನೆಗೆ ಬೇಕಾದ ಬಹುಮತವನ್ನು ಪಡೆದುಕೊಂಡಿದೆ. ಸರ್ಕಾರ ರಚಿಸಲು ಅಗತ್ಯವಾದ 122 ಅಂಕಗಳ ಬಹುಮತವನ್ನು ಪಡೆದುಕೊಂಡಿದೆ.

ಆರ್‌ಜೆಡಿ ಮತ್ತು ಅದರ ಮಿತ್ರಪಕ್ಷಗಳು 110 ಸ್ಥಾನಗಳನ್ನು ಗೆದ್ದಿವೆ. ಆರ್‌ಜೆಡಿ 75 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಸ್ಥಾನ ಪಡೆದರೆ,. ಕಾಂಗ್ರೆಸ್ ಕೇವಲ 19 ಸ್ಥಾನಗಳನ್ನು ಗೆದ್ದುಕೊಂಡು ಭಾರೀ ಹಿನ್ನೆಡೆಗೆ ಕಾರಣವಾಯಿತು. ಎಡ ಪಕ್ಷಗಳು ಸ್ಪರ್ಧಿಸಿದ 29 ಸ್ಥಾನಗಳಲ್ಲಿ, ಅವರು 16 ರಲ್ಲಿ ಗೆದ್ದರು, ಸಿಪಿಐ (ಎಂಎಲ್-ಲಿಬರೇಶನ್) ಅವುಗಳಲ್ಲಿ 12 ಸ್ಥಾನಗಳನ್ನು ಗೆದ್ದಿದೆ.

ಇನ್ನು ಮತಗಳ ಪಾಲನ್ನು ಗಮನಿಸಿದಾಗ ಬಿಜೆಪಿಯ ಮತ ಪಾಲು 19.5%,, ಜೆಡಿಯು 15.4%,, ಆರ್‌ಜೆಡಿ 23.1% ಮತ್ತು ಕಾಂಗ್ರೆಸ್ 9.5% ಪಡೆದುಕೊಂಡಿದೆ.

ಒಟ್ಟಾರೆ ಮತದ ಪಾಲುಗಳು ಮತ್ತು ಪಕ್ಷಗಳಿಗೆ ಸಿಕ್ಕಿದ ಸೀಟ್ ಗಳನ್ನು ನೋಡಿದ್ರೆ ಆರ್ ಜೆಡಿ 75 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದೆ ಮತ್ತು ಸರಾಸರಿ ಮತಗಳಲ್ಲಿ ಕೂಡ 23.1% ಮತವನ್ನು ಆರ್ ಜೆಡಿ ಪಡೆದುಕೊಂಡಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು