ಕೋಲಾರ: ಮದುವೆ ಮಂಟಪದಲ್ಲಿ ಕುಸಿದು ಬಿದ್ದು ಮದುಮಗಳು ಮೃತಪಟ್ಟ ಘಟನೆ ಕೋಲಾರದ ಶ್ರೀನಿವಾಸಪುರದಲ್ಲಿ ಶುಕ್ರವಾರ ನಡೆದಿದೆ.
ಮದುವೆಯ ಆರತಕ್ಷತೆಯ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಚೈತ್ರಾ (26) ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದು, ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯನ್ನು ಪರೀಕ್ಷಿಸಿದಂತ ವೈದ್ಯರು ಚೈತ್ರರ ಮೆದುಳು ನಿಷ್ಕ್ರೀಯವಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭ ಪೋಷಕರನ್ನು ಸಮಾಧಾನಿಸಿದಂತ ವೈದ್ಯರೂ ಚೈತ್ರ ಸಾವನ್ನಪ್ಪಿದರೂ ಬೇರೆಯವರ ಬಾಳಿಗೆ ಬೆಳಕಾಗುವಂತೆ ಅಂಗಾಂಗ ದಾನ ಮಾಡಲು ಮನವೊಲಿಕೆ ಮಾಡಿದ್ದಾರೆ.
ಮಗಳ ಬ್ರೈನ್ ಡೆಡ್ ಆಗಿರುವ ಬಗ್ಗೆ ತಿಳಿದ ಪೋಷಕರು ಮದುಮಗಳ ಅಂಗಾಂಗವನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.