ರಿಯಾದ್: ‘ಅವ್ವನ ಪಾದದಡಿ ಸ್ವರ್ಗವಿದೆ‘ ಎನ್ನುವುದು ಬಹಳ ಜನಪ್ರಿಯವಾದ ಪ್ರವಾದಿ ನುಡಿಯಾಗಿದೆ. ತಾಯಿಗೆ ಕೊಡಬೇಕಾದ ಸ್ಥಾನಮಾನವನ್ನು ಇದು ಸೂಚಿಸುತ್ತದೆ.
ಹೆತ್ತು, ಹೊತ್ತು, ಲಾಲನೆ–ಪಾಲನೆ ಮಾಡಿ, ಮುದ್ದಿಸುತ್ತಾ ಮಕ್ಕಳನ್ನು ಬೆಳೆಸುತ್ತಾರೆ. ಆದರೆ ದೊಡ್ಡವರಾದ ಮೇಲೆ, ಹೆತ್ತವರೊಂದಿಗೆ ಸರಿಯಾಗಿ ಮಾತನಾಡಲೂ ಮನಸ್ಸು ಮಾಡದ ಎಷ್ಟೋ ಮಕ್ಕಳಿದ್ದಾರೆ. ಇವುಗಳಿಗಿಂತ ಭಿನ್ನವಾಗಿ ಸೌದಿ ಸೈನಿಕನೊಬ್ಬ ತನ್ನ ತಾಯಿಯ ಪಾದಗಳಗೆ ಮುತ್ತಿಕ್ಕುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲಾಗಿದ್ದು, ಜಗತ್ತಿನಾದ್ಯಂತ ಜನರ ಮೆಚ್ಚುಗೆ ಗಳಿಸಿದೆ.
ಧೀರ್ಘ ಸಮಯದವರೆಗೆ ಸೈನಿಕ ಸೇವೆಯಲ್ಲಿದ್ದು, ಈ ನಡುವೆ ಸಿಕ್ಕಿದ ಅಲ್ಪಾವಧಿಯ ರಜೆಯಲ್ಲಿ ಸೈನಿಕನು ಊರಿಗೆ ಮರಳಿದ್ದ. ಈ ವೇಳೆಯಲ್ಲಿ ತಾಯಿಯ ಕಡೆಗೆ ಓಡೋಡಿ ಬಂದು ಸಲ್ಯೂಟ್ ಹೊಡೆದು, ಬಳಿಕ ತಾಯಿಯನ್ನು ಆಲಂಗಿಸಿ, ಧೀರ್ಘ ಕಾಲ ಅಗಲಿ ನಿಂತಿದ್ದ ನೋವನ್ನು ತೀರಿಸಿಕೊಳ್ಳುತ್ತಾನೆ.
ಬಳಿಕ ಆತ ತನ್ನ ತಾಯಿಯ ಪಾದಗಳನ್ನು ಹಿಡಿದು ಮನಸಾರೆ ಚುಂಬಿಸುತ್ತಾನೆ. ಈ ಹೃದಯಸ್ಪರ್ಶಿ ವೀಡಿಯೋ ಬಲುಬೇಗ ವೈರಲಾಗಿದ್ದಲ್ಲದೇ, ಇಂದಿನ ತಲೆಮಾರಿಗೆ ಮಾದರಿಯಾಗಿದೆ ಎಂಬಂತಹ ಸಾಕಷ್ಟು ಕಮೆಂಟುಗಳನ್ನೂ ಪಡೆದುಕೊಂಡಿದೆ.
ವೀಡಿಯೋ ಇಲ್ಲಿದೆ: