ತಾಯಿಗೆ ಕೋವಿಡ್ ನೆಗೆಟಿವ್; ಜನಿಸಿದ ಮಗುವಿಗೆ ಪೊಸಿಟಿವ್! ವೈದ್ಯಲೋಕಕ್ಕೆ ಸವಾಲಾದ ಪ್ರಕರಣ…

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಾರಣಾಸಿ: ಕೋವಿಡ್ ನೆಗೆಟಿವ್ ಇರುವ ತಾಯಿ, ಕೋವಿಡ್ ಪೊಸಿಟಿವ್ ಇರುವ ಮಗುವಿಗೆ ಜನ್ಮ ನೀಡಿದ ಅಚ್ಚರಿಯ ಘಟನೆಯೊಂದು ವರದಿಯಾಗಿದೆ. ಇದು ಕೋವಿಡ್ ವಿಚಾರದಲ್ಲಿ ವೈದ್ಯಲೋಕಕ್ಕೆ ಸವಾಲಾದ ಪ್ರಕರಣವೆನ್ನಲಾಗಿದೆ.

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಎಸ್ಎಸ್ ಆಸ್ಪತ್ರೆಯಲ್ಲಿ ಪ್ರಕರಣ ಜರುಗಿರುವುದು. ಇಪ್ಪತ್ತಾರು ವರ್ಷದ ತುಂಬು ಗರ್ಭಿಣಿ ಯುವತಿ ಮೇ 24 ರಂದು  ಆಸ್ಪತ್ರೆಗೆ ಸೇರಿದ್ದರು. ಮರುದಿನ ಒಂದು ಹೆಣ್ಣು ಮಗುವಿಗೆ ಜನ್ಮವನ್ನೂ ನೀಡಿದ್ದರು. ಮಗುವನ್ನು ಆರ್‍ ಟಿಪಿಸಿಆರ್ ಪರೀಕ್ಷೆಗೊಳಪಡಿಸಿದಾಗ ಮಗುವಿಗೆ ಕೋವಿಡ್ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಹೆರಿಗೆಗೆ ಮೊದಲು ಯುವತಿ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ, ನೆಗೆಟಿವ್ ಫಲಿತಾಂಶ ಬಂದಿತ್ತು. ಆದರೂ ಜನಿಸಿದ ತಕ್ಷಣವೇ ಮಗುವನ್ನು ಪರೀಕ್ಷೆ ನಡೆಸಿದಾಗ ಮಗುವಿಗೆ ಕೋವಿಡ್ ಪೊಸಿಟಿವ್ ಆಗಿತ್ತು. ಇದು ಹೇಗೆ ಸಾಧ್ಯವಾಯಿತು ಎಂದು ಅಲ್ಲಿನ ವೈದ್ಯರು ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಎರಡು ದಿನಗಳ ಬಳಿಕ ಮತ್ತೊಮ್ಮೆ ತಾಯಿ ಮತ್ತು ಮಗುವನ್ನು ಕೋವಿಡ್ ಪರೀಕ್ಷೆ ನಡೆಸಲಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ. ಆಗ ನಿಖರ ಫಲಿತಾಂಶ ಸಿಗಬಹುದೆಂದು ಅಂದಾಜಿಸಲಾಗುತ್ತಿದೆ.

ಆರ್ ಟಿಪಿಸಿಆರ್ ಪರೀಕ್ಷೆಯ ಎಪ್ಪತ್ತು ಶೇಕಡಾ ನಿಖರತೆಯನ್ನು ಹೊಂದಿರುತ್ತದೆ. ನೂರು ಶೇಕಡಾ ಅಲ್ಲ. ಹಾಗಾಗಿಯೇ ತಾಯಿ ಪೊಸಿಟಿವ್ ಇದ್ದಿರಬೇಕು. ಆದರೆ ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ಅದನ್ನು ಪತ್ತೆಹಚ್ಚಲು ಸಾಧ್ಯವಾಗದೇ ಹೋಗಿರಬಹುದು. ಕೆಲವು ದಿನಗಳ ಬಳಿಕ ಇಬ್ಬರನ್ನೂ ಇನ್ನೊಮ್ಮೆ ಪರೀಕ್ಷೆ ನಡೆಸಲಿದ್ದೇವೆ ಎಂದು ಎಸ್ಎಸ್ ಆಸ್ಪತ್ರೆಯ ಹಿರಿಯ ವೈದ್ಯರಾಗಿರುವ ಕೆ. ಕೆ. ಗುಪ್ತಾ ಹೇಳುತ್ತಾರೆ.

ಮಗುವಿಗೆ ಸೋಂಕು ತಗುಲಿದೆಯಾದರೂ, ತಾಯಿಗಾಗಲೀ, ಮಗುವಿಗಾಗಲೀ ಇನ್ನಾವುದೇ ಗಂಭೀರ ಸಮಸ್ಯೆಗಳು ಕಂಡು ಬಂದಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು