ಸರಕಾರಿ ಕಚೇರಿಯಲ್ಲೇ ಕಿಸ್ಸಿಂಗ್| ತಹಶೀಲ್ದಾರ್ ಕಾಮ ಪುರಾಣ ವೈರಲ್

thasildar
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಪ್ಪಳ (29-11-2020): ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಆಫೀಸ್ ನಲ್ಲಿ ಕಿಸ್ ಮಾಡಿ ಸುದ್ದಿಯಾಗಿದ್ದ ಕುಷ್ಟಗಿ ತಹಶೀಲ್ದಾರ್‌ ಆಗಿದ್ದ ಕೆ.ಎಂ. ಗುರುಬಸವರಾಜ ಅವರನ್ನು ಸರ್ಕಾರ ಅಮಾನತು ಮಾಡಿದೆ.

ತಹಶೀಲ್ದಾರ್‌ ಗುರುಬಸವರಾಜು ಅಸಭ್ಯ ವರ್ತನೆಯ ವಿಡಿಯೋ ಈ ಮೊದಲು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗಿತ್ತು.

ಬಳಿಕ ಮಹಿಳಾ ಸಿಬ್ಬಂದಿ ಬಸವರಾಜ್ ವಿರುದ್ಧ ದೂರು ನೀಡಿದ್ದರು. ಅಂದಿನ ಜಿಲ್ಲಾಧಿಕಾರಿ ಅವರು ಈ ಕುರಿತು ವಿಚಾರಣೆ ಕಾಯ್ದಿರಿಸಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಪುರಸಭೆ ತಹಶೀಲ್ದಾರ್‌ ಹುದ್ದೆಗೆ ಗುರುಬಸವರಾಜ ಅವರನ್ನು ವರ್ಗಾವಣೆ ಮಾಡಿದ್ದರು. ಆದರೆ ಇದೀಗ ಅವರನ್ನು ಅಮಾನತು ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ನಾಗರಾಜು ಎಸ್.ಆದೇಶ ಹೊರಡಿಸಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು