ತಾರಕಕ್ಕೇರಿದ ಟ್ವಿಟರ್ – ಒಕ್ಕೂಟ ಸರಕಾರದ ನಡುವಿನ ತಿಕ್ಕಾಟ; ವಾಗ್ಯುದ್ಧ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಮಾಹಿತಿ ತಂತ್ರಜ್ಞಾನ ಸಂಬಂಧಿಸಿ ಒಕ್ಕೂಟ ಸರಕಾರವು ಹೊರಡಿಸಿದ ನೂತನ ಮಾರ್ಗಸೂಚಿ ವಿವಾದಗಳು ದಿನೇ ದಿನೇ ಕಾವು ಪಡೆಯುತ್ತಿದೆ. ಮಾರ್ಗಸೂಚಿಗಳನ್ನು ಟೀಕಿಸುವಲ್ಲಿ ಮುಂಚೂಣಿಯಲ್ಲಿರುವ ಟ್ವಿಟರ್ ಮತ್ತು ಒಕ್ಕೂಟ ಸರಕಾರಗಳು ಇದೀಗ ಪರಸ್ಪರ ವಾಗ್ಯುದ್ಧದಲ್ಲಿ ತೊಡಗಿಕೊಂಡಿದೆ.

ಟೂಲ್ ಕಿಟ್ ವಿಚಾರದಲ್ಲಿ ಭಾರತ ಒಕ್ಕೂಟ ಸರಕಾರದ ನಡೆಯಿಂದಾಗಿ  ಟ್ವಿಟರಿನ ಭಾರತೀಯ ಉದ್ಯೋಗಿಗಳ ಭವಿಷ್ಯದ ಬಗೆಗೆ ತಾನು ಕಳವಳಗೊಂಡಿರುವೆನೆಂದು ಟ್ವಿಟರ್ ಹೇಳಿತ್ತು. ಇದಕ್ಕೆ ಸರಕಾರವು ಖಾರವಾದ ಪ್ರತಿಕ್ರಿಯೆ ನೀಡಿದ್ದು, ಇದು ಟ್ವಟರ್ಸರಕಾರದ ನಡುವಿನ ತೀವ್ರ ಸಂಘರ್ಷವನ್ನು ಪ್ರತಿಫಲಿಸುತ್ತಿದೆ.

ಟ್ವಿಟರ್ ಎಂಬುದು ಒಂದು ಸಾಮಾಜಿಕ ಜಾಲತಾಣ ಸಂಸ್ಥೆ ಮಾತ್ರ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಆದೇಶ ನೀಡಲು ಅದಕ್ಕೆ ಸಾಧ್ಯವಿಲ್ಲಎಂದು ಸರಕಾರವು ಟ್ವಿಟರಿಗೆ ಪ್ರತಿಕ್ರಿಯೆ ನೀಡಿದೆ. ಟ್ವಿಟರ್ ವರ್ತನೆಯನ್ನು ಖಂಡಿಸಿದ ಸರಕಾರ, ಟ್ವಿಟರ್ ಕಾನೂನು ವ್ಯವಸ್ಥೆಗೆ ರಂಧ್ರ ಕೊರೆಯಲು ನೋಡುತ್ತಿದೆ. ದೇಶಕ್ಕೆ ಕೆಟ್ಟ ಹೆಸರು ತರಲು ನೋಡುತ್ತಿದೆ. ನೂತನ ಮಾರ್ಗಸೂಚಿಗಳನ್ನು ಅದು ಪಾಲಿಸಲೇಬೇಕಾಗುತ್ತದೆ ಎಂದು ತಾಕೀತು ಮಾಡಿದೆ.

ಸರಕಾರದ ನೂತನ ಮಾರ್ಗಸೂಚಿಗಳನ್ವಯ ಎಲ್ಲಾ ಸಾಮಾಜಿಕ ಜಾಲತಾಣ ಸಂಸ್ಥೆಗಳು ಮತ್ತು ಒಟಿಟಿ ವೇದಿಕೆಗಳು ತಮ್ಮಲ್ಲಿ ಪ್ರಕಟಿಸುವ ವಿಚಾರಗಳ ಬಗೆಗಿನ ದೂರುಗಳನ್ನು ಪರಿಶೀಲಿಸಲು ಅಧಿಕಾರಿಗಳನ್ನು ನೇಮಿಸಬೇಕು. ಕಾನೂನಿಗೆ ವಿರುದ್ಧವಾದ ಅಂಶಗಳು ಕಂಡು ಬಂದರೆ, ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮತ್ತು ದೂರುಗಳನ್ನು ಪರಿಶೀಲಿಸುವ ಅಧಿಕಾರಿಗಳು ಸಮಯಸಮಯಕ್ಕೆ ಸರಕಾರವು ಕೊಡುವ ಸೂಚನೆಗಳನ್ನು ಪಾಲಿಸುತ್ತಿರಬೇಕು.

ವಿವಾದಿತ ಮಾರ್ಗಸೂಚಿಗಳನ್ನು ಪಾಲಿಸಲು ಗೂಗಲ್, ಫೇಸ್ಬುಕ್ ಸೇರಿದಂತೆ ಹೆಚ್ವಿನ ಸಂಸ್ಥೆಗಳು ಒಪ್ಪಿಕೊಂಡಿವೆ. ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಅಂತಿಮ ಗಡುವು ಮುಗಿದರೂ ಕೂಡಾ, ಒಂದನ್ನು ಹೊರತು ಪಡಿಸಿ, ಯಾವುದೇ ಸಂಸ್ಥೆಗಳು ಇನ್ನೂ ಅವುಗಳನ್ನು ಜಾರಿ ಮಾಡಿಲ್ಲ.

ಅದೇ ವೇಳೆ ವಾಟ್ಸಪ್ ಸಂಸ್ಥೆಯು ಸರಕಾರದ ನೂತನ ನಿಯಮಗಳ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಇಳಿದಿದೆ. ದೆಹಲಿ ಹೈಕೋರ್ಟಿನಲ್ಲಿ ಅದು ಪ್ರಕರಣ ದಾಖಲಿಸಿದೆ. ಟ್ವಿಟರ್ ಸಂಸ್ಥೆಯು, ‘ಇದು ವ್ಯಕ್ತಿಯ ಖಾಸಗಿತನದ ಹಕ್ಕು ಮತ್ತು ಅಭಿವ್ಯಕ್ತಿಸ್ವಾತಂತ್ರ್ಯದ ಉಲ್ಲಂಘನೆಯೆಂದು ಬಹಿರಂಗ ವಿಮರ್ಶೆ ಮಾಡುತ್ತಿದೆ. ಸರಕಾರದ ಪಾರದರ್ಶಕ ಕಾನೂನುಗಳನ್ನು ಅನುಸರಿಸುತ್ತೇವೆ. ಜನರ ಹಿತಾಸಕ್ತಿಗಳಿಗೆ ಬದ್ಧರಾಗಿರುತ್ತೇವೆ ಎಂದು ಹೇಳಿದ ಟ್ವಿಟರ್, ತನ್ನ ಕಛೇರಿಗಳಿಗೆ ಅಧಿಕಾರಿಗಳನ್ನು ಕಳುಹಿಸಿದಂತಹಾ ಸರಕಾರದ ಬೆದರಿಕೆ ತಂತ್ರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು