ತನ್ನ ರಾಷ್ಟ್ರಗೀತೆಯ ಒಂದು ಪದವನ್ನು ಬದಲಿಸಬಿಟ್ಟ ಆಸ್ಟ್ರೇಲಿಯಾ..

Share on facebook
Share on twitter
Share on linkedin
Share on whatsapp
Share on telegram
Share on email
Share on print

ಸಿಡ್ನಿ(1-1-2021): ಅಸ್ಟ್ರೇಲಿಯಾ ದೇಶವು ತನ್ನ ರಾಷ್ಟ್ರಗೀತೆಯಲ್ಲಿದ್ದ ಒಂದು ಪದವನ್ನು ತೆಗೆದು ಹಾಕಿ ಅದರ ಸ್ಥಾನಕ್ಕೆ ಇನ್ನೊಂದು ಪದವನ್ನು ತಂದಿದೆ. ‘ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್’ ಎಂಬ ರಾಷ್ಟ್ರಗೀತೆಯೇ ಬದಲಾವಣೆಗೆ ಒಳಗಾಗಿರುವುದು.

ರಾಷ್ಟ್ರಗೀತೆಯ ಎರಡನೇ ಸಾಲಿನ for we are young and free ಎನ್ನುವುದನ್ನು for we are one and free ಎಂಬುದಾಗಿ ಬದಲಿಸಿದೆ. ಆಧುನಿಕ ಆಸ್ಟ್ರೇಲಿಯಾದ ಬಗ್ಗೆ ವರ್ಣಿಸಿ ಆಸ್ಟ್ರೇಲಿಯಾವು ಒಂದು “ಯುವ ದೇಶ”ವಾಗಿದೆಯೆಂದು ಕವನದಲ್ಲಿ ಹೇಳಲಾಗಿತ್ತು. ಆದರೆ, ಸುಧೀರ್ಘ ಅರುವತ್ತು ಸಾವಿರ ವರ್ಷಗಳ ಆಸ್ಟ್ರೇಲಿಯಾದ ಚರಿತ್ರೆಯನ್ನು ಇದು ಗೌಣವಾಗಿಸುತ್ತದೆ ಎಂಬ ಕಾರಣವನ್ನು ಮುಂದಿಟ್ಟು, young ಪದದ ಬದಲು one ಪದವನ್ನು ತರಲಾಗಿದೆ.

ಆಸ್ಟ್ರೇಲಿಯಾದ ಸಂಸ್ಕೃತಿ, ಇತಿಹಾಸವನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ರಾಷ್ಟ್ರಗೀತೆಯಲ್ಲಿ ಈ ಮಹತ್ವದ ಬದಲಾವಣೆ ತರಲಾಗಿದೆ ಎಂದು ಪ್ರಧಾನಮಂತ್ರಿ ಸ್ಕೋಟ್ ಮೋರಿಸನ್ ಹೇಳಿದ್ದಾರೆ. ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ದೇಶವೆಂಬ ಅಭಿಮಾನ ಮತ್ತು ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಪೂರ್ವಿಕರು ಹಾಕಿದ ಅಡಿಪಾಯವನ್ನು ರಾಷ್ಟ್ರಗೀತೆಯು ಎತ್ತಿಹಿಡಿಯುತ್ತದೆಯೆಂದೂ ಅವರು ಹೇಳಿದರು.

1878 ರಲ್ಲಿ ಪೀಟರ್ ಡೋಡ್ಡ್ಸ್ ಮೆಕ್ಕಾರ್ಮಿಕ್ ಎಂಬಾತ ಈ ಕವನವನ್ನು ರಚಿಸಿದ್ದ. ಆಗಲೇ ಇದರಲ್ಲಿದ್ದ young ಪದದ ಬಗ್ಗೆ ಅಪಸ್ವರವೆದ್ದಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು