ತನ್ನ ಇನ್ನೊಬ್ಬ ಮಗನ ಸಾಧನೆ ಬಗ್ಗೆ ಖುಷಿ ಹಂಚಿಕೊಂಡ ರೋಹಿತ್ ವೇಮುಲಾ ತಾಯಿ | ಜನರಿಗಾಗಿ ಮತ್ತು ಅವರ ಹಕ್ಕುಗಳಿಗಾಗಿ ನನ್ನ ಮಗನಿನ್ನು ನ್ಯಾಯಾಲಯದಲ್ಲಿ ಹೋರಾಡಲಿರುವನು : ರಾಧಿಕಾ ವೇಮುಲಾ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಹೈದರಾಬಾದ್(19-12-2020): ರೋಹಿತ್ ವೇಮುಲಾ ತಾಯಿ ರಾಧಿಕಾ ವೇಮುಲಾ ತನ್ನ ಇನ್ನೊಬ್ಬ ಮಗನ ಸಾಧನೆಯ ಬಗ್ಗೆ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ತನ್ನ ಮಗ ರಾಜಾ ವೇಮುಲನು ಇನ್ನು ಮುಂದೆ ಜನರಿಗಾಗಿ ಮತ್ತು ಜನರ ಹಕ್ಕುಗಳಿಗಾಗಿ ನ್ಯಾಯಾಲಯದಲ್ಲಿ ಹೋರಾಡಲಿದ್ದಾನೆ ಎಂದು ಹೇಳಿದ್ದಾರೆ.

ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಅಲ್ಲಿ ನಡೆಯುತ್ತಿದ್ದ ಜಾತಿ ತಾರತಮ್ಯದ ಕಾರಣದಿಂದ 2016 ರ ಜನವರಿ ಹದಿನೇಳನೇ ತಾರೀಕಿನಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂಬೇಡ್ಕರ್ ಸ್ಟುಡೆಂಟ್ ಅಸೋಸಿಯೇಷನ್ ಸದಸ್ಯನಾಗಿದ್ದ ರೋಹಿತ್, ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಹೋರಾಟಗಳಲ್ಲೂ ಸಕ್ರಿಯನಾಗಿದ್ದ.

ಇದೀಗ ರೋಹಿತ್ ಸಹೋದರ ರಾಜಾ ವೇಮುಲಾ ವಕೀಲನಾಗಿ ಎನ್ರೋಲ್ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಟ್ವಿಟರಿನಲ್ಲಿ ಹಂಚಿಕೊಂಡ ರಾಧಿಕಾ ವೇಮುಲಾ, “ರಾಜಾ ವೇಮುಲಾ, ನನ್ನ ಕಿರಿಯ ಮಗ, ಆತನೀಗ ಒಬ್ಬ ವಕೀಲ. ಇದು ರೋಹಿತ್ ವೇಮುಲಾ ಬಳಿಕದ ಐದು ವರ್ಷಗಳಲ್ಲಿ ನಮ್ಮ ಜೀವನದಲ್ಲಿ ಉಂಟಾದ ದೊಡ್ಡದೊಂದು ಬದಲಾವಣೆ. ಅಡ್ವಕೇಟ್ ರಾಜಾ ವೇಮುಲಾ, ಇನ್ನು ಜನರಿಗಾಗಿ ಮತ್ತು ಅವರ ಹಕ್ಕುಗಳಿಗಾಗಿ ನ್ಯಾಯಾಲಯದಲ್ಲಿ ಹೋರಾಡಲಿರುವನು. ಇದು ಈ ಸಮಾಜಕ್ಕೆ ನಾನು ಮರು ಪಾವತಿ ಮಾಡಿರುವಂಥದ್ದು. ಅವನನ್ನು ಆಶೀರ್ವದಿಸಿ. ಜೈ ಭೀಮ್.” ಎಂದು ಟ್ವೀಟಿಸಿದ್ದಾರೆ.

ರೋಹಿತ್ ವೇಮುಲಾನದು ಆತ್ಮಹತ್ಯೆ ಅಲ್ಲ; ಅದೊಂದು ವ್ಯವಸ್ಥಿತ ಕೊಲೆಯೆಂಬ ಧ್ವನಿ ಕೇಳಿಬಂದಿತ್ತು. ದೇಶಾದ್ಯಂತ ಆಕ್ರೋಶದ ಅಲೆಯನ್ನು ಸೃಷ್ಠಿಸಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು