ತನ್ನ ದೇಣಿಗೆಯನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕೊಡಲಾರೆ : ಕ್ರಿಕೆಟಿಗ ಪಾಟ್ ಕಮ್ಮಿನ್ಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕೋವಿಡ್ ವಿರುದ್ದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡಲು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವೆನೆಂದು ಹೇಳಿದ್ದ ಕ್ರಿಕೆಟಿಗ, ಪಾಟ್ ಕಮ್ಮಿನ್ಸ್ ತನ್ನ ನಿರ್ಧಾರವನ್ನು ಬದಲಿಸಿದ್ದಾರೆ.

ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡುತ್ತಿರುವ ಆಸ್ಟ್ರೇಲಿಯನ್ ವೇಗಿ ಬೌಲರ್, ಪಾಟ್ ಕಮ್ಮಿನ್ಸ್ ಕಳೆದ ವಾರವಷ್ಟೇ 50,000 ಯುಎಸ್ ಡಾಲರಿನ ದೇಣಿಗೆಯನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕೊಡುವುದಾಗಿ ಘೋಷಿಸಿದ್ದರು. ಹಣದಲ್ಲಿ ಆಕ್ಸಿಜನಿನಂತಹಾ ವೈದ್ಯಕೀಯ ಸೌಲಭ್ಯಗಳನ್ನು ಖರೀದಿಸಲು ಬಳಸಬೇಕೆಂದು ಭಾರತ ಸರಕಾರವನ್ನು ತನ್ನ ಟ್ವೀಟ್ ನಲ್ಲಿ ವಿನಂತಿಸಿಕೊಂಡಿದ್ದರು.

ಜೊತೆಗೆ ಇತರ ಐಪಿಎಲ್ ಆಟಗಾರರನ್ನೂ ಭಾರತಕ್ಕಾಗಿ ದೇಣಿಗೆ ಮಾಡಲು ಕೇಳಿಕೊಂಡಿದ್ದರು. ಇವರ ಕರೆಗೆ ಓಗೊಟ್ಟು ಆಸ್ಟ್ರೇಲಿಯನ್ ಕ್ರಿಕೆಟಿಗ ಬ್ರೆಟ್ ಲೀ, ದೆಹಲಿ ಕ್ಯಾಪಿಟಲ್ಸಿನ ಶಿಖರ್ ಧವನ್, ಸನ್ ರೈಸರ್ಸ್ ಹೈದರಾಬಾದಿನ ಶ್ರೀವತ್ಸ್ ಗೋಸ್ವಾಮಿ ಮೊದಲಾದ ಅನೇಕರು ದೇಣಿಗೆ ನೀಡಲು ಮುಂದೆ ಬಂದಿದ್ದರು.

ಇದೀಗ ತನ್ನ ನಿರ್ಧಾರವನ್ನು ಬದಲಿಸಿದ ಪಾಟ್ ಕಮ್ಮಿನ್ಸ್, ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಬದಲುಯುನಿಸೆಫ್ ಆಸ್ಟ್ರೇಲಿಯಾಮೂಲಕ ತನ್ನ ಹಣವನ್ನು ದೇಣಿಗೆ ಮಾಡುವುದಾಗಿ ಟ್ವೀಟಿಸಿದ್ದಾರೆ. ಭಾರತಕ್ಕೆ ಹಣ ನೀಡಲುಯುನಿಸೆಫ್ ಆಸ್ಟ್ರೇಲಿಯಾಮೂಲಕ ನೀಡಬೇಕೆಂದುಕ್ರಿಕೆಟ್ ಆಸ್ಟ್ರೇಲಿಯಾಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕಮ್ಮಿನ್ಸ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಇತರರನ್ನೂಯುನಿಸೆಫ್ ಆಸ್ಟ್ರೇಲಿಯಾಮೂಲಕ ದೇಣಿಗೆ ನೀಡಬೇಕೆಂದು ಟ್ವೀಟ್ ಮೂಲಕ ಪ್ರೇರೇಪಿಸಿದ್ದಾರೆ.

ಟ್ವೀಟಿಗೆ ಕಮೆಂಟ್ ಮಾಡಿದ ಹಲವರು, ‘ಯಾವುದೇ ಲೆಕ್ಕ ಪರಿಶೋಧನೆಯಿಲ್ಲದ ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಕೊಡದಿರುವುದು ಒಳ್ಳೆಯ ನಿರ್ಧಾರಎಂದು ಶ್ಲಾಘಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು