ತಂಗಿಯ ಗಂಡನ ರುಂಡ ಕತ್ತರಿಸಿ ಭೀಕರ ಹತ್ಯೆಗೈದ ಅಣ್ಣ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಭೂಪಾಲ್ : ತನ್ನ ಸಹೋದರಿ ಓಡಿ ಹೋಗಿ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಕೋಪಗೊಂಡ ಅಣ್ಣ ತಂಗಿಯ ಪತಿಯ ರುಂಡ ಕತ್ತರಿಸಿ ಆರಕ್ಷಕ ಠಾಣೆಗೆ ತಂದು ಶರಣಾಗಿರುವ ಭೀಕರ ಘಟನೆಗೆ ಮಧ್ಯಪ್ರದೇಶದ ಜಬುಲ್ಪುರ ಸಾಕ್ಷಿಯಾಗಿದೆ.

ಶಿವರಾಮ್ ಶುಕ್ಲಾ ಅಲಿಯಾಸ್ ಧೀರಜ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಮೃತನನ್ನು ವಿಜೇತ್ ಕಶ್ಯಪ್(32) ಎಂದು ಗುರುತಿಲಾಗಿದೆ.ಸಹೋದರಿ ಪ್ರೀತಿಸಿ ಮದುವೆಯಾಗಿದ್ದಾಳೆ ಎಂದು ಕೊಂಪಗೊಂಡ ಸಹೋದರ ಆಕೆಯ ಪತಿಯನ್ನು ಕೊಲೆ ಮಾಡಿದ್ದಾನೆ.

ವಿಜೇತ್ ಕಶ್ಯಪ್ ಕಳೆದ ಮೂರು ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದರು. ಮದುವೆಯಾಗಿ ಮನೆಗೆ ಮರಳಿ ಬಂದಿದ್ದರು. ಈ ವೇಳೆ ಕುಪಿತಗೊಂಡು ಈ ಕೃತ್ಯ ಎಸಗಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ತಿಲ್ವಾರಾ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸತೀಶ್ ಪಟೇಲ್ ತಿಳಿಸಿದ್ದಾರೆ.

ಹೊಲದಲ್ಲಿ ಬಿದ್ದಿದ್ದ ರುಂಡ ವಿಲ್ಲದ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿದೆ. ಇದು ಕೊಲೆಯೇ ಅಥವಾ ಆತ್ಮಹತ್ಯೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯವರ ವಿರುದ್ಧವಾಗಿ ಪ್ರೀತಿಸಿ ಮದುವೆಯಾಗಿ ಯುವತಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು