ಕಲ್ಕತ್ತಾ : ತಂದೆಯಿಂದ ಹಿಂಸೆಗೊಳಗಾಗಿ ಬೇಸತ್ತ ಮಗಳು ಊಟಕ್ಕೆಂದು ಕರೆದು, ಮಧ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದ ದಾರುಣ ಘಟನೆಗೆ ಪಶ್ಚಿಮ ಬಂಗಾಳದ ಕಲ್ಕತ್ತಾ ಸಾಕ್ಷಿಯಾಗಿದೆ.
“ಈಕೆ ಭಾನುವಾರ ರಾತ್ರಿ ತನ್ನ ತಂದೆಯೊಂದಿಗೆ ರೆಸ್ಟೋರೆಂಟ್ಗೆ ತೆರಳಿ ಮದ್ಯ ಕುಡಿಸಿದ್ದಾಳೆ. ಬಳಿಕ ಇಬ್ಬರು ಹೂಗ್ಲಿ ನದಿಯ ದಡದಲ್ಲಿರುವ ಬೆಂಚಿನ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ತಂದೆ ನಿದ್ರೆಗೆ ಜಾರಿದ ನಂತರ ಮಹಿಳೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಮಹಿಳೆ “ತಾನು ಚಿಕ್ಕವಳಿದ್ದಾಗಲೆ ತಾಯಿ ತೀರಿಕೊಂಡಿದ್ದು, ನಂತರ ತಂದೆ ಮಹಿಳೆ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಆರಂಭಿಸಿದರು ಮತ್ತು ಭಾವನಾತ್ಮಕವಾಗಿ ಹಿಂಸೆ ನೀಡುತ್ತಿದ್ದರು. ಮದುವೆ ನಂತರ ಹಿಂಸೆ ನೀಡುವುದನ್ನು ನಿಲ್ಲಿಸಿದ್ದ ತಂದೆ, ಮದುವೆ ಮುರಿದು ಮಹಿಳೆ ಮನೆಗೆ ಹಿಂದಿರುಗಿದ ಬಳಿಕ ಮತ್ತೆ ಕಿರುಕುಳ ನೀಡಲು ಆರಂಭಿಸಿದರು” ಎಂದು ಆರೋಪಿಸಿದ್ದಾಳೆ.ಹಾಗೂ ತಾನೇ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾಳೆ.