ಕೇರಳ: ತಲೆಗೂದಲನ್ನು ನೇರಗೊಳಿಸಲು ಸೀಮೆಯೆಣ್ಣೆಯನ್ನು ತಲೆಗೆ ಹಚ್ಚಿದ ಬಾಲಕ ಸಾವಿಗೀಡಾಗಿರುವುದು ವರದಿಯಾಗಿದೆ.
ಮೃತ ಬಾಲಕನನ್ನು ಏಳನೇ ತರಗತಿಯಲ್ಲಿ ಓದುತ್ತಿದ್ದ ಶಿವನಾರಾಯಣನ್ ಎಂದು ಗುರುತಿಸಲಾಗಿದೆ. ಬಾಲಕ ಸೀಮೆಯೆಣ್ಣೆಯನ್ನು ಹಾಕಿ, ತಲೆಗೂದಲಿಗೆ ನೇರವಾಗಿ ಬೆಂಕಿ ಕೊಟ್ಟಿದ್ದಾನೆ. ಪರಿಣಾಮವಾಗಿ ಬೆಂಕಿ ಹೊತ್ತಿಕೊಂಡು, ಸಾವಿಗೆ ಶರಣಾಗಿದ್ದಾನೆ.
ತಲೆಗೆ ಬೆಂಕಿ ಕೊಟ್ಟು, ತಲೆಗೂದಲನ್ನು ನೇರ ಮಾಡುವ ವೀಡಿಯೋವೊಂದನ್ನು ಯೂಟ್ಯೂಬಿನಲ್ಲಿ ವೀಕ್ಷಿಸಿದ್ದ ಬಾಲಕ, ಅದನ್ನೇ ತಾನು ಪ್ರಯೋಗ ಮಾಡಲು ಅಣಿಯಾಗಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸ್ನಾನ ಗೃಹದಲ್ಲಿ ಈ ಅಪಾಯಕಾರಿ ಪ್ರಯೋಗ ನಡೆಸಿದ್ದ.
ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವಿಚಿತ್ರ ವೀಡಿಯೋಗಳನ್ನು ಕಂಡು, ಎಳೆಯರು ಅದನ್ನೇ ಪ್ರಯೋಗ ಮಾಡುತ್ತಿರುವುದು ತುಂಬಾ ಅಪಾಯಕಾರಿ ಪ್ರವೃತ್ತಿ. ಮೊಬೈಲ್, ಸಾಮಾಜಿಕ ಜಾಲತಾಣ ಬಳಸುವ ಮಕ್ಕಳ ಮೇಲೆ ಒಂದು ಕಣ್ಣಿಡುವುದು ಅತ್ಯಗತ್ಯವಾಗಿದೆ.