ಮಂಗಳೂರು(21-10-2020): ಮಾಜಿ ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವಾಗೆ ಮುಂಬೈನಿಂದ ಅನಾಮದೇಯ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
ದೇವಸ್ಥಾನದ ಧಾರ್ಮಿಕ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಬಾವಾಗೆ ಮುಂಬೈನಿಂದ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಬೆದರಿಕೆ ಕರೆ ಮಾಡಿದಾತ, ತುಳು ಭಾಷೆಯಲ್ಲಿ ಮಾತನಾಡಿದ್ದು, ಇದು ನೆಹರು ದೇಶವಲ್ಲ, ಮೋದಿ ದೇಶ. ದನ ತಿಂದು ಮತ್ತೊಮ್ಮೆ ದೇವಸ್ಥಾನಕ್ಕೆ ಹೋದರೆ ಹುಷಾರ್ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಮಂಗಳೂರು ಹೊರವಲಯದ ಬಜ್ಪೆ ಸುಂಕದ ಕಟ್ಟಯ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಪೂಜೆ ಸಲ್ಲಿಕೆ ಕಾರ್ಯಕ್ರಮದಲ್ಲಿ ಮೊಯ್ದೀನ್ ಬಾವಾ ಭಾಗವಹಿಸಿದ್ದರು.. ಅವರು ದೇವಸ್ಥಾನದಲ್ಲಿ ಪೂಜೆಗೆ ಭಾಗವಹಿಸಿದ ಪೋಟೋ ವೈರಲ್ ಆಗಿತ್ತು.