ಲಾಕ್ ಡೌನ್ ನಂತರದ ಶಿಕ್ಷಕರ ಅತಂತ್ರ ಬದುಕು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಾಕ್ ಡೌನ್ ನಂತರದಲ್ಲಿ ಖಾಸಗಿ ಶಿಕ್ಷಕರ ಬದುಕಿನ ಬಗ್ಗೆ ಇಂದು ಚರ್ಚಿಸಬೇಕಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ ಕೊರೋನಾ ಮಹಾಮಾರಿಯ ನಂತರ ಎಲ್ಲವೂ ಸ್ಥಬ್ದಗೊಂಡಿತ್ತು, ಬಹುತೇಕರು ಸಂಕಷ್ಟವನ್ನೂ ಎದುರಿಸಿದರು.ಈ ಕೂಟದಲ್ಲಿ ಬಹಳಷ್ಟು ಕಷ್ಟವನ್ನು ಅನುಭವಿಸುತ್ತಿರುವ ಒಂದು ಸ್ವಾಭಿಮಾನದ ಮುಖವೇ ನಮ್ಮೆಲ್ಲರ ಮಾರ್ಗದರ್ಶಿಗಳಾದ ಶಿಕ್ಷಕ ವೃಂದವಾಗಿದೆ.ಅದರಲ್ಲೂ ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರ ಕಷ್ಟ ಕಥೆಯಾಗಿದೆ.

ಹೌದು…

ಇದು ಧಾರ್ಮಿಕ ಹಾಗೂ ಲೌಕಿಕ ಶಿಕ್ಷಕರ ವಿಚಾರವಾಗಿ ಹೇಳುತ್ತಿದ್ದೇನೆ.ಕಳೆದ 6 ತಿಂಗಳಿನಿಂದ  ನಂಬಿರುವ ಕುಟುಂಬವನ್ನು ಉಣ್ಣಿಸಲು  ವೇತನ ಇಲ್ಲದೇ   ಎಷ್ಟೊಂದು ಕಷ್ಟ ತ್ಯಾಗ ಅನುಭವಿಸುತ್ತಿರಬಹುದೆಂದು ಊಹಿಸಲೂ ಅಸಾಧ್ಯ.ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಅಥವಾ ಮದ್ರಸದಲ್ಲಿ ವಿಧ್ಯಾರ್ಥಿಗಳಿಗೆ ವಿದ್ಯೆಯ ಸೇವೆ ನೀಡುತ್ತಾ ಬಂದಿರುವ ಈ ಶಿಕ್ಷಕರು ಈಗ ಅನುಭವಿಸುತ್ತಿರುವ ಕಷ್ಟದ ಸರಮಾಲೆಗಳನ್ನು ನಾವೊಮ್ಮೆ ಅವಲೋಕಿಸಬೇಕಾಗುತ್ತದೆ.

ಕೆಲವೊಂದು ಸಂಸ್ಥೆಗಳು ವೇತನವನ್ನು ಪಾವತಿಸಿ ಅವರ ಬೆಂಬಲಕ್ಕೆ ನಿಂತಿರಬಹುದು.ವೇತನವನ್ನು ನೀಡದ ಸಂಸ್ಥೆಯ ಹಾಗೂ ಆಡಳಿತ ಮಂಡಳಿಯ ಬಗ್ಗೆ ಚರ್ಚಿಸುತ್ತಿದ್ದೇನೆ.

ಅದು ಮದ್ರಸಾದ ಶಿಕ್ಷಕರಾಗಿರಬಹುದು ಅಥವಾ ಶಾಲಾ ಕಾಲೇಜಿನ ಶಿಕ್ಷಕರಾಗಿರಬಹುದು. ತನ್ನೊಬ್ಬನ ದುಡಿಮೆಯಿಂದ ಇಡೀ ಕುಟುಂಬದ ಜೀವನ ಸಾಗಬೇಕಾಗಿದೆ. ವೃದ್ಧ ತಂದೆ ತಾಯಿಯ ಜೊತೆ ತನ್ನ ಕುಟುಂಬದ ಜೀವನ ಸಾಗಬೇಕಾಗಿದೆ.

ರೋಗಿಯಾದ ಪೋಷಕರು ಅಥವಾ ಕುಟುಂಬದ ವೈದ್ಯಕೀಯ, ಔಷಧಿಗಳಿಗೆ ಹಣ. ಸಾಲ ,ಲೋನ್ ಮಾಡಿ ಮನೆ ಕಟ್ಟಿಸಿ ಲೋನ್ ಪಾವತಿಸಿದ ಸಂಕಷ್ಟ.

ಕರೆಂಟ್ ಬಿಲ್ಲು ಪಾವತಿಸದೇ ಬಾಕಿಯಾಗಿದೆ.ಮನೆಗೆ ರೇಷನ್ ,ದಿನ ನಿತ್ಯದ ಆಹಾರ ಸಾಮಾಗ್ರಿ. ಸಣ್ಣ ಮಗುವಿದ್ದರೆ ಆ ಮಗುವಿಗೆ ಸಂಬಂಧಪಟ್ಟ ವಸ್ತುಗಳು.ಹೆಣ್ಣುಮಗಳಿದ್ದಲ್ಲಿ ಈ ಮೊದಲೇ ವಿವಾಹ ನಿಶ್ಚಿತಾರ್ಥವಾಗಿದ್ದಲ್ಲಿ  ವಿವಾಹಕ್ಕೆ ಬೇಕಾದ ಹಣಕಾಸು.ಪತ್ನಿ ಗರ್ಭಿಣಿಯಾಗಿದ್ದಲ್ಲಿ ಅವರಿಗೆ ಬೇಕಾದ ಆರೈಕೆಯ ಆಹಾರ ವಸ್ತುಗಳು ಅಥವಾ ವೈದ್ಯಯಕೀಯ ವೆಚ್ಚ.ಇನ್ನಿತರ ಖಾಸಗಿ ಸಂಕಷ್ಟಗಳು.

ಈ ರೀತಿಯ ಅನೇಕಾನೇಕ ಸಂಕಷ್ಟಗಳನ್ನು ಎದುರಿಸಿ ಸ್ವಾಭಿಮಾನದಿಂದ ಯಾರಲ್ಲೂ ಹೇಳಿಕೊಳ್ಳಲಾಗದ ಪರಿಸ್ಥಿತಿಯನ್ನು ನಮ್ಮೆಲ್ಲರ ಪ್ರೀತಿಯ ಗೌರವಾನ್ವಿತ ಶಿಕ್ಷಕ ವೃಂದದವರು ಹಾಗೂ ಮದ್ರಸಾ ಅಧ್ಯಾಪಕರುಗಳು ಎದುರಿಸುತ್ತಿದ್ದಾರೆ.

ಅದೆಷ್ಟೊ ಶಿಕ್ಷಕರ ಮತ್ತು ಮದ್ರಸ ಅಧ್ಯಾಪಕರ ಸಂಕಷ್ಟಗಳು ಪರಿಹಾರವಾಗಿ ಅವರ ಜೀವನದಲ್ಲಿ ಮತ್ತೋಮ್ಮೆ ಸಂತೋಷ ಬೆಳಗಲಿ ಎಂದು ನಾನು ಹಾರೈಸುತ್ತಿದ್ದೇನೆ.

ಕೊನೆಗೆ ಸಹಿಸಲಾರದೇ ತರಕಾರಿ ಹಣ್ಣು ಮಾರಾಟ,ವಾಚ್ ಮೆನ್ ಕೆಲಸ,ಕೂಲಿ ಕೆಲಸ,ಲಾಂಡ್ರಿ ಅಂಗಡಿ,ತಿಂಡಿ ಮಾರಾಟ ಎಂಬ ಕಾಯಕಕ್ಕೆ ಕೈ ಹಾಕಿ ತಾತ್ಕಾಲಿಕವಾಗಿ ವ್ರತ್ತಿಯನ್ನು ಕೆಲವೊಂದು ಶಿಕ್ಷಕ ಹಾಗೂ ಮದ್ರಸ ಅಧ್ಯಾಪಕರು ಕಂಡು ಕೊಂಡಿದ್ದಾರೆ.ಇನ್ನು ಕೆಲವರು ಏನೂ ದೋಚದೇ ಬಹಳಷ್ಟು ಬಹಳಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೊಂದು ಪರಿಹಾರ ಕಂಡು ಕೊಳ್ಳಬೇಕಾದ ಅನಿವಾರ್ಯತೆಯೂ ಅಗತ್ಯತೆಯೂ ಇದೆ. ಸರ್ಕಾರವು ಈ ನಿಟ್ಟಿನಲ್ಲಿ ಕೈ ಜೋಡಿಸಬೇಕಾಗಿ ವಿನಂತಿಸಬೇಕಾಗಿದೆ.ಶಿಕ್ಷಕರ ಸಂಕಷ್ಟದ ಪರಿಹಾರ ಮಾರ್ಗಕ್ಕೆ ದ್ವನಿಗೂಡಿಸಬೇಕಾಗಿದೆ.

ಸಮಾಜದ ಸಮುದಾಯದ ಕಣ್ಣಾಗಿರುವ ಶಿಕ್ಷಕರ ಹಾಗೂ ಮದ್ರಸಾ ಅಧ್ಯಾಪಕರ ಎಲ್ಲಾ ಸಂಕಷ್ಟಗಳು ಪರಿಹಾರವಾಗಲಿ ಎಂದು ಸ್ರಷ್ಟಿಕರ್ತನಲ್ಲಿ ಪ್ರಾರ್ಥಿಸೋಣ ಹಾಗೂ ಈ ನಿಟ್ಟಿನಲ್ಲಿ ಪರಿಹಾರ ಮಾರ್ಗ ಕಂಡುಕೋಳ್ಳೋಣ.

-ಮುಹಮ್ಮದ್ ಅಲ್ತಾಫ್ ತುಂಬೆ

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು