ತೌಖ್ತೆ ಚಂಡಮಾರುತ: ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ವರ್ಷದ ಮೊದಲ ಚಂಡಮಾರುತವಾದ ತೌಖ್ತೆ ಚಂಡಮಾರುತವು ಇಂದೂ ಮುಂದುವರಿಯಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಇಂದು ತೌಖ್ತೆಯ ವೇಗ 115-125ರಿಂದ 140 ಕಿ.ಮೀ ಇರಲಿದೆಯೆಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ನಂತರದ ಎರಡು ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ.

ದಕ್ಷಿಣ ಕನ್ನಡ, ಉಡುಪಿ, ಮಲೆನಾಡುಗಳಲ್ಲಿ ಲೌಖ್ತೆಯ ಪರಿಣಾಮವು ತೀವ್ರವಾಗಿದ್ದು, ಭಾರೀ ಮಳೆಯಾಗುತ್ತಿದೆ. ತೀರದಾದ್ಯಂತ ಬೃಹದಾಕಾರದ ಸಮುದ್ರದ ಅಲೆಗಳು ಎದ್ದು, ತೀವ್ರ ಕಡಲ್ಕೊರೆತಕ್ಕೆ ಕಾರಣವಾಗಿದೆ.

ರಭಸವಾದ ಮಳೆಯಿಂದಾಗಿ ವಿದ್ಯುತ್ ಅಡಚಣೆ, ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹ,  ಮನೆಗಳಿಗೆ ಹಾನಿ, ರಸ್ತೆ ಬಂದ್ ಇತ್ಯಾದಿಗಳುಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಡಲ್ಕೊರೆತವು ಮನೆಗಳನ್ನೂ ಜಲಾವೃತಗೊಳಿಸಿದ್ದು, ಉಳ್ಳಾಲದ ಸೋಮೇಶ್ವರ ತೀರದಲ್ಲಿ ಸುಮಾರು ನೂರು ಮೀಟರಿನವರೆಗೂ ನೀರು ನುಗ್ಗಿದೆ. ಮಲ್ಪೆಯಲ್ಲಿ ಮೀನುಗಾರಿಕೆ ಬೋಟೊಂದು ಮುಳುಗಿದೆಯಾದರೂ, ಅದರೊಳಗಿದ್ದ ಇಬ್ಬರು ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಡಗಿನಲ್ಲಿ ಮುಂಜಾಗ್ರತಾ ಕ್ರಮದ ಭಾಗವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯನ್ನು ನಿಯೋಜಿಸಲಾಗಿದೆ. ಮೈಸೂರು, ಹಾಸನ, ಕೋಲಾರಗಳಲ್ಲಿಯೂ ತೀವ್ರ ಮಳೆಯಾಗುತ್ತಿದೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ 165ರಿಂದ 175 ಕೀಮೀ ವೇಗದಲ್ಲಿ ಚಂಡಮಾರುತ ಕೇರಳ ಕರಾವಳಿ ತೀರಕ್ಕೆ ಅಪ್ಪಳಿಸಲಿರುವುದರಿಂದ ಅಲ್ಲಿನ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲಿ ಈಗಾಗಲೇ ಹೆಚ್ಚಿನ ಹಾನಿ ಸಂಭವಿಸಿದೆ.

ಇತ್ತ ಕರ್ನಾಟಕದ ಒಟ್ಟು ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅವುಗಳೆಂದರೆ ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು