2022: ಇನ್ನು ಮುಂದೆ TATA ಐಪಿಎಲ್!??

Share on facebook
Share on twitter
Share on linkedin
Share on whatsapp
Share on telegram
Share on email
Share on print

ಇಂಡಿಯನ್ ಪ್ರೀಮಿಯರ್ ಲೀಗ್‌(ಐಪಿಎಲ್‌)ನ ಶೀರ್ಷಿಕೆ ಪ್ರಾಯೋಜಕತ್ವ ಚೀನಾದ ಮೊಬೈಲ್ ತಯಾರಕ ವಿವೊ ಬದಲಿಗೆ, ಭಾರತದ ಅತಿದೊಡ್ಡ ವ್ಯಾಪಾರ ಸಮೂಹಗಳಲ್ಲಿ ಒಂದಾದ ಟಾಟಾ ಗ್ರೂಪ್ ಪಡೆದುಕೊಂಡಿದೆ ಎಂದು ಈವೆಂಟ್‌ನ ಆಡಳಿತ ಮಂಡಳಿಯು ಮಂಗಳವಾರದ ಸಭೆಯಲ್ಲಿ ನಿರ್ಧರಿಸಿದೆ.

“ಹೌದು, ಟಾಟಾ ಗ್ರೂಪ್ ಐಪಿಎಲ್ ಶೀರ್ಷಿಕೆ ಪ್ರಾಯೋಜಕರಾಗಿ ಬರುತ್ತಿದೆ” ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಸುದ್ದಿ ಸಂಸ್ಥೆ ಪಿಟಿಐಗೆ ಖಚಿತಪಡಿಸಿದ್ದಾರೆ.

2023 ರಿಂದ ಪ್ರಾರಂಭವಾಗುವ ಮುಂದಿನ ಪಂದ್ಯಾಟಕ್ಕೆ ಬಿಸಿಸಿಐ ಹೊಸ ಟೆಂಡರ್‌ಗಳನ್ನು ಆಹ್ವಾನಿಸಬೇಕಾಗಿರುವುದರಿಂದ ಒಪ್ಪಂದವು ಈ ವರ್ಷಕ್ಕೆ ಮಾತ್ರ ಎಂದು ತಿಳಿದುಬಂದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು