ತಮಿಳುನಾಡಿನಲ್ಲಿ ಮತ್ತೆ ಗರಿಗೆದರುತ್ತಿದೆ “ತಾರಾ ರಾಜಕೀಯ.” ಮುಂದೆ ಮುಖ್ಯಮಂತ್ರಿಯಾಗಲಿದ್ದಾರೆಯೇ ಕಮಲ್ ಹಾಸನ್?

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೆನ್ನೈ (18/10/2020): ತಮಿಳುನಾಡಿನಲ್ಲಿ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಕಮಲ್ ಹಾಸನ್ ಅನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ “ಮಕ್ಕಳ್ ನೀತಿ ಮಯ್ಯಮ್” ಈಗಾಗಲೇ ಘೋಷಿಸಿದೆ. ಇದೀಗ ಕಾಂಗ್ರೆಸ್ ಮುಂದೆ ಬಂದು, ಕಮಲ್ ಹಾಸನನ್ನು ಯುಪಿಎ ಸೇರಲು ಆಹ್ವಾನಿಸಿದೆ. ಜಾತ್ಯತೀತ ನಿಲುವಿನ ಕಮಲ್ ಹಾಸನ್ ಜೊತೆಗೆ ಕಾರ್ಯನಿರ್ವಹಿಸಲು ನಮಗೆ ಸಾಧ್ಯವಾಗಲಿದೆ ಎಂದು ತಮಿಳುನಾಡಿನ ಕಾಂಗ್ರೆಸ್‌ ಅಧ್ಯಕ್ಷ ಕೆ‌ಎಸ್ ಅಳಗಿರಿ ತಿಳಿಸಿದ್ದಾರೆ.

ಬರಲಿರುವ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಕಮಲ್ ಹಾಸನರಿಗೆ ಸಾಧ್ಯವಾಗದು. ಸಮಾನ ಮನಸ್ಕ ಜನತೆಗಾಗಿ ಜೊತೆಯಾಗಿ ನಿಲ್ಲೋಣ ಎಂದೂ ಅವರು ಹೇಳಿದರು.

ಮೈತ್ರಿ, ಬೇರೆಬೇರೆ ಚುನಾವಣಾ ಸಮಿತಿ ಇತ್ಯಾದಿ ಮಹತ್ವದ ವಿಷಯಗಳನ್ನು ಚರ್ಚಿಸಿ, ನಿರ್ಣಯ ಕೈಗೊಳ್ಳುವ ಕಾರ್ಯಕಾರಿ ಸಮಿತಿಯ ಜವಾಬ್ದಾರಿಯನ್ನು “ಮಕ್ಕಳ್ ನೀತಿ ಮಯ್ಯಮ್” ಈಗಾಗಲೇ ಕಮಲ್ ಹಾಸನ್ ಹೆಗಲಿಗೇರಿಸಿದೆ. ಈ ನೆಲೆಯಲ್ಲಿ ಕಮಲ್ ಹಾಸನ್ ಯುಪಿಎ ಜೊತೆ ಸೇರುವರೋ ಅಥವಾ ತನ್ನ ಪಕ್ಷವನ್ನೇ ಮುನ್ನಡೆಸುವರೋ ಎಂಬುದು ಕಾದು ನೋಡಬೇಕಾದ ವಿಚಾರವಾಗಿದೆ.

2018 ರಲ್ಲಿ ಕಮಲ್ ಹಾಸನರಿಂದ ಸ್ಥಾಪನೆಗೊಂಡ “ಮಕ್ಕಳ್ ಮೀತಿ ಮಯ್ಯಮ್” ಕನ್ಯಾಕುಮಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಈಗಾಗಲೇ ತಯಾರಿ ನಡೆಸಿದ್ದಲ್ಲದೇ, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಗರ ಪ್ರದೇಶಗಳಲ್ಲಿ ಉತ್ತಮ ಸಾಧನೆ ತೋರಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು