ಧಾರಾಕಾರ ಮಳೆಯಲ್ಲೂ ಸಂಚಾರ ನಿಯಂತ್ರಣ ಮಾಡುತ್ತಿದ್ದ ಪೋಲೀಸಿಗೆ ಕರ್ತವ್ಯದ ನಡುವೆಯೇ ಸರ್ಪ್ರೈಸ್ – ದೃಶ್ಯ ತುಣಕು ವೀಕ್ಷಿಸಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ತೂತುಕುಡಿ(19-11-2020): ಮಳೆಯಾದರೂ ಬಿಸಿಲಾದರೂ ಸಂಚಾರಿ ಪೋಲೀಸರಿಗೆ ಕೆಲಸ ನಿರ್ವಹಿಸಲೇ ಬೇಕಾದ ಅನಿವಾರ್ಯತೆಯಿದೆ. ಈ ರೀತಿ ಎಡೆಬಿಡದೇ ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆ ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲೀಸ್ ಕಾಂಸ್ಟೇಬಲೊಬ್ಬರಿಗೆ ಅನಿರೀಕ್ಷಿತ ಬಹುಮಾನ ದೊರೆತ ಘಟನೆ ವರದಿಯಾಗಿದೆ.

ತಮಿಳುನಾಡಿನ ತೂತುಕುಡಿಯಲ್ಲಿ ಈ ಘಟನೆ ನಡೆದಿರುವುದು. ಮುತ್ತುರಾಜ್ ಎಂಬ ಪೋಲೀಸ್ ಪೇದೆಯು ರಭಸವಾಗಿ ಸುರಿಯುತ್ತಿದ್ದ ಮಳೆಯ ನಡುವೆಯೂ ಸಂಚಾರ ನಿಯಂತ್ರಣ ಮಾಡುತ್ತಿದ್ದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ಪೋಲೀಸ್ ಸೂಪರಿಂಡೆಂಟ್ ವರೆಗೂ ಮುಟ್ಟಿತು.

ಬಳಿಕ ಎಸ್ಪಿ ಜಯಕುಮಾರ್ ಮುನ್ಸೂಚನೆಯಿಲ್ಲದೇ ನೇರವಾಗಿ ಆತ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಬಂದು ಬಹುಮಾನ ನೀಡಿದರು. ಆತನ ಕರ್ತವ್ಯ ನಿಷ್ಠೆ ಎಲ್ಲರಿಗೂ ತಿಳಿಯಬೇಕಿದೆ ಎಂದು ಎಸ್ಪಿ ಈ ಸಂದರ್ಭದಲ್ಲಿ ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು