ತಮಿಳುನಾಡು: ಅಣ್ಣಾಮಲೈ ನಾಮಪತ್ರಕ್ಕೆ ತಡೆಯೊಡ್ಡಿದ ಚುನಾವಣಾ ಆಯೋಗ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೆನ್ನೈ : ಕೆಲ ದಿನಗಳ ಹಿಂದೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತಮಿಳುನಾಡಿನ ಅರವಕುರಚಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೈಕಲ್ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ್ದರು.ಇದೀಗ ಚುನಾವಣಾ ಆಯೋಗವು ಅವರ ನಾಮಪತ್ರಕ್ಕೆ ತಡೆಯೊಡ್ಡಿದೆ.

ನಾಮಪತ್ರದಲ್ಲಿ ಅಣ್ಣಾಮಲೈಗಿದ್ದ 10 ಪ್ರಕರಣಗಳ ಬಗ್ಗೆ ಉಲ್ಲೇಖಿಸಿಲ್ಲ.ತಪ್ಪು ಮಾಹಿತಿಗಳನ್ನು ನೀಡಿದ್ದಾರೆ ಎಂದು ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸುವ ಸ್ವತಂತ್ರ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ದೂರನ್ನು ಸ್ವೀಕರಿಸಿದ ಚುನಾವಣಾ ಆಯೋಗವು ಅಣ್ಣಾ ಮಲೈ ಅವರ ನಾಮಪತ್ರಕ್ಕೆ ತಾತ್ಕಾಲಿಕ ತಡೆ ಹೇರಿದೆ.ಹಾಗೂ ಇದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು