ತಮಿಳುನಾಡು: ಕೊನೆಯ ಕ್ಷಣದಲ್ಲಿ ಮದುವೆ ಮಂಟಪದಲ್ಲಿ ನಡೆಯಿತು ಹೈಡ್ರಾಮ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೆನ್ನೈ(02/11/2020): ಹಸೆಮಣೆಯಲ್ಲಿ ನಡೆಯಿತು ಹೈಡ್ರಾಮ. ಹೌದು. ತಮಿಳುನಾಡಿನಲ್ಲಿ ವಧುವೊಬ್ಬಳು ಹಸೆಮಣೆಯ ಮೇಲೆ ಕುಳಿತ್ತಿದ್ದ ವರ ಇನ್ನೇನು ಕೆಲವೇ ಕ್ಷಣಗಳಲ್ಲಿ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಎಲ್ಲರಿಗೂ ಶಾಕ್ ನೀಡಿ, ತನಗೆ ಈ ಮದುವೆ ಬೇಡ ಎಂದ ಘಟನೆ ನಡೆದಿದೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗಿದೆ.

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಉದಗ ಗ್ರಾಮದಲ್ಲಿ ಘಟನೆ ನಡೆದಿದ್ದು, ಇನ್ನೇನು ವರ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ಆತನನ್ನು ತಡೆದು ಸಿನಿಮಾ ಸ್ಟ್ರೈಲ್ ಡೈಲಾಗ್ ಹೊಡೆದು ಮದುವೆ ನಿಲ್ಲಿದ್ದಾಳೆ.
ತಾನು ಪ್ರೀತಿಸಿದ್ದ ಯುವಕನನ್ನೇ ಮದುವೆಯಾಗಲು ಯುವತಿ ಅಂತಿಮ ಕ್ಷಣದಲ್ಲಿ ಮದುವೆಯನ್ನು ನಿರಾಕರಿಸಿದ್ದಾಳೆ.

ತಾನು ಪ್ರೀತಿಸಿದ ಯುವಕ ಅರ್ಧ ಗಂಟೆಯಲ್ಲಿ ಮದುವೆ ಮನೆಗೆ ಬರುತ್ತಾನೆ. ತಾನು ಅವನನ್ನೇ ಮದುವೆಯಾಗುವುದಾಗಿ ಹೇಳಿ ಯುವತಿ ತಾಳಿ ಕಟ್ಟಲು ಬಂದ ವರನನ್ನು ತಡೆದಿದ್ದಳು.

ಯುವತಿ ಮದುವೆ ನಿರಾಕರಿಸುತ್ತಿದಂತೆ ಆಕ್ರೋಶಗೊಂಡ ಕುಟುಂಬಸ್ಥರು ಆಕೆಗೆ ಬುದ್ಧಿ ಮಾತು ಹೇಳಿ ಮದುವೆ ಮಾಡಿಕೊಳ್ಳುವಂತೆ ತಿಳಿ ಹೇಳುವ ಕೆಲಸ ಮಾಡಿದ್ದರು. ಆದರೂ ಆಕೆ ಒಪ್ಪಿಕೊಳ್ಳದ ಕಾರಣ ಪ್ರೀತಿಯ ವಿಚಾರವನ್ನು ಮೊದಲೇ ಏಕೆ ಹೇಳಿಲ್ಲ ಎಂದು ಗರಂ ಆಗಿ ಯುವತಿಯ ಮೇಲೆ ಕೈ ಮಾಡುವುದಕ್ಕೂ ಮುಂದಾದರು. ಆದರೆ ಈ ವೇಳೆ ಮಧ್ಯ ಪ್ರವೇಶಿಸಿದ ಸಂಬಂಧಿಗಳು ಕುಟುಂಬಸ್ಥರನ್ನು ತಡೆದು ನಿಲ್ಲಿಸಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು