ಕ್ಯಾಲಿಫೋರ್ನಿಯಾ(21-10-2020): ಹೊಚ್ಚ ಹೊಸ ಚಲನಚಿತ್ರಗಳು ಬಿಡುಗಡೆಯಾಗುವಾಗಲೇ ಅದರ ನಕಲಿ ಪ್ರತಿಯನ್ನು ಬಿಡುಗಡೆ ಮಾಡುವ ತಮಿಳ್ ರಾಕರ್ಸ್ ಇನ್ನು ಇರುವುದಿಲ್ಲವೆಂದು ವರದಿಯಾಗಿದೆ. ಅಮೇಜಾನ್ ಇಂಟರ್ನ್ಯಾಷನಲ್ ನೀಡಿದ ದೂರಿನ ಬಳಿಕ ತಮಿಳ್ ರಾಕ್ಕರ್ಸನ್ನು ಶಾಶ್ವತವಾಗಿ ಅಳಿಸಿಹಾಕಲಾಗುವುದೆಂದು ಹೇಳಲಾಗಿದೆ.
ಅಮೇಜಾನ್ ಪ್ರೈಮಿನಲ್ಲಿ ಬಿಡುಗಡೆಗೊಂಡ ಹೊಚ್ಚ ಹೊಸ ಚಲನಚಿತ್ರಗಳಾದ ‘ಹಲಾಲ್ ಲವ್ ಸ್ಟೋರಿ’, ‘ಪುತ್ತಮ್ ಪುತುಕಾಲೈ’ ಮುಂತಾದ ಚಲನಚಿತ್ರಗಳ ನಕಲಿ ಪ್ರತಿಗಳನ್ನು ತಮಿಳ್ ರಾಕರ್ಸ್ ಅಪ್ಲೋಡ್ ಮಾಡಿತ್ತು. ಇದರ ವಿರುದ್ಧ ಅಮೇಜಾನ್ ದೂರು ನೀಡಿತ್ತು.
ಡಿಜಿಟಲ್ ಮಿಲೇನಿಯಮ್ ಕಾಪಿ ರೈಟ್ ಆ್ಯಕ್ಟ್ ಪ್ರಕಾರ ಐಸಿಎಎನ್ಎನ್ ನೋಂದಾಯಿತ ಪಟ್ಟಿಯಿಂದ ತಮಿಳ್ ರಾಕರ್ಸನ್ನು ಕೈಬಿಡಲಾಗಿದೆ. ಬಿಡುಗಡೆಯಾಗುವಾಗಲೇ ಚಲನಚಿತ್ರಗಳ ನಕಲಿ ಪ್ರತಿಗಳನ್ನು ಬಿಡುಗಡೆ ಮಾಡುವ ತಮಿಳ್ ರಾಕರ್ಸ್ ಸಿನಿ ರಂಗಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.