ಹೃದಯಾಘಾತಕ್ಕೊಳಗಾಗಿ ಚಿಕಿತ್ಸೆಯಲ್ಲಿದ್ದ ತಮಿಳು ಹಾಸ್ಯ ನಟ ವಿವೇಕ್ ನಿಧನ | ಮೊನ್ನೆಯಷ್ಟೇ ಕೋವ್ಯಾಕ್ಸಿನ್ ಲಸಿಕೆ ಸ್ವೀಕರಿಸಿದ್ದರು

ಚೆನ್ನೈ: ನಿನ್ನೆಯಷ್ಟೇ ಹೃದಯಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದ ತಮಿಳು ಹಾಸ್ಯ ನಟ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತಕ್ಕೊಳಗಾಗುವ ಮೊದಲ ದಿನ (ಎಪ್ರಿಲ್ 15) ವಿವೇಕ್ ಅವರು ಕೋವಿಡ್ ಲಸಿಕೆ ಸ್ವೀಕರಿಸಿದ್ದರು. ಬಳಿಕ ಇತರರೂ ಲಸಿಕೆ ಪಡೆಯುವಂತೆ ಪ್ರೇರೇಪಿಸಿ ಮಾತನಾಡಿದ್ದರು. ಒಮುನ್ದಾರಿ ಸರಕಾರೀ ಆಸ್ಪತ್ರೆಯಲ್ಲಿ ಪಡೆದ ಕೋವ್ಯಾಕ್ಸಿನ್ ಲಸಿಕೆ ಪಡೆದ ಮರು ದಿನವೇ ಹೃದಯಾಘಾತಕ್ಕೊಳಗಾಗಿರುವುದು ದೇಶಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ಹಲವರು ಕೋವ್ಯಾಕ್ಸಿನ್ ಪರಿಣಾಮವೇ ಎಂಬ ಸಂಶಯ ವ್ಯಕ್ತಪಡಿಸಿದ್ದರು. ಆದರೆ ಸಿಮ್ಸ್ ಆಸ್ಪತ್ರೆಯ ತಜ್ಞ ಡಾ. ರಾಜು ಶಿವಸ್ವಾಮಿ, ವಿವೇಕ್ ಅವರು ಲಸಿಕೆ ಪಡೆದಿರುವುದಕ್ಕೂ, … Read more

ಎಲ್ಲಾ ಭಾರತೀಯರಿಗೂ ಉಚಿತ ಕೋವಿಡ್ ಲಸಿಕೆ ನೀಡಲಾಗುವುದು- ಕೇಂದ್ರ ಸಚಿವ

prathap saranggi

ಒಡಿಶಾ(26-10-2020): ಕೋವಿಡ್ ಲಸಿಕೆಯನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಕೇಂದ್ರ ಸಚಿವ ಪ್ರತಾಪ್ ಸಾರಂಗಿ ದೇಶದ ಎಲ್ಲಾ ಪ್ರಜೆಗಳಿಗೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಒಡಿಶಾದಲ್ಲಿ ಸಚಿವ ಪ್ರತಾಪ್ ಸಾರಂಗಿ ಮಾತನಾಡಿ, ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುವುದು. ಇದಕ್ಕಾಗಿ 500ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ಹೇಳಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಿಹಾರದಲ್ಲಿ ಗೆದ್ದರೆ ಉಚಿತ ಕೋವಿಡ್ ಲಸಿಕೆ ನೀಡುವುದಾಗಿ ಘೋಷಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. … Read more

ಕೋವಿಡ್ ಲಸಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ಸುದ್ದಿ

covid vaccine

ನವದೆಹಲಿ(03-10-2020): ಮುಂದಿನ ಬೇಸಿಗೆ ಇಲ್ಲವೇ 2022ರ ವೇಳೆಗೆ ಕೊರೊನಾಗೆ ಪರಿಣಾಮಕಾರಿ ಲಸಿಕೆ ಆವಿಷ್ಕಾರ ಸಾಧ್ಯ ಎಂದು  ಜರ್ನಲ್ ಅಫ್ ಜನರಲ್ ಇಂಟರ್ನಲ್ ಮೆಡಿಸನ್ ಪತ್ರಿಕೆಯ ಹಿರಿಯ ಲೇಖಕ ಕಿಮ್ಮೆಲ್ ಮೆನ್ ಹೇಳಿದ್ದಾರೆ. ಕೋವಿಡ್ ನಿಂದ  ಇಡೀ ವಿಶ್ವವೇ ತತ್ತರಿಸಿದೆ. ಈ ಮಧ್ಯೆ ಕಳೆದ 10 ತಿಂಗಳಿನಿಂದ ಲಸಿಕೆ ಸಂಶೋಧನೆ ಕೂಡ ನಡೆಯುತ್ತಿದೆ. ಆದರೆ ಈ ವರ್ಷದೊಳಗೆ ಪರಿಣಾಮಕಾರಿ ಲಸಿಕೆ ಲಭ್ಯವಾಗುವ ಸಾಧ್ಯತೆಗಳಿಲ್ಲ. ಈ ಕುರಿತು ಕೆನಡಾದ ಮೆಕ್ ಗಿಲ್ ವಿಶ್ವವಿದ್ಯಾಲಯದ ಸಂಶೋಧಕರು, ತಜ್ಞರ ಸಮೀಕ್ಷೆ ನಡೆಸಿದ್ದು ಅಮೆರಿಕ … Read more