ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷ ಹಣ ಕದ್ದು ಲವ್ವರ್ ಜೊತೆ ಪರಾರಿಯಾದ ಡ್ರೈವರ್ ಅರೆಸ್ಟ್

atm driver

ಬೆಂಗಳೂರು (11-02-2021): ಎಟಿಎಂಗೆ ಹಣ ತುಂಬಿಸಬೇಕಿದ್ದ 64 ಲಕ್ಷ ಹಣ ಕದ್ದು ಲವ್ವರ್ ಜೊತೆ ಪರಾರಿಯಾಗಿದ್ದ ಚಾಲಕನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಯೋಗೇಶ್ ಬಂಧಿತ ಆರೋಪಿ. ಈತ ಫೆ. 3ರಂದು ಎಟಿಎಂಗೆ ಹಣ ತುಂಬಿಸಲು ಸೆಕ್ಯೂರಿಟಿಗಳು ಎಟಿಎಂಗೆ ತೆರಳಿದ್ದಾಗ ಹಣದ ಬ್ಯಾಗನ್ನು ತೆಗೆದುಕೊಂಡು ಪರಾರಿಯಾಗಿದ್ದ. ಸುಬ್ರಹ್ಮಣ್ಯ ‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿಯಲ್ಲಿ ಡ್ರೈವರ್ ಆಗಿದ್ದ ಆರೋಪಿ ಯೋಗೇಶ್ ಹಣ ಕದ್ದು ಗೆಳೆಯನ … Read more

ಮಾಲಕನನ್ನು ಕಟ್ಟಿ ಹಾಕಿ ಕುರಿಗಳ ಕಳ್ಳತನ| ರಾತ್ರೋ ರಾತ್ರಿ ಫೀಲ್ಡ್ ಗಿಳಿದ ಗ್ಯಾಂಗ್!

police

ಹಿರೇಕೆರೂರ(13-11-2020): ಮಾಲಕನನ್ನು ಕಟ್ಟಿಹಾಕಿ ಕುರಿಗಳನ್ನು ಕಳ್ಳತನ ಮಾಡಿರುವ ಘಟನೆ ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ. ದುಷ್ಕರ್ಮಿಗಳ ತಂಡ ತಡರಾತ್ರಿ ಶೆಡ್‌ಗೆ ನುಗ್ಗಿ ಮಾಲಕ ಬಸನಗೌಡ ಎಂಬವರನ್ನು ಕಟ್ಟಿಹಾಕಿ 20ಕ್ಕೂ ಅಧಿಕ ಕುರಿಗಳನ್ನು ಕಳ್ಳತನ ಮಾಡಿದ್ದಾರೆ. ತಂಡದಲ್ಲಿ 8ಕ್ಕೂ ಅಧಿಕ ಮಂದಿ ಇದ್ದರು ಎಂದು ಹೇಳಲಾಗಿದೆ. ಕುರಿಗಳ ಜೊತೆಗೆ ಬಸನಗೌಡ ಅವರ ಮೊಬೈಲ್‌ ಕಳ್ಳತನ ಮಾಡಿ, ಬೈಕ್‌ ಜಖಂಗೊಳಿಸಿ ಪರಾರಿಯಾಗಿದ್ದಾರೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲ್ಲಡ್ಕ: ಗೋವು ಕಳ್ಳತನಕ್ಕೆ ಯತ್ನಿಸುವಾಗ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದ ಸಂಘಪರಿವಾರದ ಕಾರ್ಯಕರ್ತರು!

kalladka

ಬಂಟ್ವಾಳ(29-10-2020); ಕಲ್ಲಡ್ಕದ ಕುಂಟಿಬಾಪು ಎಂಬಲ್ಲಿ ಗೋವುಗಳನ್ನು ಕದಿಯಲು ಯತ್ನಿಸಿದ ಮೂವರು ಸಂಘಪರಿವಾರದ ಕಾರ್ಯಕರ್ತರೆನ್ನಲಾದವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ನವೀನ್, ಮಾಧವ ಸುಧೆಕಾರ್ ಗೋವು ಕಳ್ಳತನಕ್ಕೆ ಯತ್ನಿಸಿದವರು. ಇವರು ಸಂಘಪರಿವಾರದ ಸದಸ್ಯರಾಗಿದ್ದಾರೆಂದು ಸ್ಥಳೀಯರು ಹೇಳಿದ್ದಾರೆ. ಆರೋಪಿಗಳು ಬೀದಿ ಬದಿ ಮೇಯುತ್ತಿದ್ದ ದನವೊಂದನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಇಂದು ಇಂತದ್ದೇ ಕೃತ್ಯಕ್ಕೆ ಮುಂದಾಗಿ ಸಿಕ್ಕಿಬಿದ್ದಿದ್ದಾರೆ. .  

ಮ್ಯಾನೇಜರ್ ಆಗಿದ್ದವ ಈಗ ಕುಖ್ಯಾತ ಸರಗಳ್ಳ!  ಕ್ರೈಂ ಸ್ಟೋರಿ ಓದಿ

theft

ಬೆಂಗಳೂರು(06-10-2020):ಪ್ರತಿಷ್ಠಿತ ಕಂಪೆನಿಯ ಮ್ಯಾನೇಜರ್ ಹುದ್ದೆ ಬಿಟ್ಟು ಸರಕಳ್ಳತನಕ್ಕೆ ಇಳಿದಿದ್ದ ವ್ಯಕ್ತಿಯೋರ್ವ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಬನಶಂಕರಿ ನಿವಾಸಿ ತಮಿಳುನಾಡು ಮೂಲದ ಜಯಕುಮಾರ್ (42) ಬಂಧಿತ ಆರೋಪಿ. ಈತ ಆ.8ರ ರಾತ್ರಿ ನೆಲಗದರನಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಿದ್ದಗಂಗಮ್ಮ ಕುತ್ತಿಗೆಯಿಂದ ಚಿನ್ನದಸರ ದೋಚಿ ಪರಾರಿಯಾಗಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಈತ ಕಳ್ಳತನ ನಡೆಸಿರುವುದು ತಿಳಿದು ಬಂದಿದೆ. ಜಯಕುಮಾರ್ 2012ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದ. ಈ ವೇಳೆ ಪಬ್, ಬಾರ್​ಗಳಿಗೆ ಹೋಗಿ ಪಾರ್ಟಿ ಮಾಡುತ್ತಿದ್ದ. ಮದ್ಯಸೇವನೆ ಹಾಗೂ ಜೂಜಾಟಕ್ಕೆ ದಾಸನಾಗಿದ್ದ. … Read more

ಎಟಿಎಂ ಧ್ವಂಸಗೊಳಿಸಿ 11 ಲಕ್ಷ ಕಳ್ಳತನ

atm

ಬೆಂಗಳೂರು(02-10-2020): ಕೆಆರ್ ಪುರಂ ಬಳಿಯ ಭಟ್ಟರಹಳ್ಳಿಯಲ್ಲಿ ಎಟಿಎಂ ಯಂತ್ರವನ್ನು ಧ್ವಂಸ  ಮಾಡಿ 11 ಲಕ್ಷ ರೂ.ದೋಚಿರುವ ಘಟನೆ ನಡೆದಿದೆ . ಖಾಸಗಿ ಬ್ಯಾಂಕ್ ನ ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್ ಬಳಸಿ ಕತ್ತರಿಸಿರುವ ಕಳ್ಳರು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ. ತಡರಾತ್ರಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.