ಬಾಲಿವುಡ್ ನ ಹಿರಿಯ ನಟ ಶವವಾಗಿ ಪತ್ತೆ; ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

asif

ಧರ್ಮಶಾಲಾ​(12/11/2020): ಸುಶಾಂತ್ ಸಿಂಗ್ ಬಳಿಕ ಇದೀಗ ಇನ್ನೋರ್ವ ಪ್ರಸಿದ್ಧ ಬಾಲಿವುಡ್ ನಟ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಾಲಿವುಡ್ ನ ಹಿರಿಯ ನಟರಾಗಿರುವ‌ ಆಸಿಫ್ ಬಸ್ರಾ(53) ಅವರು ಇಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.  ಸಾವಿಗೆ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾ ಕೆಫೆ ಬಳಿ ಆಸಿಫ್ ಅವರ ಶವ ಪತ್ತೆಯಾಗಿದೆ.

ಸುಶಾಂತ್ ಸಿಂಗ್ ಕೊಲೆಯಾ? ಏಮ್ಸ್ ವೈದ್ಯರು ಸಲ್ಲಿಸಿದ ಅಂತಿಮ ವರದಿಯಲ್ಲೇನಿದೆ?

sushanth

ಭೋಪಾಲ್‌ (03-10-2020): ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಗಳ ಇತ್ತೀಚಿನ ಬೆಳವಣಿಗೆಗಳ ಮಧ್ಯೆ ದೆಹಲಿಯ ಏಮ್ಸ್ ನ ವೈದ್ಯರು ಬಾಲಿವುಡ್ ನಟನನ್ನು ಕೊಲೆ ಮಾಡಲಾಗಿಲ್ಲ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯನ್ನು ನೀಡಿದ್ದಾರೆ. ದಿವಂಗತ ನಟನ ಶವಪರೀಕ್ಷೆ ನಡೆಸಿದ ಏಮ್ಸ್ ವೈದ್ಯರ ತಂಡ ಈ ಕುರಿತು ವರದಿಯನ್ನು ಸಿಬಿಐಗೆ ತಿಳಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಸುಶಾಂತ್ ಸಿಂಗ್ ಸಾವಿಗೆ ನೇಣು ಬಿಗಿದ ಕಾರಣ ಉಸಿರುಕಟ್ಟುವಿಕೆ ಕಾರಣ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ, ಸಿಬಿಐ, ನಟನ ‘ಆತ್ಮಹತ್ಯೆಗೆ … Read more