ಕರ್ನಾಟಕದಲ್ಲಿ ತಾಲೂಕು ಪಂಚಾಯಿತಿ ರದ್ದು? ಸಚಿವರು ನೀಡಿದ ಸ್ಪಷ್ಟನೆಯೇನು?

eswarappa

ಕೊಪ್ಪಳ(02-03-2021): ಕರ್ನಾಟಕದಲ್ಲಿ ತಾಲೂಕು ಪಂಚಾಯತ್ ವ್ಯವಸ್ಥೆ ರದ್ದತಿ ಕುರಿತು ಚರ್ಚೆ ಬೆನ್ನಲ್ಲೇ ತಾಲೂಕು ಪಂಚಾಯತಿ ರದ್ದು ಮಾಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ತಾಲೂಕು ಪಂಚಾಯಿತಿ ರದ್ದತಿ ಇಲ್ಲ. ತಾಲೂಕು ಪಂಚಾಯತ್ ಗೆ ಹೆಚ್ಚಿನ ಅಧಿಕಾರ, ಅನುದಾನ ನೀಡಲಾಗುವುದು ಎಂದು ಹೇಳಿದ್ದಾರೆ. ಗ್ರಾಮೀಣಾಭಿವೃದ್ಧಿ ವ್ಯವಸ್ಥೆಯಲ್ಲಿ ತಾಲೂಕು ಪಂಚಾಯಿತಿಗೆ ಹೆಚ್ಚು ಮಹತ್ವ ಇದೆ. ಅದನ್ನು ಮತ್ತಷ್ಟು ಶಕ್ತಿಗೊಳಿಸಲಾಗುವುದು ಎಂದು ಈಶ್ವರಪ್ಪ ಹೇಳಿದ್ದಾರೆ. ಈ ಮೊದಲು … Read more

3 ವರ್ಷಗಳ ಅವಧಿಗೆ ಕೃಷಿ ಕಾನೂನನ್ನು ತಡೆಹಿಡಿಯಿರಿ ಉದ್ಯಮಿಯ ವಿವಾಹದಲ್ಲಿ ರಾಮದೇವ್ ಹೇಳಿಕೆ

ramdev

ನವದೆಹಲಿ(27-02-2021): ಕೃಷಿ ಕಾನೂನುಗಳನ್ನು ಮೂರು ವರ್ಷಗಳ ಅವಧಿಗೆ ಅಮಾನತುಗೊಳಿಸುವ ಮೂಲಕ ರೈತರ ಪ್ರತಿಭಟನೆಯ ಪರಿಸ್ಥಿತಿಯನ್ನು ಪರಿಹರಿಸುವಂತೆ ಯೋಗ ಗುರು ಬಾಬಾ ರಾಮದೇವ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರೈತರು ಮತ್ತು ಕೇಂದ್ರದ ನಡುವೆ ಶಾಂತಿ ಇರಲಿ ಎಂದು ಹಾರೈಸುತ್ತೇನೆ ಎಂದು ಬಾಬ ರಾಮದೇವ್ ಹರಿಯಾಣದ ಸಮಲ್ಖಾದಲ್ಲಿ ಉದ್ಯಮಿಯೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ನಾನು ಸರ್ಕಾರದ ವಕ್ತಾರನಾಗಲು ಅಥವಾ ಕೃಷಿಕನಾಗಲು ಬಯಸುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಸುಧಾರಣೆ ಕಾಣಬೇಕೆಂದು ಬಯಸುತ್ತೇನೆ. ಹೊಸ ಕೃಷಿ ಕಾನೂನುಗಳನ್ನು ಮೂರು ವರ್ಷಗಳವರೆಗೆ ಮುಂದೂಡಬೇಕು ಮತ್ತು … Read more

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕುರಿತು ಗೃಹ ಸಚಿವ ಬೊಮ್ಮಯಿ ಮಹತ್ವದ ಹೇಳಿಕೆ

basvaraj bommai

ಬೆಂಗಳೂರು (22-02-2020): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಿಂದುಳಿದ ವರ್ಗಗಳ ಆಯೋಗದ ವರದಿ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಕುರಿತು ಹಿಂದುಳಿದ ವರ್ಗಗಳ ಆಯೋಗವೂ ಅಧ್ಯಯನ ನಡೆಸಿ ಕ್ರಮಬದ್ಧವಾಗಿ ವರದಿ ಕೊಡಲಿದೆ. ಆಯೋಗವೇ ಮೀಸಲಾತಿ ಯಾವಾಗ ಕೊಡಬೇಕು ಅಂತ ನಿರ್ಧಾರ ಮಾಡಲಿದೆ ಎಂದು ಬೊಮ್ಮಯಿ ಹೇಳಿಕೆ ನೀಡಿದ್ದಾರೆ.  ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಸಮುದಾಯದ ಸ್ವಾಮೀಜಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲ ಸಚಿವರು ಕೂಡ ಪ್ರತಿಭಟನೆಗೆ … Read more

ಅಯೋಧ್ಯೆಯಲ್ಲಿ ರಾಮಮಂದಿರ ಅಲ್ಲ, ವಿಶ್ವಹಿಂದು ಪರಿಷತ್ ನ ಕಾರ್ಯಾಲಯ ನಿರ್ಮಾಣ ಮಾಡಲಾಗುತ್ತಿದೆ- ಸ್ವಾಮಿ ಸ್ವರೂಪ್ ಆನಂದ್ ಸ್ಪೋಟಕ ಹೇಳಿಕೆಯ ವಿಡಿಯೋ ವೈರಲ್

swami swaroopanda

ನವದೆಹಲಿ(21-02-2021):  ಅಯೋಧ್ಯೆಯಲ್ಲಿ ರಾಮಮಂದಿರವಲ್ಲ ಬದಲಾಗಿ ವಿಶ್ವಹಿಂದು ಪರಿಷತ್ ನ ಕಾರ್ಯಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ವಾಮಿ ಸ್ವರೂಪ್ ಆನಂದ್ ಸರಸ್ವತಿ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಸ್ವಾಮಿ ಸ್ವರೂಪಾನಂದ್ ಅವರು ದೇಣಿಗೆಯ ಲೆಕ್ಕದ ಬಗ್ಗೆ ಕೂಡ ಸಂಶಯವನ್ನು ಕೂಡ ವ್ಯಕ್ತಪಡಿಸಿದ್ದಾರೆ. ರಾಮಮಂದಿರ ವಿಚಾರದಲ್ಲಿ ದೇಶದಾದ್ಯಂತ ಫಂಡ್ ಆರೆಸ್ಸೆಸ್ ವಿಶ್ವ ಹಿಂದೂಪರಿಷತ್ ಸೇರಿ ಸಾವಿರಾರು ಸಂಘಟನೆಗಳು ಕಲೆಕ್ಸನ್ ಮಾಡುತ್ತಿರುವ ಬೆನ್ನಲ್ಲೇ ಈ ಹೇಳಿಕೆಯನ್ನು ಸ್ವಾಮಿ ಸ್ವರೂಪಾನಂದ್ ಹೇಳಿದ್ದಾರೆ.      

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ದೇಣಿಗೆ ಕೊಡಲ್ಲ-ಸಿದ್ದರಾಮಯ್ಯ

siddaramayya

ನವದೆಹಲಿ(16-02-2021): ಅಯೋಧ್ಯೆಯಲ್ಲಿ ಕಟ್ಟುವ ರಾಮಮಂದಿರಕ್ಕೆ ನಾನು ದೇಣಿಗೆ ಕೊಡಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್ ಆದೇಶದಂತೆ ಮಂದಿರ ಕಟ್ಟುತ್ತಿದ್ದಾರೆ. ಇದಕ್ಕೆ ನಮ್ಮ ತಕರಾರಿಲ್ಲ. ರಾಮ ಮಂದಿರ ಅಯೋಧ್ಯೆಯಲ್ಲೇ ಕಟ್ಟಬೇಕು ಎಂದಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟೋದಕ್ಕೆ ದೇಣಿಗೆ ಕೊಡೋದಿಲ್ಲ. ಬೇರೆ ಕಡೆ ಕಟ್ಟುತ್ತಿದ್ದರೆ ಕೊಡುವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.  ಅಯೋಧ್ಯೆಗೆ ಇಟ್ಟಿಗೆ ಹೋಗಿದೆ. ಎಲ್ಲಾ ಕಡೆ ಕಲೆಕ್ಸನ್ ಮಾಡುತ್ತಿದ್ದಾರೆ. ಎಷ್ಟು ಹಣ ಬಂದಿದೆ ಎಂದು ಯಾರಾದರೂ ಲೆಕ್ಕ … Read more

ದಿಶಾ ರವಿ ಸೇರಿದಂತೆ ದೇಶವಿರೋಧಿಗಳನ್ನು ಹೊಡೆದು ಹಾಕಿ- ಪ್ರಚೋದನಾತ್ಮಕ ಹೇಳಿಕೆ ಕೊಟ್ಟ ಬಿಜೆಪಿ ಸಚಿವ

disha ravi

ಚಂಡೀಗಢ (15-02-2021): ದಿಶಾ ರವಿ ಸೇರಿದಂತೆ ಎಲ್ಲಾ ದೇಶ ವಿರೋಧಿಗಳನ್ನು ಸಂಪೂರ್ಣ ಹೊಡೆದು ಹಾಕಬೇಕು ಎಂದು ಹರಿಯಾಣ ಬಿಜೆಪಿ ಸಚಿವ ಅನಿಲ್ ವಿಜ್ ವಿವಾದಾತ್ಮಕ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದ್ದಾರೆ. ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಶೇರ್ ಮಾಡಿದ್ದ ಟೂಲ್‌ ಕಿಟ್‌ ನ್ನು ಸಿದ್ದಪಡಿಸಿದ ಆರೋಪದ ಬಂಧನಕ್ಕೊಳಗಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಗ್ಗೆ ಪ್ರತಿಕ್ರಿಯಿಸಿದ  ಹರಿಯಾಣದ ಸಚಿವ ಅನಿಲ್ ವಿಜ್ ರಾಷ್ಟ್ರ ವಿರೋಧಿ ಬೀಜವನ್ನು ಬಿತ್ತುವವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ರಾಷ್ಟ್ರ ವಿರೋಧಿಗಳನ್ನು … Read more

ಸಾಮಾಜಿಕ ಮಾದ್ಯಮಗಳನ್ನು ಬಳಸಿ ಸುಳ್ಳು ಸುದ್ದಿ ಹರಡಿದ್ರೆ ಕಠಿಣ ಕ್ರಮ- ರವಿಶಂಕರ್ ಪ್ರಸಾದ್

ravishankar prasad

ನವದೆಹಲಿ (11-02-2021): ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ನ ಮತ್ತು ಕೇಂದ್ರ ಸರಕಾರದ ನಡುವಿನ ಸಂಘರ್ಷ ಹೆಚ್ಚಾಗಿರುವ ಬೆನ್ನಲ್ಲೆ, ಕೇಂದ್ರೀಯ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಸಂಸತ್ತಿನಲ್ಲಿ ಮಾತನಾಡುತ್ತಾ, ಸಾಮಾಜಿಕ ಮಾಧ್ಯಮಗಳು ನಕಲಿ ಸುದ್ದಿಯನ್ನು ಪ್ರೋತ್ಸಾಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ನಿರ್ದಿಷ್ಟವಾಗಿ ಟ್ವಿಟರ್, ಫೇಸ್‌ಬುಕ್, ಯೂಟ್ಯೂಬ್ ಮತ್ತು ಲಿಂಕ್ಡ್‌ಇನ್ ಎಂದು ಹೆಸರಿಸಿರುವ ಕೇಂದ್ರ ಸಚಿವರು, ನಿಮಗೆ ಭಾರತದಲ್ಲಿ ಲಕ್ಷಾಂತರ ಅನುಯಾಯಿಗಳಿದ್ದಾರೆ, ನೀವು ಇಲ್ಲಿ ಹಣ ಸಂಪಾದಿಸಲು ಮುಕ್ತರಾಗಿದ್ದೀರಿ, ಆದರೆ ನೀವು ಭಾರತೀಯ ಸಂವಿಧಾನವನ್ನು ಅನುಸರಿಸಬೇಕಾಗುತ್ತದೆ … Read more

ದಿವಾಳಿ ಬಜೆಟ್-ಅತ್ಮ ಬರ್ಬರ ಎಂದ ಸಿದ್ದರಾಮಯ್ಯ

siddaramayya

ಮಹಾರಾಷ್ಟ್ರ (01-02-2021): ಆತ್ಮ ನಿರ್ಭರ ಅಲ್ಲ ಅತ್ಮ ಬರ್ಬರ ಬಜೆಟ್ ನ್ನು ಕೇಂದ್ರ ಸರ್ಕಾರ ಮಂಡಿಸಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ. ಬಜೆಟ್‌ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಬಜೆಟ್ ಬಗ್ಗೆ ನನಗೆ ಯಾವುದೇ ನಿರೀಕ್ಷೆಯಿಲ್ಲ ಎಂದು ನಿನ್ನೆಯೇ ಹೇಳಿದ್ದೇನೆ.ಇದು ಇವತ್ತು ನಿಜವಾಗಿದೆ. ಕೇಂದ್ರ ಸರ್ಕಾರ ದಿವಾಳಿ ಬಜೆಟ್‌ ಮಂಡಿಸಿದೆ. ಕೃಷಿ ಕ್ಷೇತ್ರದ ಮೇಲೆ  100ವರೆಗೆ ಸೆಸ್‌ ವಿಧಿಸಿದ್ದಾರೆ. ಕೃಷಿ ಯಂತ್ರೋಪರಣಗಳ ಮೇಲೆ ಸೆಸ್‌ ಹಾಕಲಾಗಿದೆ. ಇದ್ಯಾವ ಅರ್ಥ ವ್ಯವಸ್ಥೆ ನನಗೆ ತಿಳಿಯುತ್ತಿಲ್ಲ. … Read more

ರೈತರಂತೆ ವೇಷತೊಟ್ಟ ಬಿಜೆಪಿ ಕಾರ್ಯಕರ್ತರಿಂದ ವಿಧ್ವಂಸಕ ಕೃತ್ಯ|  ಇಬ್ಬರು ಶಾಸಕರು 400 ಜನರನ್ನು ಕರೆತಂದಿದ್ದರೆಂಬ ಆರೋಪ!

rakesh

ನವದೆಹಲಿ(29-01-2021): ರೈತರಂತೆ ವೇಷತೊಟ್ಟ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಘನರಾಜ್ಯೋತ್ಸವದ ದಿನ ವಿಧ್ವಂಸಕ ಕೃತ್ಯವನ್ನು ನಡೆಸಿದ್ದಾರೆ. ಸಿಖ್ ಸಮುದಾಯದ ಜನರನ್ನು ದೇಶದ್ರೋಹಿಗಳಂತೆ ಚಿತ್ರಿಸಲು ಪ್ರಯತ್ನಿಸಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ. ಮಾದ್ಯಮಗಳ ಜೊತೆ ಮಾತನಾಡಿದ ರಾಕೇಶ್ ಟಿಕಾಯತ್, ಜನವರಿ 26 ರಂದು ಇಬ್ಬರು ಶಾಸಕರೊಂದಿಗೆ ಬಂದ 400 ಜನರ ತಂಡ ರೈತರ ವರ್ಚಸ್ಸನ್ನು ಹಾಳು ಮಾಡಿದ್ದಾರೆ .ಸಿಖ್ಖ್ ಜನರನ್ನು ದೇಶ ವಿರೋಧಿಗಳಂತೆ ತೋರಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ. ಗಡಿಯಲ್ಲಿ ವಿದ್ಯುತ್ ಹಾಗೂ … Read more

ಉಳ್ಳಾಲವನ್ನು ಪಾಕ್ ಗೆ ಹೋಲಿಕೆ ಮಾಡಿದ್ದ ಪ್ರಭಾಕರ  ಭಟ್ ಅವರಿಂದ ಉಳ್ಳಾಲದ ಜನತೆಗೆ ಮತ್ತೊಂದು ಸವಾಲು

prabhaker bhatt

ಮಂಗಳೂರು(28-01-2021): ಉಳ್ಳಾಲದ ಜನರಿಗೆ ತಾಕತ್ತಿದ್ದರೆ ಮುಸ್ಲಿಮೇತರರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಎಂದು ಆರ್ ಎಸ್‌ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಭಟ್, ಪಾಕಿಸ್ತಾನದಲ್ಲಿ ಮುಸ್ಲಿಮರೇ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಇದೇ ಸ್ಥಿತಿ ಉಳ್ಳಾಲದಲ್ಲಿ ಇದೆ ಎಂದು ಹೇಳಿದ್ದಾರೆ. ಉಳ್ಳಾಲದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ದೇವಸ್ಥಾನ ಮತ್ತು ದೈವಸ್ಥಾನಗಳ ಹುಂಡಿಗೆ ಬೇಡದ ವಸ್ತುಗಳನ್ನು ಹಾಕುತ್ತಿದ್ದು ಇದರಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತ ಕೆಸಲವಾಗಿದೆ‌. ಇದರಿಂದಾಗಿ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಮೊದಲು ಭಾರತದ ಭೂಭಾಗ … Read more