ರಾಜರಾಜೇಶ್ವರಿ ನಗರ & ಶಿರಾ ಕ್ಷೇತ್ರದಲ್ಲಿ ಮತದಾನ ಆರಂಭ| ಮತಪೆಟ್ಟಿಗೆಯಲ್ಲಿ ಭದ್ರವಾಗುತ್ತಿದೆ ಅಭ್ಯರ್ಥಿಗಳ ಭವಿಷ್ಯ

by election

ಬೆಂಗಳೂರು (03-11-2020):ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಗೆ ಮತದಾನ ಆರಂಭವಾಗಿದ್ದು, ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಮತಪೆಟ್ಟಿಗೆಯಲ್ಲಿ ಭದ್ರಗೊಳಿಸುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಒಟ್ಟು 1008 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಶಿರಾ ಕ್ಷೇತ್ರದಲ್ಲಿ 6 ಅತಿ ಸೂಕ್ಷ್ಮ, 64 ಸೂಕ್ಷ್ಮ ಮತಗಟ್ಟೆ ಸೇರಿ ಒಟ್ಟು 330 ಮತಗಟ್ಟೆ ಹಾಗೂ ಆರ್ . ಆರ್ . ನಗರ ಕ್ಷೇತ್ರದಲ್ಲಿ 11 ಅತಿ ಸೂಕ್ಷ್ಮ , 82 ಸೂಕ್ಷ್ಮ ಮತಗಟ್ಟೆ ಸೇರಿ ಒಟ್ಟು 678 ಮತಗಟ್ಟೆ ಸ್ಥಾಪಿಸಲಾಗಿದೆ . ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಮತಗಟ್ಟೆಯ ಸುತ್ತ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. … Read more

ಗಾಂಜಾ ಬೆಳೆಯುತ್ತಿದ್ದ ತೋಟಕ್ಕೆ ಪೊಲೀಸ್ ದಾಳಿ

marijuvana

ಶಿಕಾರಿಪುರ(14-10-2020): ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆದ ಆರೋಪಿಯ ತೋಟಕ್ಕೆ ದಾಳಿ ಮಾಡಿ, ಒಟ್ಟು 15 ಹಸಿ ಗಾಂಜಾ ಗಿಡಗಳ ವಶಪಡಿಸಿಕೊಂಡ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ವಿರುದ್ಧ NDPS ಕಾಯ್ದೆಯಡಿ  ಪ್ರಕರಣ ದಾಖಲು ಮಾಡಿದ್ದಾರೆ. ಎ ಅಣ್ಣಾಪುರ ಗ್ರಾಮದ ನಿವಾಸಿ ಆರೋಪಿ ಪಾಲಾಕ್ಷಪ್ಪ ತನ್ನ ಜಮೀನಿನಲ್ಲಿ ಮಾದಕ ವಸ್ತು ಗಾಂಜಾ ಗಿಡಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎ.ಎಸ್.ಪಿ ಶ್ರೀನಿವಾಸಲು ಶಿಕಾರಿಪುರ ಉಪ ವಿಭಾಗರವರ ಮಾರ್ಗದರ್ಶನದಲ್ಲಿ, ಗುರುರಾಜ್ ಎನ್ … Read more

ಕೊಣಾಜೆ; ಅಕ್ರಮ ಗೋಸಾಗಾಟಗಾರರ ಬೆನ್ನತ್ತಿದ ಪೊಲೀಸರು, 9 ಗೋವುಗಳ ರಕ್ಷಣೆ

ಕೊಣಾಜೆ(01-10-2020): ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದಾಗ ಬೆನ್ನತ್ತಿದ ಪೊಲೀಸರು 9 ಗೋವುಗಳನ್ನು ರಕ್ಷಿಸಿ ಪಿಕ್ ಅಪ್ ವಾಹನಗಳನ್ನು ವಶಪಡಿಸಿಕೊಂಡಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಸ್.ಐ ಮಲ್ಲಿಕಾರ್ಜುನ್ ನೇತೃತ್ವದ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಅಜಾಗರೂಕತೆಯಿಂದ ಚಲಿಸುತ್ತಿದ್ದ ಪಿಕ್ ಅಪ್ ವಾಹನವನ್ನು ಪೊಲೀಸರ ತಂಡ ಬೆನ್ನತ್ತಿದೆ. ಈ ವೇಳೆಆರೋಪಿಗಳು ಪಿಕಪ್ ಬಿಟ್ಟು ಪರಾರಿಯಾಗಿದ್ದಾರೆ. ಪಿಕ್ ವಾಹನವನ್ನು ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ ಒಂಬತ್ತು ಗೋವುಗಳಿರುವುದು ಪತ್ತೆಯಾಗಿದೆ.ವಾಹನ ಮತ್ತು ಗೋವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.