ಇಂದು ಬೆಳಿಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿಗಳ ಕಾರ್ಯಾಲಯ ಟ್ವಿಟ್ಟರ್ ನಲ್ಲಿ ಪ್ರಕಟಿಸಿದೆ.

ಭಾರತವು ಗುರುವಾರ ತನಕ 100 ಕೋಟಿ ಕೋವಿಡ್‌-19 ಲಸಿಕೆ ಡೋಸ್‌ಗಳ ವಿತರಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಅದರ ಬೆನ್ನಲ್ಲೇ ಇಂದು ಪ್ರಧಾನಿ ಮೋದಿ ಅವರ ಭಾಷಣ ನಿಗದಿಯಾಗಿದೆ. ನಿನ್ನೆ ಪ್ರಧಾನಿ ರಾಮ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಜಗತ್ತಿನ ಆರ್ಥಿಕತೆಯು ಮುಗ್ಗರಿಸುವಂತೆ ಮಾಡಿದ ಕೋವಿಡ್‌ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ ಆರೋಗ್ಯ ಕಾರ್ಯಕರ್ತರ ಪಾತ್ರದ ಕುರಿತು ಪ್ರಧಾನಿಗಳು ಬಣ್ಣಿಸಿದರು.

ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್‌-19 ದೃಢ ಪ್ರಕರಣಗಳ ಸಂಖ್ಯೆ ಕಡಿಮೆ ದಾಖಲಾಗುತ್ತಿದೆ. ಇದರಿಂದ ಕೋವಿಡ್ ನಿಂದ ತತ್ತರಿಸಿದ ದೇಶ ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ಕೋವಿಡ್ ಹಿಮ್ಮೆಟ್ಟಿಸಲು ಆರಂಭಿಸಿದ ಲಸಿಕಾ ಅಭಿಯಾನ ಅಭೂತಪೂರ್ವ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ದೇಶದಲ್ಲಿ ನೂರು ಕೋಟಿ ಲಸಿಕೆ ಡೋಸ್‌ಗಳನ್ನು ಪೂರ್ಣಗೊಳಿಸಿದೆ, ಚೀನಾ ಬಿಟ್ಟರೆ ಜಗತ್ತಿನಲ್ಲಿ ಶತಕೋಟಿ ಲಸಿಕೆ ಡೋಸ್ ಗಳನ್ನು ವಿತರಣೆ ಮಾಡಿದ ದೇಶ ಭಾರತ ಎನ್ನುವುದು ಹೆಮ್ಮೆಯಿದೆ, ಇದಕ್ಕೆ ಆರೋಗ್ಯ ಸಿಬ್ಬಂದಿ ಹಾಗೂ ಸಹಕರಿಸಿದ ದೇಶದ ಜನತೆಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.

 

ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಈಗಾಗಲೇ ಯಶಸ್ವಿಯಾದ ದೇಶದ ಜನತೆಗೆ ಧನ್ಯವಾದಗಳು ಹೇಳುವ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಏನಾದರೂ ಹೊಸ ಘೋಷಣೆ ಏನು ಮಾಡಬಹುದು ಎನ್ನುವುದು ಎಲ್ಲರಿಗೂ ಕುತೂಹಲ ಮೂಡಿಸಿದೆ.

ದೇಶವನ್ನುದ್ದೇಶಿಸಿ ಇಂದು ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಪ್ರಧಾನಿಯವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಅಧಿಕೃತವಾಗಿ ಟ್ವೀಟ್ ಮಾಡಿದೆ. ಕಳೆದ ಎಪ್ರಿಲ್-ಮೇ ತಿಂಗಳಲ್ಲಿ ದೇಶದಲ್ಲಿ ಕೋವಿಡ್ 2ನೇ ಅಲೆಯ ಭೀಕರತೆ ಕುರಿತು ಪ್ರಸ್ತಾಪ ಮಾಡುವ ಅವರು ಕೋವಿಡ್ ಹೊಸ ಪ್ರಕರಣಗಳು ಈಗ ಇಳಿಮುಖ ಆಗಿರುವ ಸಮಯದಲ್ಲಿ ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೋವಿಡ್ ಎರಡನೇ ಅಲೆಯಿಂದಾಗಿ ದೇಶದ ಕೆಲವು ಭಾಗಗಳಲ್ಲಿ ಕಟ್ಟುನಿಟ್ಟಾದ … Read more

ಯಾವುದೇ ಕಾರ್ಯ ಯೋಜನೆಗಳ ಘೋಷಣೆಯಿಲ್ಲದೇ ಮುಗಿದ ಪ್ರಧಾನಿಯ ಭಾಷಣ | ಲಾಕ್ಡೌನನ್ನು ಕಟ್ಟಕಡೆಯ ಅಸ್ತ್ರವಾಗಿಯಷ್ಟೇ ಬಳಸುವಂತೆ ನಿರ್ದೇಶನ

modhi

ನವದೆಹಲಿ: ಕೊರೋನಾ ಮಹಾಮಾರಿಯ ಎರಡನೇ ಅಲೆಯು ದೇಶಾದ್ಯಂತ ಅಪ್ಪಳಿಸಿರುವಂತೆಯೇ ಇಂದು ರಾತ್ರಿ 8:45 ರ ಹೊತ್ತಿಗೆ ಪ್ರಧಾನಿ ದೇಶವನ್ನುದ್ಧೇಶಿಸಿ ಮಾತನಾಡಿದರು. ತನ್ನ ಭಾಷಣದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಯೋಜನೆಗಳ ಬಗೆಗೆ ಘೋಷಣೆ ಮಾಡಲಿಲ್ಲ. ಭಾಷಣದಲ್ಲಿ ದೇಶದ ಜನರು ಧೈರ್ಯದಿಂದಿರುವಂತೆ ವಿನಂತಿಸಿದ ಮೋದಿ, ಕೊರೋನಾದ ಮೊದಲ ಅಲೆಯಲ್ಲಿ ಜನರು ತೋರಿಸಿದ ಧೈರ್ಯ, ಸಂಯಮವನ್ನೇ ಈಗಲೂ ಪಾಲಿಸಬೇಕೆಂದು ಕರೆ ನೀಡಿದರು. ನಾಳೆ ರಾಮನವಮಿ. ಮರ್ಯಾದಾ ಪುರುಷೋತ್ತಮನ ಮರ್ಯಾದೆ ಹಾಗೂ ರಂಜಾನ್ ಕಲಿಸುವ ಸಂಯಮವನ್ನು ಕೋವಿಡ್ ವಿರುದ್ಧದ ಹೋರಾಟದಲ್ಲಿ ಪಾಲಿಸುವಂತೆ … Read more

ಭಾರತದಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ಕೇಂದ್ರದ ಕೆಟ್ಟ ನಿರ್ಧಾರಗಳು ಕಾರಣ- ಮನಮೋಹನ್ ಸಿಂಗ್

manmohan singh

ನವದೆಹಲಿ(02-03-2021): ಕೇಂದ್ರದ ವಿರುದ್ಧ ವಾಗ್ಧಾಳಿ ನಡೆಸಿದ ಮಾಜಿ ಪ್ರಧಾನಿ ಡಾ.ಮನ್ಮೋಹನ್ ಸಿಂಗ್ ಅವರು ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಮತ್ತು 2016 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡ ಕೆಟ್ಟ ನೋಟು ನಿಷೇಧ ನಿರ್ಧಾರದಿಂದಾಗಿ ಅನೌಪಚಾರಿಕ ವಲಯವು ಅಸ್ತವ್ಯಸ್ತವಾಗಿದೆ. ಕೇಂದ್ರ ಸರಕಾರವು ರಾಜ್ಯಗಳ ಜೊತೆ ಸಮಾಲೋಚನೆಯನ್ನು ಕೂಡ ನಡೆಸುತ್ತಿಲ್ಲ ಎಂದು ಟೀಕಿಸಿದ್ದಾರೆ. ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ ಆಯೋಜಿಸಿರುವ ಅಭಿವೃದ್ಧಿ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮನಮೋಹನ್ ಸಿಂಗ್, ಭಾರತ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ನ … Read more

ಪತ್ನಿ ಮಕ್ಕಳನ್ನು ನೆನೆದು ಕಣ್ಣೀರಿಟ್ಟ ಜೋ ಬಿಡೆನ್

biden

ವಾಷಿಂಗ್ಟನ್ (26-11-2020): ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ತನ್ನ ಕುಟುಂಬವನ್ನು ನೆನೆದು ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ವಂದನಾ ಭಾಷಣದಲ್ಲಿ ಮಾತನಾಡಿದ ವಿಶ್ವದ ದೊಡ್ಡಣ್ಣ ಜೋ ಬಿಡೆನ್, ತಮ್ಮವರನ್ನು ಕಳೆದುಕೊಂಡಾಗ ಆಗುವ ನೋವು, ದು:ಖದ ಅನುಭವ ನನಗೆ ಚೆನ್ನಾಗಿ ತಿಳಿದಿದೆ ಎಂದು ಕೋವಿಡ್ ಸೋಂಕಿನಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಜೋ ಬಿಡೆನ್ ಹೇಳಿದ್ದಾರೆ.  ವೈಯಕ್ತಿಕ ಜೀವನದಲ್ಲಿ ಜೋ ಬಿಡೆನ್ ನಿಜಕ್ಕೂ ನಿರ್ಭಾಗ್ಯವಂತ. ಯಾಕೆಂದರೆ ಬಿಡೆನ್ ಪತ್ನಿ ಮತ್ತು ಪುತ್ರಿ 1972ರಲ್ಲಿ ಕ್ರಿಸ್ ಮಸ್ ಸಂದರ್ಭದಲ್ಲಿ ನಡೆದ ಕಾರು … Read more

ಕಾಂಗ್ರೆಸ್ ಬಿಟ್ಟರೂ ಸಿಂಧಿಯಾಗೆ ಕೈ ಮೇಲೆ ಪ್ರೀತಿ| ವಿಡಿಯೋ ವೀಕ್ಷಿಸಿ   

jyothiradithya sindiya

ಮಧ್ಯಪ್ರದೇಶ (02-11-2020): ಕಮಲನಾಥ್ ಸರಕಾರವನ್ನು ಉರುಳಿಸಿ ಬಿಜೆಪಿಗೆ ಸೇರಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಇನ್ನೂ ಕಾಂಗ್ರೆಸ್ ಮೇಲಿನ‌ ತನ್ನ‌ ಪ್ರೀತಿಯನ್ನು ಬಿಟ್ಟಿಲ್ವ ಎಂದು ನೆಟ್ಟಿಗರು ಕೇಳಿದ್ದಾರೆ. ನಿನ್ನೆ ಚುನಾವಣಾ ಪ್ರಚಾರ ಸಭೆಯಲ್ಲಿ , ಬಿಜೆಪಿ ವೇದಿಕೆಯಲ್ಲಿ ಬಿಜೆಪಿ ಪರವಾಗಿ ಮಾತನಾಡಿ, ಕೊನೆಗೆ ಕಾಂಗ್ರೆಸ್ ನ ಕೈ ಚಿಹ್ನೆಗೆ ಮತ ಹಾಕಿ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಈ ಬಗ್ಗೆ  ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದೆ.  ಬಿಜೆಪಿ ಅಭ್ಯರ್ಥಿ ಇಮರ್ತಿ ದೇವಿಯವರ ಪರ ಗ್ವಾಲಿಯರ್ ನ ದಬ್ರಾ ಪಟ್ಟಣದಲ್ಲಿ … Read more

ಕೋವಿಡ್ ಬಗ್ಗೆ ಜಾಥಾ ಉದ್ಘಾಟಿಸಿ ಮಹತ್ವದ ಅಭಿಪ್ರಾಯ ಹಂಚಿಕೊಂಡ ನ್ಯಾಯಾಧೀಶೆ ಶಾಹಿದಾ

covid camphin

ಹಲಗೂರು (30-10- 2020): ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹೆಚ್ಚು ಕರೋನ ವೈರಸ್ ಬಗ್ಗೆ ಸಾರ್ವಜನಿಕರು ಭಯಪಡುವ ಅಗತ್ಯ ಇಲ್ಲ ಮುಂಜಾಗ್ರತೆ ಕ್ರಮವಾಗಿ ಎಚ್ಚರಿಕೆಯಿಂದ ಇರಬೇಕು ಪ್ರತಿಯೊಬ್ಬರಲ್ಲೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು.ಸ್ಯಾನಿಟೈಸರ ಉಪಯೋಗಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸಿದರೆ ಇಂತಹ ರೋಗದಿಂದ ದೂರ ಇರಲು ಸಾಧ್ಯವಾಗುತ್ತದೆ ಎಂದು ಮಳವಳ್ಳಿ ನ್ಯಾಯಾಲಯದ ನ್ಯಾಯಾಧೀಶರಾದ k. ಶಾಹಿದಾ ತಿಳಿಸಿದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಸಮಿತಿ ಬೆಂಗಳೂರು, ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಳವಳ್ಳಿ ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ … Read more

ಇಂದು ಸಂಜೆ 6ಕ್ಕೆ ದೇಶವನ್ನುದ್ದೇಶಿಸಿ ಮೋದಿ ಭಾಷಣ: ಎಲ್ಲರಲ್ಲೂ ಕುತೂಹಲ

modhi

ನವದೆಹಲಿ(20-10-2020): ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 6 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ಎಲ್ಲರಲ್ಲೂ ಕುತೂಹಲ ಉಂಟಾಗಿದೆ. ಮಧ್ಯಾಹ್ನ ನರೇಂದ್ರ ಮೋದಿ ಈ ಕುರಿತು ಟ್ವೀಟ್ ಮಾಡಿದ್ದಾರೆ. ಸಂಜೆ 6 ಗಂಟೆಗೆ ದೇಶದ ಜನರಿಗೆ ಸಂದೇಶವೊಂದನ್ನು ನೀಡಲಿದ್ದೇನೆ ಎಂದು ಹೇಳಿದ್ದಾರೆ. ಕೋವಿಡ್ ಅನ್ ಲಾಕ್ 3.0 ಬಳಿಕ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿರಲಿಲ್ಲ. ಕೋವಿಡ್ ಹೆಚ್ಚಳ. ಪ್ರವಾಹ, ಅರ್ಥಿಕ ಕುಸಿತ ಬೆನ್ನಲ್ಲೇ ಮೋದಿ ಭಾಷಣ ಮತ್ತಷ್ಟು ಕುತೂಹಲವನ್ನುಂಟು ಮಾಡಿದೆ.    

ವಿವಾಹದ ಕನಿಷ್ಠ ವಯಸ್ಸನ್ನು ಕೇಂದ್ರವು ಶೀಘ್ರದಲ್ಲೇ ಪರಿಷ್ಕರಿಸಲಿದೆ: ಪಿಎಂ ನರೇಂದ್ರ ಮೋದಿ

pm modhi

ನವದೆಹಲಿ(16-10-2020): ಬಾಲಕಿಯರ ಕನಿಷ್ಠ ವಿವಾಹ ವಯಸ್ಸನ್ನು ಪರಿಷ್ಕರಿಸುವ ಬಗ್ಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಕಳೆದ ಆರು ವರ್ಷಗಳಲ್ಲಿ ಸರ್ಕಾರ ಕೈಗೊಂಡ ಹಲವಾರು ಪ್ರಯತ್ನಗಳಿಂದಾಗಿ ಶಿಕ್ಷಣದಲ್ಲಿ ಬಾಲಕಿಯರ ಒಟ್ಟು ದಾಖಲಾತಿ ಅನುಪಾತವು ದೇಶದಲ್ಲಿ ಮೊದಲ ಬಾರಿಗೆ ಬಾಲಕರಿಗಿಂತ ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದರು. ಕನಿಷ್ಠ ವಿವಾಹ ವಯಸ್ಸಿನ ಕುರಿತು ಸಮಿತಿಯಿಂದ ವರದಿಯನ್ನು ಸ್ವೀಕರಿಸಿದ ನಂತರ ಈ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆಹಾರ ಮತ್ತು ಕೃಷಿ … Read more

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾಷಣ ಮಾಡುವಾಗ ಭಾರತದ ಪ್ರತಿನಿಧಿ ಸಭಾತ್ಯಾಗ ಮಾಡಿದ್ದಾರೆ.

ನ್ಯೂಯಾರ್ಕ್‌(28-09-2020):ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನವನ್ನು ಉದ್ದೇಶಿಸಿ ಇಮ್ರಾನ್ ಖಾನ್ ಭಾಷಣ ಮಾಡುತ್ತಿದ್ದರು. ವಿಶ್ವಸಂಸ್ಥೆಯಲ್ಲಿ ಭಾರತದ ‘ಪರ್ಮನೆಂಟ್ ಮಿಷನ್’ನ ಕಾರ್ಯದರ್ಶಿ ಮಿಜಿಟೊ ವಿನಿಟೊ ಸಭೆಯಿಂದ ಹೊರ ನಡೆದರು. ಅವರು ಸಭಾತ್ಯಾಗ ಮಾಡುತ್ತಿರುವ ವಿಡಿಯೊವನ್ನು ಎಎನ್‌ಐ ಟ್ವೀಟ್ ಮಾಡಿದೆ. ಇಮ್ರಾನ್ ಭಾಷಣದಲ್ಲಿ ಮೋದಿ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ್ದಲ್ಲದೆ, ಜಮ್ಮು-ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದರು. ಇಮ್ರಾನ್ ಭಾಷಣದಲ್ಲಿ ಮೋದಿ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ್ದಲ್ಲದೆ, ಜಮ್ಮು-ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದರು.