ನಿರಂತರ ಪ್ರಶ್ನೆಗಳ ಸುರಿಮಳೆ | ಖುದ್ದು ಪ್ರಧಾನಿಯೇ ಪತ್ರಕರ್ತರ ಮೇಲೆ ಸ್ಯಾನಿಟೈಜರ್ ಎರಚಿದರು

ಥಾಯ್ಲೆಂಡ್: ಪತ್ರಕರ್ತರ ಪ್ರಶ್ನೆಗಳ ಕಾರಣದಿಂದ ರಾಜಕಾರಣಿಗಳಿಗೆ ಅಸಹನೆ ಉಂಟಾಗುತ್ತಿರುವು ಇದೇ ಮೊದಲಲ್ಲ. ಆದರೆ ದೇಶವೊಂದರ ಖುದ್ದು ಪ್ರಧಾನಿಯೇ ಪ್ರಶ್ನೆಗಳಿಂದ ಬೇಸತ್ತು ವಿಲಕ್ಷಣ ಪ್ರತಿಕ್ರಿಯೆ ನೀಡುವುದು ಅಪರೂಪ. ಥಾಯ್ಲೆಂಡಿನ ಸರಕಾರೀ ಕಟ್ಟೋಣವೊಂದರಲ್ಲಿ ನಡೆದ ಈ ಘಟನೆಯ ವೀಡಿಯೋ ವೈರಲಾಗಿದೆ. ಪತ್ರಕರ್ತರ ನಿರಂತರ ಪ್ರಶ್ನೆಗಳಿಂದ ಕೋಪಿಸಿ ಕೊಂಡ ಚಾನ್ ಒ ಚಾ ತಾನು ಮಾತನಾಡುತ್ತಿದ್ದ ಮೈಕನ್ನು ಬಿಟ್ಟು, ದೊಡ್ಡ ಸಂಖ್ಯೆಯ ಪತ್ರಕರ್ತರತ್ತ ಸೆನಿಟೈಜರ್ ಎರಚಿದ್ದಾರೆ. ಕೊರೋನಾ ಮಹಾಮಾರಿಯ ಬಳಿಕ ಸೆನಿಟೈಜರ್ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಕಾಣಲು ಸಿಗುತ್ತಿದೆ. 2014 ರಂದು ಥಾಯ್ಲೆಂಡಿನಲ್ಲಿ ಸೇನಾದಂಗೆ ನಡೆದಿತ್ತು. ನಿವೃತ್ತ ಸೇನಾಧಿಕಾರಿಯಾಗಿರುವ ಚಾನ್ ಒ … Read more