ಬ್ರಾಹ್ಮಣರನ್ನು ಅವಮಾನಿಸಲಾಗಿದೆಯೆಂದು ಆರೋಪ | ಖ್ಯಾತ ನಟ ಚೇತನ್ ವಿರುದ್ಧ ದೂರು ದಾಖಲು..

ಬೆಂಗಳೂರು: ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಖ್ಯಾತ ನಟ ಚೇತನ್ ವಿರುದ್ಧ ದೂರು ದಾಖಲಿಸಲಾಗಿದೆ. ಬ್ರಾಹ್ಮಣ ಸಮುದಾಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ, ಈ ಕುರಿತು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ನಟ ಚೇತನ್ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ. ಚೇತನ್ ಹೇಳಿಕೆಯಿಂದಾಗಿ ಬ್ರಾಹ್ಮಣರಿಗೆ ನೋವಾಗಿದೆ. ನಟ ಚೇತನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ. ನಟ ಚೇತನ್ ಈ ಕೂಡಲೇ ಕ್ಷಮೆ ಯಾಚಿಸಬೇಕು, ಯಾರ ವಿರುದ್ದವೂ ಈ ರೀತಿ ಮಾತನಾಡಬಾರದು ಎಂದು ತಾಕೀತು ಮಾಡಿದ್ದಾರೆ. ನಿನ್ನೆ ತಾನೇ … Read more

ಮಗಳನ್ನು ಜೈಲಿನಿಂದ ಬಿಡಿಸಲು ಕಾರು, ಪ್ಲಾಟನ್ನೇ ಮಾರಾಟಕ್ಕಿಟ್ಟ ರಾಗಿಣಿ ಪೋಷಕರು

ragini

ಬೆಂಗಳೂರು(12/11/2020): ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಅವರಿಗಾಗಿ ಅವರ ಪೋಷಕರು ಕಾರನ್ನೇ ಮಾರಾಟಕ್ಕಿಟ್ಟಿದ್ದಾರೆ. ಸದ್ಯ ರಾಗಿಣಿ‌ ದ್ವಿವೇದಿ ಜೈಲಿನಲ್ಲಿದ್ದು, ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ರಾಗಿಣಿ ದ್ವಿವೇದಿಯವರನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಅವರ ಹೆತ್ತವರು ಈ ಹಿಂದೆ ಆರ್ಥಿಕ‌ ಸಂಕಷ್ಟದ‌ ಹಿನ್ನೆಲೆಯಲ್ಲಿ ಎರಡು ಕೋಟಿ ಮೌಲ್ಯದ ಪ್ಲಾಟನ್ನು ಮಾರಾಟಕ್ಕಿಟ್ಟಿದ್ದರು. ದುರಾದೃಷ್ಟವಶಾತ್ ಪ್ಲಾಟ್ ಮಾರಾಟಗೊಂಡಿರಲಿಲ್ಲ. ಆದ್ದರಿಂದ ಇದೀಗ ತಮ್ಮ ಕಾರುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಈ ಬಗ್ಗೆ ಆಯ್ದ ವಾಟ್ಸ್ ಆಪ್ … Read more

ಮಾದಕ ಜಾಲ ಪ್ರಕರಣ; ಕೇರಳದ ಮಾಜಿ ಗೃಹ ಸಚಿವರ ಪುತ್ರ ಅರೆಸ್ಟ್

binish kodiyeri

ಬೆಂಗಳೂರು(29/10/2020): ಸ್ಯಾಂಡಲ್ ವುಡ್ ಮಾದಕ ಜಾಲದ ಪ್ರಕರಣ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ಸಂಬಂಧ ಇದೀಗ  ಕೇರಳದ ಮಾಜಿ ಗೃಹ ಸಚಿವ ಹಾಗೂ ಸಿಪಿಎಂ ಕೇರಳ ರಾಜ್ಯ ಕಾರ್ಯದರ್ಶಿ  ಕೋಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೋಡಿಯೇರಿಯನ್ನು ಬೆಂಗಳೂರು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರಿನ ಕಾಟನ್ ಪೇಟೆಯಲ್ಲಿ ದಾಖಲಾದ ಮಾದಕ ಜಾಲ ಪ್ರಕರಣದ ಪ್ರಮುಖ ಆರೋಪಿ ಅನೂಪ್ ನೊಂದಿಗೆ ಬೀನೇಶ್ ನಂಟು ಹೊಂದಿದ್ದು, ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ವೊಂದು ತೆರೆಯಲು ಬಿನೀಶ್ ಡ್ರಗ್ಸ್ ಪೆಡ್ಲರ್ ಅನೂಪ್​ಗೆ … Read more