ಸೌದಿ ಅರೇಬಿಯಾ: ರಭಸವಾಗಿ ಬೀಸುತ್ತಿರುವ ಧೂಳಿನ ಮಾರುತ

ರಿಯಾದ್: ಸೌದಿ ಅರೇಬಿಯಾದ ಹಲವು ಕಡೆಗಳಲ್ಲಿ ರಭಸವಾಗಿ ಧೂಳು ತುಂಬಿದ ಗಾಳಿ ಬೀಸುತ್ತಿರುವುದು ವರದಿಯಾಗಿದೆ. ರಿಯಾದ್, ಅಲ್ ಜೌಫ್, ಖಸೀಮ್, ಬಹಾಯ್, ಮಕ್ಕ, ಮದೀನಗಳಲ್ಲಿ ಇದರ ತೀವ್ರತೆಯು ಹೆಚ್ಚಾಗಿದ್ದು, ರಸ್ತೆ ಸಂಚಾರಕ್ಕೆ ಅಡೆತಡೆಯುಂಟಾಗಿದೆ. ಜನರು ಅತ್ಯಗತ್ಯ ಕೆಲಸಗಳಿಗಲ್ಲದೇ ಹೊರಗೆ ಇಳಿಯಬಾರದೆಂದು ಹವಾಮಾನ ಇಲಾಖೆಯು ಸೂಚನೆ ನೀಡಿದೆ. ಹಲವೆಡೆ ವಿದ್ಯುತ್ ದೀಪಗಳ ಕಂಬಗಳು, ತಾತ್ಕಾಲಿಕವಾಗಿ ಹಾಕಲಾಗುವ ಡೇರೆಗಳು ಭೂಮಿಗೆ ಒರಗಿದ ಸ್ಥಿತಿಯಲ್ಲಿ ಕಂಡುಬಂದಿದೆ. رياح شديدة وموجات غبار كثيفة على #جبة شمال #حائل أدت إلى سقوط … Read more