ಪಟೇಲ್ ಕ್ರೀಡಾಂಗಣಕ್ಕೆ ಮೋದಿ ಹೆಸರು: ಸಾಮ್ನಾ ಸಂಪಾದಕೀಯದಲ್ಲಿ ಮಹತ್ವದ ಅಂಶ ಉಲ್ಲೇಖಿಸಿ ಟೀಕೆ

shivashene

ಮುಂಬೈ(26-02-2021): ಗುಜರಾತ್‌ನ ಸರ್ದಾರ್ ಪಟೇಲ್ ಕ್ರೀಡಾಂಗಣಕ್ಕೆ ‘ನರೇಂದ್ರ ಮೋದಿ ಕ್ರೀಡಾಂಗಣ’ ಎಂದು ಮರುನಾಮಕರಣ ಮಾಡಿರುವುದಕ್ಕೆ ಶಿವಸೇನೆ  ‘ಸಾಮ್ನಾ’ದ ಸಂಪಾದಕೀಯದಲ್ಲಿ ಟೀಕಿಸಿದ್ದು, ಜನಮತ ಬೇಜವಾಬ್ದಾರಿ ವರ್ತನೆಗೆ ಸಿಕ್ಕಿದ ಪರವಾನಿಗೆಯಲ್ಲ ಎಂದು ಹೇಳಿದೆ. ಮೋದಿ ಸರ್ಕಾರಕ್ಕೆ ಕಳೆದ ಚುನಾವಣೆಯಲ್ಲಿ ದೊರೆತ ಅಭೂತಪೂರ್ವ ಬೆಂಬಲವು ಬೇಜವಾಬ್ದಾರಿಯಿಂದ ವರ್ತಿಸಲು ದೊರೆತ ಪರವಾನಗಿಯಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರನ್ನು ಇತಿಹಾಸದಿಂದ ಅಳಿಸಲು ಯತ್ನಿಸಲಾಗುತ್ತಿದೆ. ಮೋದಿಯ ಭಕ್ತರು ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ನೆಹರು, ಇಂದಿರಾ ಗಾಂಧಿಗಿಂತಲೂ ಮೋದಿ ದೊಡ್ಡವರೆಂದು ಭಾವಿಸಿದ್ದಾರೆ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ. … Read more

ಶಿವಸೇನೆ ಮುಖ್ಯಸ್ಥ ಸಂಜಯ್ ರೌತ್ ಆಸ್ಪತ್ರೆಗೆ ದಾಖಲು

sanjay rawth

ಮುಂಬೈ(12-03-2020): ಶಿವಸೇನೆ ಸಂಸದ ಮತ್ತು ಸಾಮ್ನಾದ ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರೌತ್ ಅವರನ್ನು ಚಿಕಿತ್ಸೆಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜಯ್ ರೌತ್ ಎರಡನೇ ಬಾರಿಗೆ ಆಂಜಿಯೋಪ್ಲ್ಯಾಸ್ಟಿಗಾಗಿ ಹೋಗುತ್ತಿದ್ದಾರೆ. ಸಂಜಯ್ ರೌತ್ ಒಂದು ವರ್ಷದ ಹಿಂದೆ ಮತ್ತೊಂದು ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರು. ಸಂಜಯ್ ರೌತ್ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾವಿಕಾಸ್ ಅಘಾದಿ  ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.