ಇಂಧನ ಬೆಲೆ ಏರಿಕೆ: ಜೂನ್ 11ಕ್ಕೆ ಕಾಂಗ್ರೆಸ್ ನಿಂದ ದೇಶವ್ಯಾಪಿ ಸಾಂಕೇತಿಕ ಪ್ರತಿಭಟನೆ

ನವದೆಹಲಿ: ದೇಶದಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಇಂಧನ ಬೆಲೆ ಏರಿಕೆ ವಿರೋಧಿಸಿ ಜೂ.11ಕ್ಕೆ ದೇಶವ್ಯಾಪಿ ಸಾಂಕೇತಿಕ ಪ್ರತಿಭಟನೆ ನಡೆಸಲು ಮುಂದಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಇಂಧನ ಬೆಲೆಗ ರೂ.100 ಗಡಿ ದಾಟಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷವು ಬೀದಿಗಿಳಿಯಲು ನಿರ್ಧರಿಸಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಎಲ್ಲ ರಾಜ್ಯ ಘಟಕಗಳಿಗೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುವಂತೆ ಸೂಚಿಸಲಾಗಿದೆ. ಕೋವಿಡ್ ಕಠಿಣ ಸಂದರ್ಭದಲ್ಲಿ ಜನತೆ ಉದ್ಯೋಗ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂಥ … Read more

ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ: ಪ್ರಯಾಣಕರು ಹೈರಾಣ

ಬೆಂಗಳೂರು: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಕೆಲವೆಡೆ ಬಸ್ ಸಂಚಾರ ಆರಂಭವಾಗಿದ್ದರೂ ಸುಗಮ ಸಂಚಾರಕ್ಕೆ ಅನುವು ಆಗಿಲ್ಲ. ಸರ್ಕಾರದ ಎಚ್ಚರಿಕೆಗಳಿಗೆ ಜಗ್ಗದ ಸಾರಿಗೆ.ನೌಕರರು ಇಂದು ಕೂಡ ಕೂಡ ಮುಷ್ಕರ ಮುಂದುವರೆಸಲು ನಿರ್ಧರಿಸಿದ್ದಾರೆ. ರಾಜ್ಯದಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಖಾಸಗಿ ಬಸ್ ಗಳ ಪ್ರಯಾಣ ದರ ಹೆಚ್ಚಿಸಿವೆ. ಯುಗಾದಿ ಹಬ್ಬದ ಪ್ರಯುಕ್ತ ಊರಿನ ಕಡೆಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ. ನೌಕರರ ಮುಷ್ಕರಕ್ಕೆ ಬ್ರೇಕ್ ಹಾಕಲು ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ 128 … Read more

ಸಾರಿಗೆ ನೌಕರರು ಮುಷ್ಕರ ಮುಂದುವರೆಸಿದರೆ ಜನರೇ ಖಾಸಗೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ : ಸಂಸದ ಪ್ರತಾಪ್ ಸಿಂಹ 

ಮೈಸೂರು: ರೈತರನ್ನು ದಾರಿ ತಪ್ಪಿಸಿದ ರೈತ ಮುಖಂಡರೊಬ್ಬರು ಈಗ ಕೆಎಸ್ಆರ್ ಟಿಸಿ ನೌಕರರನ್ನು ದಾರಿ ತಪ್ಪಿಸುತ್ತಿದ್ದಾರೆ. ಆ ಮುಖಂಡನನ್ನು ನಾಯಕನನ್ನಾಗಿ ಮಾಡಿಕೊಂಡು ಹೋರಾಟ ಮಾಡುತ್ತಿರುವುದೇ ತಪ್ಪು ನಿರ್ಧಾರ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ನೌಕರರ ಮುಷ್ಕರವನ್ನು ಟೀಕಿಸಿದ್ದಾರೆ. ಕೆಎಸ್ಆರ್ ಟಿಸಿ ಈಗ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಹೋರಾಟ ನಡೆಸುವುದು ಸರಿಯಲ್ಲ. ಈಗ ಹೋರಾಟ ಮುಂದುವರಿದರೆ ಖಾಸಗೀಕರಣದ ಧ್ವನಿ ಕೇಳು ಬರುತ್ತದೆ. ಜನರೇ ಖಾಸಗೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ. ಜನರು ಈ ರೀತಿ ಧ್ವನಿ ಎತ್ತುವಂತೆ ಮಾಡಬೇಡಿ. … Read more

ಮುಷ್ಕರ ಮಾಡದಂತೆ ನನಗೆ ಕೂಡಿ ಹಾಕಿದ್ದಾರೆ: ಉಡುಪಿ KSRTC ಮೆಕ್ಯಾನಿಕ್ ಕಣ್ಣೀರು

ಉಡುಪಿ: ನನಗೆ ಪ್ರತಿಭಟನೆ ಮಾಡಲು ಬಿಡುತ್ತಿಲ್ಲ. ನನ್ನನ್ನು ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಕೂಡಿ ಹಾಕಿದ್ದಾರೆ. ನಾನು ಕೆಎಸ್ಆರ್ ಟಿಸಿ ನಂಬಿಕೊಂಡು ಬಂದಿದ್ದೇನೆ. ನನ್ನ ಹತ್ತಿರ ಕಾಸಿಲ್ಲ, ನಾನು ಬಡವ, ಕಾಸಿದ್ದರೆ ಎಂಎಲ್‌ಎ ಆಗುತ್ತಿದ್ದೆ, ಹೀಗಾಗಿ ನಾನು ಮೆಕ್ಯಾನಿಕ್ ಆಗಿದ್ದೇನೆ. ನಮ್ಮ ಕಷ್ಟ ಈ ರಾಜಕಾರಣಿಗಳಿಗೆ ಅರ್ಥ ಆಗಲ್ಲ, ಸರ್ಕಾರ ಅರ್ಥ ಮಾಡಿಕೊಂಡು ಸಂಬಳ ಹೆಚ್ಚಿಸಬೇಕು ಎಂದು ಉಡುಪಿಯ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಶ್ರೀಕಾಂತ್ ರೆಡ್ಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಣ್ಣೀರಿಟ್ಟಿದ್ದಾರೆ. ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ … Read more

ದಕ್ಷಿಣ ಭಾರತದಲ್ಲೂ ರೈತ ಪ್ರತಿಭಟನೆಯ ಕಾವು | ದಿಲ್ಲಿ ಪ್ರತಿಭಟನೆ ಬೆಂಬಲಿಸಿ ಮಾರ್ಚ್ 31ರಂದು ಬೆಳಗಾವಿಯಲ್ಲಿ ಬೃಹತ್ ರೈತ ಸಮಾವೇಶ

ಬೆಳಗಾವಿ: ಕೇಂದ್ರದ ರೈತ ವಿರೋಧಿ ನೀತಿ ವಿರುದ್ಧ ಕಳೆದ ಹಲವಾರು ದಿನಗಳಿಂದ ಉತ್ತರ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ದಕ್ಷಿಣ ಭಾರತಕ್ಕೂ ವಿಸ್ತರಿಸುವ ಉದ್ದೇಶದಿಂದ ಕರ್ನಾಟಕದ ಮೂರು ಕಡೆಗಳಲ್ಲಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದೆ. ಮಾ. 31 ರಂದು ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಬೃಹತ್‌ ರೈತ ಸಮಾವೇಶ ನಡೆಯಲಿಕ್ಕಿದೆ. ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಆರು ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಅಖಿಲ ಭಾರತ ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕಿ ಚುಕ್ಕಿ ನಂಜುಂಡಸ್ವಾಮಿ … Read more

ತ್ಯಾಜ್ಯ ಸಂಗ್ರಹಕರಿಗೆ 6 ತಿಂಗಳಿನಿಂದ ವೇತನ ಪಾವತಿಸಿಲ್ಲ| ಬಿಬಿಎಂಪಿ ವಿರುದ್ಧ ಕಾರ್ಮಿಕರ ಪ್ರತಿಭಟನೆ

bbmp workrse

ಬೆಂಗಳೂರು(27-02-2021): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಳೆದ ಆರು ತಿಂಗಳಿನಿಂದ ತ್ಯಾಜ್ಯ ಸಂಗ್ರಹಕರಿಗೆ ವೇತನ ಪಾವತಿಸಿಲ್ಲ. ಇದಿರಿಂದಾಗಿ  ಹೊಸ ತಿಪ್ಪೆಸಂದ್ರ ಬಳಿ ತ್ಯಾಜ್ಯ ಸಂಗ್ರಹ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ವೇತನ ಪಾವತಿ ಮಾಡದಿರುವುದು ಬೆಂಗಳೂರಿನಾದ್ಯಂತದ ವಿವಿಧ ವಾರ್ಡ್‌ಗಳಲ್ಲಿ ನಿರಂತರ ಸಮಸ್ಯೆಯಾಗಿದೆ. ಆದರೆ ಗುತ್ತಿಗೆದಾರರು ಮುಷ್ಕರ ನಡೆಸುತ್ತಿಲ್ಲ ಏಕೆಂದರೆ ಅದು ಅವರಿಗೆ ಮತ್ತಷ್ಟು ಹೊರೆ ಮತ್ತು ನಾಗರಿಕರಿಗೆ ಅನಾನುಕೂಲವಾಗಲಿದೆ. ಹೆಚ್ಚುತ್ತಿರುವ ಮಸೂದೆಗಳು ಮತ್ತು ಇಎಂಐಗಳು, ತೆರಿಗೆ ಪಾವತಿಗೆ ಗಡುವು, ಕಾರ್ಮಿಕರ ವೇತನ ಮತ್ತು ಇತರ ವೆಚ್ಚಗಳು ಈ … Read more

ಪಿ ಎಫ್ ಐ ಕಾರ್ಯಕರ್ತರ ಬಂಧನ ಖಂಡಿಸಿ ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ವತಿಯಿಂದ ವಿವಿಧ ಕಡೆ ಪ್ರತಿಭಟನೆ

pfi

ಬೆಳ್ತಂಗಡಿ(25-02-2021): ಸಂಘಟನಾ ಕಾರ್ಯವೈಖರಿಯಲ್ಲಿ ನಿರತರಾಗಿದ್ದ ಇಬ್ಬರು ಪಿ ಎಫ್ ಐ ಕಾರ್ಯಕರ್ತರನ್ನು ಬಂಧಿಸಿ ಚಿತ್ರಹಿಂಸೆ ನೀಡಿದ ಉತ್ತರ ಪ್ರದೇಶ ಸರಕಾರ ಮತ್ತು ಪೊಲೀಸರ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಿತು. ಬೆಳ್ತಂಗಡಿ ಜಿಲ್ಲಾ ವತಿಯಿಂದ ಕಕ್ಕಿಂಜೆ, ಉಜಿರೆ, ಬೆಳ್ತಂಗಡಿ, ಕಾಜೂರು, ಗುರುವಾಯನಕೆರೆ, ಕನ್ನಡಿಕಟ್ಟೆ, ಪಿಳ್ಯ, ಪಡ್ಡಂದಡ್ಕ, ಮದ್ದಡ್ಕ, ಮಡಂತ್ಯಾರು, ಪುಂಜಾಲಕಟ್ಟೆ, ಪಾಂಡವರಕಲ್ಲು, ಮೂರುಗೋಳಿ, ಬಂಗೇರಕಟ್ಟೆ, ಕುದ್ರಡ್ಕ, ವಾಮದಪದವು ಮತ್ತು ಎನ್ ಸಿ ರೋಡ್ ಸೇರಿದಂತೆ 17 ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ ಘೋಷಣೆ … Read more

40ಲಕ್ಷ ಟ್ರ್ಯಾಕ್ಟರ್ ಗಳು…ರೈತರಿಂದ ಸಂಸತ್ತಿಗೆ ಮೆರವಣಿಗೆ?

rakesh tikayath

ಸಿಕಾರ್ (24-02-2021): ಕೇಂದ್ರವು ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ, ಪ್ರತಿಭಟನಾ ನಿರತ ರೈತರು ಸಂಸತ್ತಿಗೆ ಘೇರಾವ್ ಹಾಕಲಿದ್ದಾರೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದು, ದೆಹಲಿ ಮೆರವಣಿಗೆ ತೆರಳಲು ಯಾವುದೇ ಸಮಯದಲ್ಲಿ ಕರೆ ನೀಡಬಹುದು, ಇದಕ್ಕೆ ಸಿದ್ದರಾಗಬೇಕು ಎಂದು ಹೇಳಿದ್ದಾರೆ. ಟಿಕಾಯತ್ ರಾಜಸ್ಥಾನದ ಸಿಕಾರ್ ನಲ್ಲಿ ಯುನೈಟೆಡ್ ಕಿಸಾನ್ ಮೋರ್ಚಾದ ಕಿಸಾನ್ ಮಹಾಪಂಚಾಯತ್ ಆಯೋಜಿಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಈ ಬಾರಿ ಸಂಸತ್ತು ಘೆರಾವ್‌ಗೆ ಕರೆ ನೀಡುತ್ತೇವೆ. ನಾವು ಅದನ್ನು ಘೋಷಿಸಿ ನಂತರ ದೆಹಲಿಯತ್ತ ಸಾಗುತ್ತೇವೆ. … Read more

ಬೀದರ್ ನಲ್ಲಿ ರೈಲು ತಡೆ ಚಳುವಳಿಗೆ ಪೊಲೀಸರಿಂದ ತಡೆ

formrse

ಬೀದರ್ (18-02-2021: ಕೃಷಿ ಕಾಯ್ದೆಗಳನ್ನು ಖಂಡಿಸಿ ರೈಲು ತಡೆ ಚಳುವಳಿ ನಡೆಸಲು ಮುಂದಾದ ರೈತರನ್ನು ಬೀದರ್ ಪೊಲೀಸರು ತಡೆದಿದ್ದಾರೆ. ಜಿಲ್ಲಾ ರೈತ ಸಂಘ ಮತ್ತು ಹಸಿರು ಅಧ್ಯಕ್ಷ ಸಿದ್ರಾಮಪ್ಪ ಆಣದೂರ ನೇತೃತ್ವದಲ್ಲಿ ರೈಲು ತಡೆ ನಡೆಸಲು ಪ್ರತಿಭಟನಾಕಾರರು ಮುಂದಾಗಿದ್ದರು. ಈ ವೇಳೆ ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸರು ಮುಖ್ಯ ದ್ವಾರದಲ್ಲಿ ರೈತರನ್ನು ತಡೆದಿದ್ದಾರೆ. ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು ಪೊಲೀಸರ ಜತೆ ವಾಗ್ವಾದ ನಡೆಸಿದರು. ಬಳಿಕ ರೈಲು ಇಂಜಿನ್ ಎದುರಿಗೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಯಿತು.     … Read more

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 5,000 ರೈತರ ಮೇಲೆ ಕೇಸ್! ಚುನಾವಣಾ ಸಮಾವೇಶಕ್ಕೆ ಇಲ್ಲದ ನಿರ್ಬಂಧ ರೈತರಿಗೆ?

ಅಲಿಘರ್(11-02-2021):  ಅಲಿಘರ್ ರೈತರ ಸಭೆಯಲ್ಲಿ ಪಾಲ್ಗೊಂಡಿದ್ದ ಆರ್ ಎಲ್ ಡಿ ಮುಖಂಡ ಜಯಂತ್ ಚೌಧರಿ ಸೇರಿ 5 ಸಾವಿರ ಮಂದಿ ವಿರುದ್ಧ ಯುಪಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಕೋವಿಡ್-19 ಶಿಷ್ಟಾಚಾರ ಉಲ್ಲಂಘನೆ ಆರೋಪದ ಮೇರೆಗೆ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಚೌಧರಿ ಸೇರಿದಂತೆ 22 ಜನರ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ. ಇತರರ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಅಲಿಘರ್ ನಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ‘ಮಹಾಪಂಚಾಯತ್’ ಪ್ರತಿಭಟನೆಯನ್ನು ನಡೆಸಲಾಗಿತ್ತು. … Read more