ಸೆಂಟ್ರಲ್ ಬ್ಯಾಂಕ್ ಮತ್ತು ಇಂಡಿಯನ್ ಓವರ್‍ ಸೀಸ್ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಶಿಫಾರಸು ಮಾಡಿದ ನೀತಿ ಆಯೋಗ

ನವದೆಹಲಿ: ಸೆಂಟ್ರಲ್ ಬ್ಯಾಂಕ್ ಮತ್ತು ಇಂಡಿಯನ್ ಓವರ್ ಸೀಸ್ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ನೀತಿ ಆಯೋಗವು ಶಿಫಾರಸು ಮಾಡಿದೆ. ಒಕ್ಕೂಟ ಸರಕಾರದ ಬಜೆಟಿನಲ್ಲಿ ಖಾಸಗೀಕರಣ ಮಾಡುವ ಬಗ್ಗೆ ನಿರ್ದೇಶನ ನೀಡಲಾಗಿತ್ತು. ಅದೇ ರೀತಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ 2020-21 ರ ಆರ್ಥಿಕ ವರ್ಷದಲ್ಲಿ ಎರಡು ಸರಕಾರೀ ಬ್ಯಾಂಕುಗಳನ್ನು ಮತ್ತು ಒಂದು ಜನರಲ್ ಇನ್ಸೂರೆನ್ಸ್ ಕಂಪೆನಿಯನ್ನೂ ಖಾಸಗೀಕರಣ ಮಾಡುವ ಬಗ್ಗೆ ಹೇಳಿದ್ದರು. ಸರಕಾರದ ಹೊಸ ನೀತಿಯಾದ ‘ಆತ್ಮ ನಿರ್ಭರ್ ಭಾರತ‘ದ ಅನ್ವಯ ಖಾಸಗೀಕರಣದ ಬಗೆಗೆ ನಿರ್ದೇಶನಗಳನ್ನು ನೀಡುವ ಹೊಣೆ ‘ನೀತಿ ಆಯೋಗ‘ದ ಮೇಲಿದೆ.  … Read more

ಭಾರತದಲ್ಲಿ ಎಲ್ಲಾ ರೀತಿಯ ಕ್ರಿಪ್ಟೋಕರೆನ್ಸಿಗಳ ನಿಷೇಧ? ನಿರ್ಮಲಾ ಸೀತಾರಾಮನ್ ಮಹತ್ವದ ಹೇಳಿಕೆ

crypto cuurency

ನವದೆಹಲಿ(10-02-2021): ಕೇಂದ್ರ ಬಜೆಟ್ 2018-19ರಲ್ಲಿ, ಕ್ರಿಪ್ಟೋಕರೆನ್ಸಿಗಳ ಕಾನೂನು ಬದ್ಧ ಎಂದು ಪರಿಗಣಿಸುವುದಿಲ್ಲ. ಪಾವತಿ ವ್ಯವಸ್ಥೆಯ ಭಾಗವಾಗಿ ಈ ಕ್ರಿಪ್ಟೋ-ಸ್ವತ್ತುಗಳ ಬಳಕೆಯನ್ನು ತೆಗೆದುಹಾಕಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸರ್ಕಾರ ಘೋಷಿಸಿತ್ತು. ಭಾರತದಲ್ಲಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಬೇಕೆಂದು ಉನ್ನತ ಮಟ್ಟದ ಸಮಿತಿ ಸೂಚಿಸಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಾಜ್ಯವು ಹೊರತಂದ ಕರೆನ್ಸಿಗಳನ್ನು ಹೊರತುಪಡಿಸಿ ಎಲ್ಲಾ ವರ್ಚುವಲ್ ಕರೆನ್ಸಿಗಳನ್ನು ನಿಷೇಧಿಸಬೇಕೆಂಬ ಶಿಪಾರಸ್ಸಿದೆ ಎಂದು ಹೇಳಿದ್ದಾರೆ. ಕ್ರಿಪ್ಟೋಕರೆನ್ಸಿಗಳನ್ನು ದೇಶದಲ್ಲಿ ಕಾನೂನು ಬದ್ಧ ಎಂದು ಪರಿಗಣಿಸಲಾಗುವುದಿಲ್ಲ … Read more

ಬಜೆಟ್ ದೇಶಕ್ಕಾಗಿ ಇರಬೇಕು ಚುನಾವಣೆಗಾಗಿ ಅಲ್ಲ!

ಮುಂಬೈ(02-02-2021): ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಿಡಿಕಾರಿದ್ದು, ಇದು ಚುನಾವಣಾ ಬಜೆಟ್ ಅಲ್ಲ, ದೇಶದ ಬಜೆಟ್ ಎಂದು ಕೇಂದ್ರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.  ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿದ ಉದ್ಧವ್ ಠಾಕ್ರೆ, ದೇಶ ಎಂದ ಮೇಲೆ ಎಲ್ಲಾ ರಾಜ್ಯಗಳು ಸೇರಿವೆ.ಎಲ್ಲಾ ರಾಜ್ಯದ ಜನರು ತಮ್ಮ ರಾಜ್ಯಕ್ಕೆ ಏನು ಸಿಗುತ್ತದೆ ಎಂದು ಕಾಯುತ್ತಿರುತ್ತಾರೆ. ಆದರೆ ವಿಧಾನಸಭಾ ಚುನಾವಣೆಗಳ ಮೇಲೆ ಮಾತ್ರ ಕಣ್ಣಿಟ್ಟು, ಚುನಾವಣೆ ಇರುವ ರಾಜ್ಯಗಳಿಗೆ ಮಾತ್ರ ಸೀಮಿತ ಗೊಳಿಸಿ ಬಜೆಟ್ ಮಂಡಿಸಲಾಗಿದೆ … Read more