ಮಗಳ ಮೇಲಿನ ಅತ್ಯಾಚಾರಕ್ಕೆ ಪ್ರತಿಕಾರ | ಆರೋಪಿಯ ಕುಟುಂಬದ ಆರು ಜನರನ್ನು ಕೊಂದ ತಂದೆ

ವಿಶಾಖಪಟ್ಟಣ: ತನ್ನ ಮಗಳ ಮೇಲೆ ನಡೆದ ಅತ್ಯಾಚಾರಕ್ಕೆ ಉಗ್ರವಾಗಿ ಪ್ರತಿಕಾರ ತೀರಿಸಿದ ತಂದೆಯು, ಆರೋಪಿಯಕುಟುಂಬದ ಆರು ಜನರನ್ನು ಕೊಚ್ಚಿ ಕೊಲೆಗೈದಿದ್ದಾನೆ. ಕೊಲೆಯಾದವರಲ್ಲಿ ಇಬ್ಬರು ಎಳೆಯ ಪ್ರಾಯದ ಮಕ್ಕಳೂ ಸೇರಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಜುಟ್ಟದ ಎಂಬ ಹಳ್ಳಿಯಲ್ಲಿ ನಡೆದ ಈ ಘಟನೆಯು ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಆರು ತಿಂಗಳ ಕೂಸು ಉರ್ವಿಷ, ಎರಡು ವರ್ಷದ ಮಗು ಉದಯ ಕುಮಾರ್, ರಮಣ(60), ರಮಾದೇವಿ(53), ಅರುಣ(37), ಉಷಾರಾಣಿ(35) ಮುಂತಾದವರೇ ಕೊಲೆಗೀಡಾದವರು. ಕೊಲೆಗೀಡಾದ ಕುಟುಂಬದ ನೆರೆಮನೆಯವನೇ ಆದ ಅಪ್ಪಳರಾಜು ಎಂಬವನೇ ಕೊಲೆ … Read more

‘ಪಬ್ಜಿ’ ಕಾರಣ ನೀಡಿ ಬಾಲಕನ ಕೊಲೆ ಪ್ರಕರಣ | ವಿಚಾರ ಆರೋಪಿಯ ತಂದೆಗೂ ತಿಳಿದಿತ್ತು

ಉಳ್ಳಾಲ: ಪಬ್ಜಿಯಲ್ಲಿ ಸೋಲಿಸಿದನೆಂಬ ಕಾರಣ ನೀಡಿ ಬಾಲಕನ ಕೊಲೆ ಮಾಡಿದ ವಿಚಾರ ಆರೋಪಿಯ ತಂದೆಗೂ ತಿಳಿದಿತ್ತು ಎಂಬ ವಿಚಾರ ಪೋಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಉಳ್ಳಾಲದ ಹನ್ನೆರಡರ ಹರೆಯದ ಬಾಲಕ ಆಕಿಫನನ್ನು ಹತ್ಯೆ ಮಾಡಿದ ವಿಚಾರವನ್ನು ಆರೋಪಿಯು ತನ್ನ ತಂದೆಗೂ ತಿಳಿಸಿದ್ದನು. ಆದರೆ ತಂದೆ ಸಂತೋಷ್(45) ಈ ವಿಚಾರವನ್ನು ಮುಚ್ಚಿಡುವಂತೆ ಮಗನಿಗೆ ನಿರ್ದೇಶನ ನೀಡಿದ್ದನು. ಬಳಿಕ ಮನೆಯಲ್ಲಿಯೇ ತನ್ನ ಮಗನಿಗೆ ರಕ್ಷಣೆಯನ್ನೂ ನೀಡಿದ್ದನು. ಈ ನಡುವೆ ದೇಶದಲ್ಲಿ ನಿಷೇಧವಾಗಿರುವ ಪಬ್ಜಿ ಮಕ್ಕಳ ಕೈಗೆ ಸಿಗುವುದಾದರೂ ಹೇಗೆ ಎಂಬ ಅನುಮಾನವನ್ನೂ … Read more

ನ್ಯಾಯಾಲಯಕ್ಕೆ ಹಾಜರಾಗಿ ಹಿಂತಿರುಗುವ ವೇಳೆ ಇಬ್ಬರು ಕೊಲೆ ಆರೋಪಿಗಳ  ಬರ್ಬರ ಹತ್ಯೆ!

ತಮಿಳುನಾಡು (11-02-2021): ನ್ಯಾಯಾಲಯಕ್ಕೆ ಹಾಜರಾಗಿ ಮನೆಗೆ ಹಿಂದಿರುಗುತ್ತಿದ್ದಾಗ ಇಬ್ಬರು ಕೊಲೆ ಆರೋಪಿಗಳನ್ನು ಈರೋಡ್ ನ ಬೀದಿಯಲ್ಲಿ ಗುಂಪೊಂದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. 30 ಮತ್ತು 38 ವರ್ಷ ವಯಸ್ಸಿನ ಇಬ್ಬರು ವ್ಯಕ್ತಿಗಳು ಮಧ್ಯಾಹ್ನ 2 ಗಂಟೆ ಸುಮಾರಿಗೆ ವೀರಪ್ಪಂಚತ್ರಂ ಪ್ರದೇಶದ ಕಿರಿದಾದ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸುಮಾರು 7-8 ಜನರ ಗ್ಯಾಂಗ್ ಅವರನ್ನು ತಡೆದು ತೀಕ್ಷ್ಣವಾದ ಆಯುಧಗಳಿಂದ ಹಲ್ಲೆ ನಡೆಸಿ ಕೊಂದು ಹಾಕಿ ಪರಾರಿಯಾಗಿದ್ದಾರೆ. 2018 ರಲ್ಲಿ ವ್ಯಕ್ತಿಯ ಕೊಲೆ ಪ್ರಕರಣದ ಪ್ರಧಾನ ಆರೋಪಿಗಳಾದ … Read more

ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಕೊಚ್ಚಿ ಕೊಂದು ದೆವ್ವಕ್ಕೆ ದೂರ ಹಾಕಿದ ಭೂಪ!

crime

ಪಾಟ್ನಾ (01-12-2020):  ಪತ್ನಿ ಮತ್ತು ಐವರು ಮಕ್ಕಳನ್ನು ವ್ಯಕ್ತಿಯೋರ್ವ ಕೊಡಲಿಯಿಂದ ಕೊಚ್ಚಿ ಹಾಕಿದ್ದು ನಾಲ್ವರು ಮೃತಪಟ್ಟಿರುವ ಬೆಚ್ಚಿಬೀಳಿಸುವ ಘಟನೆ ಪಾಟ್ನಾದಲ್ಲಿ ನಡೆದಿದೆ. ಅವಧೇಶ್ ಚೌಧರಿ ಎಂಬ ವ್ಯಕ್ತಿ ಈ ದುಷ್ಕೃತ್ಯ ಎಸಗಿದ್ದಾನೆ. ಕ್ಷುಲ್ಲಕ ವಿಷಯಕ್ಕೆ ಪತ್ನಿ ಜೊತೆ ಜಗಳವಾಡಿ ಕೋಪಗೊಂಡ ಅವಧೇಶ್ ಮನೆಯಲ್ಲಿದ್ದ ಕೊಡಲಿಯಿಂದ ಎಲ್ಲರ ಮೇಲೆ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ನಾಲ್ಕು ಮಕ್ಕಳು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಘಟನೆ ಬಗ್ಗೆ ತಿಳಿದ ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಅವಧೇಶ್ ಮಾತ್ರ ತನಗೆ … Read more

ಬಾಲಕ ಸೇರಿ ಒಂದೇ ಕುಟುಂಬದ ಮೂವರ ಭೀಕರ ಕೊಲೆ!

crime news

ಭೋಪಾಲ್(29-11-2020): ಭೂ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಮೂವರನ್ನು ಟ್ರ್ಯಾಕ್ಟರ್ ಹರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೊಶಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.‌ ರಾಜೇಂದ್ರ ಸಿಂಗ್, ಕುವಾರ್ ಸಿಂಗ್ ಹಾಗೂ 11 ವರ್ಷದ ಬಾಲಕ ಮೃತ ದುರ್ದೈವಿಗಳು. ಭೂ ವಿವಾದಕ್ಕೆ ಸಂಬಂಧಿಸಿದಂತೆ ಅನ್ವರ್ ಸಿಂಗ್ ಅವರು ತನ್ನ ಸಹಚರರ ಜೊತೆ ಸೇರಿ ಮೂವರ ತಲೆಗೆ ರಾಡ್ ನಲ್ಲಿ ಹೊಡೆದಿದ್ದಾರೆ. ಬಳಿಕ ಟ್ರಾಕ್ಟರ್ ಹರಿಸಿ ಕೊಲೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅನ್ವರ್ ಸಿಂಗ್ ಸೇರಿ‌ ಏಳು ಜನರನ್ನು ಹೊಶಂಗಾಬಾದ್ ಪೊಲೀಸರು … Read more

ಮಂಗಳೂರಿನಲ್ಲಿ ಕೊಚ್ಚಿ ಕೊಲೆ ಮಾಡಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆ!

crime

ಮಂಗಳೂರು(26-11-2020): ಬರ್ಕೆ ಸ್ಟೇಷನ್ ವ್ಯಾಪ್ತಿಯ ಬೊಕ್ಕ ಪಟ್ನ ಬೋಟ್ ಯಾರ್ಡ್ ಬಳಿ ವ್ಯಕ್ತಿಯೋರ್ವನ ಕೊಲೆಯಾಗಿದೆ ಎಂದು ವರದಿಯಾಗಿದೆ. ಇಂದ್ರಜಿತ್ ಬೊಕ್ಕಪಟ್ನ ಎಂಬಾತನ ಕೊಲೆಯಾಗಿದ್ದು, ಮೃತದೇಹ ಕೊಚ್ಚಿ ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬಂಗಾಳದಲ್ಲಿ ಹೆಣದ ಮೇಲೆ ರಾಜಕೀಯ| ಬಿಜೆಪಿ- ಕಾರ್ಯಕರ್ತನ ಹತ್ಯೆ ಬೆನ್ನಲ್ಲೇ ಟಿಎಂಸಿ ಕಾರ್ಯಕರ್ತನ ಕೊಲೆ

crime news

ಕೋಲ್ಕತಾ(20-11-2020): ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೊಲೆ ರಾಜಕೀಯ ಪ್ರಾರಂಭವಾಗಿದೆ. ಬಿಜೆಪಿ-ಟಿಎಂಸಿ ನಾಯಕರ ಸಾಲು-ಸಾಲು ಹೆಣಗಳು ಬೀಳುತ್ತಿರುವುದು ವರದಿಯಾಗುತ್ತಿದೆ. ಬುಧವಾರ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಕೊಲೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಟಿಎಂಸಿ ಕಾರ್ಯಕರ್ತರೊಬ್ಬರ ಹತ್ಯೆ ನಡೆದಿದೆ. ದಕ್ಷಿಣ 24 ಪರಗಣ ಜಿಲ್ಲೆಯ ಭಟ್‌ಪಾರಾದಲ್ಲಿ ಬುಧವಾರ ತಡರಾತ್ರಿ ನಡೆದ ಘಟನೆಯಲ್ಲಿ ಟಿಎಂಸಿ ಕಾರ್ಯಕರ್ತ ಆಕಾಶ್‌ ಪ್ರಸಾದ್‌ (22) ಎಂಬುವವರನ್ನು ಇರಿದು ಕೊಲೆ ಮಾಡಲಾಗಿದೆ. ಅವರ ಮೇಲೆ ನಾಡ ಬಾಂಬ್‌ಗಳನ್ನು ಎಸೆಯಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಪ್ರಸಾದನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ … Read more

ರಾಜಸ್ಥಾನ; ಗೇಮ್ ಆಡಲು ಮೊಬೈಲ್ ಕೊಡದ ಸ್ನೇಹಿತನನ್ನೇ ಕೊಂದು ಹಾಕಿದ ಬಾಲಕ

pubg

ರಾಜಸ್ಥಾನ್ /ಜೈಪುರ; ಹದಿಹರೆಯದವರು ಮೊಬೈಲ್ ದಾಸರಾಗಿರುವುದು ನಿಜ. ಆದರೆ, ಮೊಬೈಲ್  ಗಾಗಿ ಕೊಲೆ ಮಾಡುವ ಹಂತಕ್ಕೆ ಹೋಗುವಷ್ಟು ದಾಸರಾಗಿದ್ದಾರೆ ಎಂಬುದು ಆಘಾತಕಾರಿ ವಿಚಾರ. ಹೌದು ಇಂತಹದ್ದೊಂದು ಘಟನೆ ರಾಜಸ್ಥಾನದ ರಾಜಸಮಂದ್ ಜಿಲ್ಲೆಯ ಜೈಪುರದಲ್ಲಿ ನಡೆದಿದೆ. 14 ವರ್ಷದ ಬಾಲಕನೊಬ್ಬ ತನಗೆ ಪಬ್ ಜಿ ಆಡಲು ಮೊಬೈಲ್ ಕೊಡಲಿಲ್ಲ ಎಂದು ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಕೊಂದಿದ್ದಾನೆ. ಸುದ್ದಿ ತಿಳಿದು ಸ್ವತಃ ಪೊಲೀಸರೇ ಆಘಾತಕ್ಕೊಳಗಾಗಿದ್ದಾರೆ. ಕೊಲೆಯಾದ ಬಾಲಕನನ್ನು ಹಮೀದ್ ಎಂದು ಗುರುತಿಸಲಾಗಿದೆ. ಮೃತ ಹಮೀದ್ ನ ತಂದೆ ಮಗ ನಾಪತ್ತೆಯಾಗಿರುವ … Read more

ಮೇಲ್ಜಾತಿಯ ಯುವಕನಿಂದ ದಲಿತ ದಂಪತಿಯ ಹತ್ಯೆ ; ತಮಿಳುನಾಡಿನಲ್ಲಿ ಅಮಾನವೀಯ ಘಟನೆ

  ಚೆನ್ನೈ(16/11/2020): ತಮಿಳುನಾಡಿನ ಮೇಲ್ಜಾತಿಯ ಯುವಕನೊಬ್ಬ‌‌ ದಲಿತ ದಂಪತಿಗಳನ್ನು ಹತ್ಯೆ ಮಾಡಿದ ಆಘಾತಕಾರಿ ಸುದ್ದಿ ವರದಿಯಾಗಿದೆ. 55 ವರ್ಷದ ರಾಮಸ್ವಾಮಿ ಹಾಗೂ 48 ವರ್ಷದ ಅರುಕ್ಕುನಿ ಹತ್ಯೆಯಾದ ದಲಿತ ದಂಪತಿಗಳು. ಆರೋಪಿಯನ್ನು‌ ಸೂರ್ಯ ಎಂದು ಗುರುತಿಸಲಾಗಿದ್ದು, ಈತ ಮೇಲ್ಜಾತಿಗೆ ಸೇರಿದವನು ಎಂದು ವರದಿಯಾಗಿದೆ. ರಾಮಸ್ವಾಮಿ ಹಾಗೂ ಅರುಕ್ಕುನಿ‌ ದಂಪತಿಗಳು ತಮ್ಮ ಮಗಳೊಂದಿಗೆ ನಡೆದು ಹೋಗುತ್ತಿದ್ದಾಗ ರಸ್ತೆಯ ಬದಿ ಪಟಾಕಿ ಸಿಡಿಸುತ್ತಿದ್ದ ಸೂರ್ಯ ಮಗಳನ್ನು ನೋಡಿ‌ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದನ್ನು ದಲಿತ ದಂಪತಿಗಳು ಪ್ರಶ್ನಿಸಿದ್ದಕ್ಕೆ ಸೂರ್ಯ ಹಾಗೂ ಆತನ … Read more

ಮಾಜಿ ಸಚಿವ ವಿನಯ್ ಕುಲಕರ್ಣಿ ಅರೆಸ್ಟ್

vinay kulkarni

ಬೆಂಗಳೂರು(05-11-2020): ಜಿ.ಪಂ. ಸದಸ್ಯ ಯೋಗೇಶ್ ಗೌಡ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 2016ರ ಜೂನ್ 15ರಂದು ನಡೆದಿದ್ದು ಧಾರವಾಡ ಜಿ.ಪಂ. ಸದಸ್ಯ ಯೋಗೇಶ್ ಗೌಡ ಅವರ ಕೊಲೆ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆಯಾಗಿದೆ ಎಂದು ತಿಳಿದು ಬಂದಿದೆ. ಧಾರವಾಡದ ಬಾರಾಕೊಟ್ರಿ ಪ್ರದೇಶದಲ್ಲಿನ ಮನೆಯಿಂದ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದು ಉಪ ನಗರ … Read more