ಬಸವಕಲ್ಯಾಣ, ಮಸ್ಕಿ ಉಪಚುನಾವಣೆಯಲ್ಲಿ ಗೆದ್ದ ಇಬ್ಬರು ಶಾಸಕರು ಪ್ರಮಾಣ ವಚನ ಸ್ವೀಕಾರ

ಬೆಂಗಳೂರು : ಇತ್ತೀಚೆಗೆ ನಡೆದ ಎರಡು ಕ್ಷೇತ್ರಗಳ ವಿಧಾನಸಭೆಯ ಉಪಚುನಾವಣೆಯಲ್ಲಿ ವಿಜೇತರಾಗಿದ್ದ ಇಬ್ಬರು ನೂತನ ಶಾಸಕರು ಇಂದು ಅಧಿಕಾರ ಸ್ವೀಕರಿಸಿದರು. ನೂತನ ಶಾಸಕರಾದ ಬಸನಗೌಡ ತುರವೀಹಾಳ್ ( ಮಸ್ಕಿ ) ಹಾಗೂ ಶರಣು ಸಲಗರ (ಬಸವಕಲ್ಯಾಣ) ಅವರುಗಳಿಗೆ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಮಾಣ ವಚನ ಬೋಧಿಸಿದರು. ಇಬ್ಬರು ಶಾಸಕರು ಸತ್ಯ ,ನ್ಯಾಯ ನಿಷ್ಠೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.ಬಸವಕಲ್ಯಾಣ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿ ಶಾಸಕ ಶರಣು ಸಲಗರ ಅವರಿಗೆ ಉಪಮುಖ್ಯಮಂತ್ರಿ ಲಕ್ಮಣ್ ಸವದಿ, ಸಚಿವ ಪ್ರಭು … Read more

ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವೇ ಗೆಲ್ತೀವಿ : ಸಚಿವ ಪ್ರಭು ಚವ್ಹಾಣ ವಿಶ್ವಾಸ

ಬೀದರ್(ಬಸವಕಲ್ಯಾಣ): ಬಸವಕಲ್ಯಾಣ ,ಮಸ್ಕಿ ಹಾಗೂ ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದು ಸಚಿವ ಪ್ರಭು ಚವ್ಹಾಣ ಅಭಿಪ್ರಾಯಪಟ್ಟಿದ್ದಾರೆ. ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಸಚಿವರು ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯ ನವರು ಜನರಿಗೆ ಸುಳ್ಳು ಹೇಳ್ತಾರೆ, ಅವರ ಮಾತಿನಲ್ಲಿ ದಮ್ ಇಲ್ಲ, ಜನರು ಕಾಂಗ್ರೆಸ್ ನವರಿಗೆ ಗೆಲ್ಲಿಸಿ ಏನ್ ಮಾಡ್ತಾರೆ, ಕೇಂದ್ರ ಹಾಗೂ ರಾಜ್ಯದಲ್ಲಿಯೂ ನಮ್ಮದೇ … Read more

ಬಿಜೆಪಿಗೆ ಪ್ರಜಾಪ್ರಭುತ್ವವೆಂದರೆ ಶಾಪಿಂಗ್ ಮಾಲ್‌ನಂತೆ! : ರಾಜ್ಯ ಕಾಂಗ್ರೆಸ್ ಆರೋಪ

ಬೆಂಗಳೂರು: ಬಿಜೆಪಿಗೆ ಪ್ರಜಾಪ್ರಭುತ್ವವೆಂದರೆ ಶಾಪಿಂಗ್ ಮಾಲ್‌ನಂತೆ! ಹಣದಿಂದ ಶಾಸಕರನ್ನೂ ಖರೀದಿಸುತ್ತದೆ, ಮತಗಳನ್ನೂ ಖರೀದಿಸುತ್ತದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ‌. ಈ ಕುರಿತು ಟ್ವೀಟ್ ಮಾಡಿದ ರಾಜ್ಯ ಕಾಂಗ್ರೆಸ್ ಘಟಕ ಮಸ್ಕಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರದ ಸಭೆಗೆ ಆಗಮಿಸುವಂತೆ ಮತದಾರರಿಗೆ ಹಣ ಹಂಚುತ್ತಿರುವ ನಂದೀಶ್ ರೆಡ್ಡಿ ಅವರ ವಿಡಿಯೋ ಒಂದನ್ನು ಪೋಸ್ಟ್ ಮಾಡಿ ಟೀಕಿಸಿದೆ. ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಹಣದ ಹೊಳೆ ಹರಿಸಿದ್ದು ಜಗತ್ತಿಗೆ ತಿಳಿದರೂ ರಾಜ್ಯ ಚುನಾವಣಾ ಆಯೋಗದ ಕಣ್ಣಿಗೆ ಕಾಣಲಿಲ್ಲವೇ? … Read more

ಉಪಚುನಾವಣೆ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ : ಸಿದ್ದರಾಮಯ್ಯ

ಕೊಪ್ಪಳ: ಬೆಳಗಾವಿ ಲೋಕಸಭೆ ಕ್ಷೇತ್ರ ಸೇರಿ ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭೆ ಉಪಚುನಾವಣೆ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂದು ಪ್ರತಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಚಿಲ್ಲರೆ ರಾಜಕೀಯ ಕಾಂಗ್ರೆಸ್ ಮಾಡುವುದಿಲ್ಲ, ಬಿಜೆಪಿ ಮಾಡುತ್ತದೆ, ಚಿಲ್ಲರೆ ರಾಜಕೀಯ ಮಾಡಿದ್ದು ಏನಾದರೂ ಸಾಕ್ಷಿ ಇವೆಯೇ ? ಪ್ರಶ್ನಿಸಿದರು. ಇದೇ ಸಂದರ್ಭದಲ್ಲಿ ನಾನು ಸಿಡಿ ವಿಚಾರವಾಗಿ ನಾನು ಮಾತನಾಡಲ್ಲ. ಆದ್ರೆ, ನ್ಯಾಯಯುತವಾಗಿ ತನಿಖೆ ಮಾಡಬೇಕಿದೆ. ಸಂತ್ರಸ್ತೆ ಹೇಳಿದ ಮೇಲೆ ಎಸ್​ಐಟಿ … Read more

ರಾಜ್ಯದ‌ ಬೆಳಗಾವಿ ಲೋಕಸಭೆ ಮತ್ತು ಬಸವಕಲ್ಯಾಣ ಹಾಗೂ ಮಸ್ಕಿ ವಿಧಾ‌ನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ‌ ದಿನಾಂಕ ಘೋಷಣೆ

ದೆಹಲಿ: ಕರ್ನಾಟಕದಲ್ಲಿ ಖಾಲಿಯಾಗಿರುವ ಎರಡು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಪ್ರಕಟವಾಗಿದೆ. ಏಪ್ರಿಲ್‌ 17 ಮೂರೂ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ರಾಯಚೂರಿನ ಮಸ್ಕಿ ವಿಧಾನಸಭೆಯ ಶಾಸಕರಾಗಿದ್ದ ಪ್ರತಾಪ್‌ ಗೌಡ ಅವರು ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಸೇರಿದ್ದರು. ಇದರಿಂದಾಗಿ ಅಲ್ಲಿ ಉಪಚುನಾವಣೆ ಬಂದಿದೆ. ಇನ್ನುಳಿದಂತೆ ಬೆಳಗಾವಿ ಸುರೇಶ ಅಂಗಡಿ ಅವರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದರು ಹಾಗೂ ಬೀದರ್‌ ಬಸವಕಲ್ಯಾಣದ ಕಾಂಗ್ರೆಸ್‌ ಶಾಸಕರಾದ ಬಿ ನಾರಾಯಣರಾವ್‌ ಅವರು ಕೋವಿಡ್‌ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದರು. … Read more

ಚುನಾವಣೆ ಘೋಷಣೆಯೇ ಆಗಿಲ್ಲ, ಆದ್ರೆ ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದ ಪ್ರತಾಪ್ ಗೌಡ| ಬಿಎಸ್ ವೈಗೆ ಮತ್ತೊಂದು ತಲೆಬಿಸಿ

prathap gawda

ಬೆಂಗಳೂರು(24-11-2020): ಮಸ್ಕಿ ಕ್ಷೇತ್ರದ  ಬಿಜೆಪಿಯ ಸಾಂಭವ್ಯ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಹೇಳಿಕೆ ನೀಡಿದ ಪ್ರತಾಪ್ ಗೌಡ ಪಾಟೀಲ್, ಸರ್ಕಾರ ರಚನೆಯಾಗುವಾಗ 17 ಜನರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಆ ಭರವಸೆ ಈಡೇರಿಸುವ ಭರವಸೆ ಇದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮೆಚ್ಚಿ ನಾನು ಬಿಜೆಪಿಗೆ ಬಂದಿದ್ದೇನೆ. ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸುವ ವಿಶ್ವಾಸ ಇದೆ. ನಾವೆಲ್ಲಾ ಒಂದಾಗಿದ್ದೇವೆ ಎಂದು ಹೇಳಿದ್ದಾರೆ. … Read more