ಮದುವೆ ಸಮಾರಂಭಕ್ಕೆ 40 ಜನರ ಮಿತಿ, ಅನುಮತಿ ಪಾಸ್ ಕಡ್ಡಾಯ: ಸರ್ಕಾರ ಆದೇಶ

ಬೆಂಗಳೂರು: ಕೋವಿಡ್ ಎರಡನೇ ಅಲೆಯ ತೀವ್ರತೆ ತಗ್ಗಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ವ್ಯಾಪಾರ ವಹಿವಾಟು ನಡೆಸಲು ಸಡಿಲಿಕೆ ನೀಡಿರುವ ಸರ್ಕಾರ ಇದೀಗ 40 ಜನರಿಗೆ ಮಿತಿಗೊಳಿಸಿ ರಾಜ್ಯದಾದ್ಯಂತ ಕಲ್ಯಾಣ ಮಂಟಪ, ಹೋಟೆಲ್‌ ಸಭಾಂಗಣ ಮತ್ತು ರೆಸಾರ್ಟ್‌ಗಳಲ್ಲಿ ಮದುವೆ ಸಮಾರಂಭಗಳನ್ನು ನಡೆಸಲು ಸೋಮವಾರದಿಂದ ಅನುಮತಿ ನೀಡಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ. ರೂಪಾಂತರಿ ಡೆಲ್ಟಾ ಕೊರೊನಾ ವೈರಾಣು ನಿಯಂತ್ರಣ ಕುರಿತು ಸಿಎಂ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಕೈಗೊಂಡ … Read more

ಏಕಕಾಲದಲ್ಲಿ ಅಕ್ಕತಂಗಿಯರನ್ನೇ ಮದುವೆಯಾದ ‘ಉಮಾಪತಿ’ ! ಹೀಗೊಂದು ವಿಚಿತ್ರ ಬಹುಪತ್ನಿತ್ವ

ಕೋಲಾರ: ಅಕ್ಕತಂಗಿಯರನ್ನು ಏಕಕಾಲದಲ್ಲಿ ವರಿಸಿದ ವಿಚಿತ್ರ ಪ್ರಸಂಗವೊಂದು ರಾಜ್ಯದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಸುಪ್ರಿಯಾ ಹಾಗೂ ಲಲಿತ ಎಂಬವರೇ ವಧುಗಳು. ಅದೇ ತಾಲೂಕಿನ ಉಮಾಪತಿ ಎಂಬವನೇ ಮಧುಮಗ. ಮದುವೆಯ ಆಮಂತ್ರಣ ಪತ್ರಿಕೆಯ ಪ್ರತಿಯು ಸೋಷಿಯಲ್ ಮೀಡಿಯಾದಲ್ಲಿ ವೈರಲಾಗಿದೆ. ವಧುಗಳ ತಂದೆಯಾದ ನಾಗರಾಜಪ್ಪ ಎಂಬವರು ಸಹಾ ಇದೇ ರೀತಿ ಅಕ್ಕತಂಗಿಯರನ್ನೇ ವರಿಸಿರುವುದೆಂದು ಹೇಳಲಾಗಿದೆ. ಹಾಗಾಗಿ ಈ ಕುಟುಂಬದಲ್ಲಿ ಈ ರೀತಿಯ ಮದುವೆ ನಡೆಯುತ್ತಿರುವುದು ಇದೇ ಮೊದಲಲ್ಲ. ಇಬ್ಬರಲ್ಲಿ ಹಿರಿಯವಳಾದ ಸುಪ್ರಿಯಾ ಎಂಬವರು ಹುಟ್ಟು ಮೂಗಿಯಾಗಿದ್ದು, ಇದು ಕೂಡಾ ಇಬ್ಬರನ್ನೂ … Read more

ಬೊಕ್ಕ ತಲೆಯ ಕಾರಣಕ್ಕಾಗಿ ಪತಿಗೆ ವಿಚ್ಛೇದನ ನೀಡಲು ಮುಂದಾದ ಮಹಿಳೆ!

marriage

ಲಕ್ನೋ: ಬೊಕ್ಕ ತಲೆಯ ಕಾರಣವನ್ನು ನೀಡಿ ಪತ್ನಿಯೋರ್ವಳು ತನ್ನ ಪತಿಗೆ ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣವೊಂದು ಮೀರತ್ ನಲ್ಲಿ ನಡೆದಿದ್ದು, ಮದುವೆ ಸಂದರ್ಭದಲ್ಲಿ ಬೊಕ್ಕ ತಲೆಯ ವಿಚಾರವನ್ನು  ಮುಚ್ಚಿಡಲಾಗಿತ್ತು ಎಂದು ಪತ್ನಿ ಆರೋಪಿಸಿದ್ದಾಳೆ. 2020ರ ಜನವರಿಯಲ್ಲಿ ಈ ಜೋಡಿ ಗಾಝಿಯಾಬಾದ್ ನಲ್ಲಿ ವಿವಾಹವಾಗಿದ್ದಾರೆ.  1 ವರ್ಷಗಳ ವರೆಗೆ ಪತಿ ಹೇಗೋ ತನ್ನ ಬೊಕ್ಕ ತಲೆಯ ರಹಸ್ಯವನ್ನು ಮುಚ್ಚಿಟ್ಟಿದ್ದಾನೆ. ಆದರೆ ಇದೀಗ ಬೊಕ್ಕ ತಲೆಯ ವಿಚಾರ ಹೊರ ಬಂದಿದ್ದು, ಇದರಿಂದ ಪತ್ನಿ ಆಕ್ರೋಶಗೊಂಡಿದ್ದು, ಪತಿಗೆ ವಿವಾಹ … Read more

ಡ್ರೈವ್ ಬೈ ವೆಡ್ಡಿಂಗ್; ದುಬೈಯಲ್ಲಿ ನಡೆಯಿತು ಹೀಗೊಂದು ವಿನೂತನ ಮದುವೆ

  ದುಬೈ(15/11/2020): ಕೋವಿಡ್ 19 ಬಳಿಕ ಅದ್ಧೂರಿ ವಿವಾಹಗಳು ಕಡಿಮೆಯಾಗಿದೆ. ಅನೇಕರು ಎಷ್ಟು ಸರಳವಾಗಿ ಹಾಗೂ ಎಷ್ಟು‌ ವಿಭಿನ್ನವಾಗಿ ವಿವಾಹವಾಗಬಹುದು ಎಂದು ಯೋಚಿಸಿಕೊಂಡು‌ ವಿವಾಹವಾಗುತ್ತಿದ್ದಾರೆ. ಕೇರಳ ಮೂಲದ ಮುಹಮ್ಮದ್ ಜಝೇಮ್ ಎನ್ನುವವರ ವಿವಾಹ ಈಗ ವೈರಲ್ ಆಗಿದೆ. ಹೌದು. ಅವರು ಡ್ರೈವ್ ಬೈ ವಿವಾಹವಾಗಿ, ಅಚ್ಚರಿಗೆ ಕಾರಣವಾಗಿದ್ದಾರೆ. ಈ ವಿವಾಹ ಹೇಗೆಂದರೆ, ಮದುವೆಗೆ ಆಗಮಿಸುವ ಸಂಬಂಧಿಕರು ಹಾಗೂ ಸ್ನೇಹಿತರು ಕಾರಿನಿಂದ ಕೆಳಗಿಳಿಯುವಂತಿಲ್ಲ. ಕಾರಿನಲ್ಲೇ ಕುಳಿತು ನವದಂಪತಿಗೆ ಶುಭ ಹಾರೈಸಬೇಕಿತ್ತು. ಈ ಬಗ್ಗೆ ವರ ಜಝೀಮ್ ಹೇಳುವುದು ಹೀಗೆ; … Read more

ತಮಿಳುನಾಡು: ಕೊನೆಯ ಕ್ಷಣದಲ್ಲಿ ಮದುವೆ ಮಂಟಪದಲ್ಲಿ ನಡೆಯಿತು ಹೈಡ್ರಾಮ

ಚೆನ್ನೈ(02/11/2020): ಹಸೆಮಣೆಯಲ್ಲಿ ನಡೆಯಿತು ಹೈಡ್ರಾಮ. ಹೌದು. ತಮಿಳುನಾಡಿನಲ್ಲಿ ವಧುವೊಬ್ಬಳು ಹಸೆಮಣೆಯ ಮೇಲೆ ಕುಳಿತ್ತಿದ್ದ ವರ ಇನ್ನೇನು ಕೆಲವೇ ಕ್ಷಣಗಳಲ್ಲಿ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಎಲ್ಲರಿಗೂ ಶಾಕ್ ನೀಡಿ, ತನಗೆ ಈ ಮದುವೆ ಬೇಡ ಎಂದ ಘಟನೆ ನಡೆದಿದೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗಿದೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಉದಗ ಗ್ರಾಮದಲ್ಲಿ ಘಟನೆ ನಡೆದಿದ್ದು, ಇನ್ನೇನು ವರ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ಆತನನ್ನು ತಡೆದು ಸಿನಿಮಾ ಸ್ಟ್ರೈಲ್ ಡೈಲಾಗ್ ಹೊಡೆದು ಮದುವೆ ನಿಲ್ಲಿದ್ದಾಳೆ. ತಾನು … Read more