ಉಳ್ಳಾಲ: ಮಹಿಳೆಯ ಸರ ಎಳೆದು ಪರಾರಿಯಾಗಿದ್ದ ಆರೋಪಿಯ ಬಂಧನ

ಮಂಗಳೂರು(02-03-2021): ಮಹಿಳೆಯ ಸರ ಎಳೆದು ಪರಾರಿಯಾಗಿದ್ದ ಆರೋಪಿಯನ್ನು ಕೊಣಾಜೆ ಪೊಲೀಸರು ಉಳ್ಳಾಲದಲ್ಲಿ ಬಂಧಿಸಿದ್ದಾರೆ. ಪಾನೇಲ ನಿವಾಸಿ ಇರ್ಷಾದ್ (23) ಬಂಧಿತ ಆರೋಪಿ. ಈತ ಬೋಳಿಯಾರ್ ನಿವಾಸಿ ಶಾಂಭವಿ ಅವರು ತೋಟದಿಂದ ಸೋಗೆ ತರುವಾಗ ಹಿಂದಿನಿಂದ ಬಂದು ಸರ ಎಳೆದುಕೊಂಡು ಪರಾರಿಯಾಗಿದ್ದ. ಈ ಕುರಿತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇರ್ಷಾದ್ ನನ್ನು ಬಂಧಿಸಿದ್ದಾರೆ.          

ತಂದೂರಿ ರೊಟ್ಟಿಗೆ ಉಗುಳಿದ ಆರೋಪ: ಯುಪಿಯಲ್ಲಿ ಮುಸ್ಲಿಂ ಯುವಕನ ಬಂಧನ

man arrested

ಉತ್ತರ ಪ್ರದೇಶ (22-02-2020): ಉತ್ತರ ಪ್ರದೇಶದ ಮೀರತ್‌ನಲ್ಲಿ ವಿವಾಹವೊಂದರಲ್ಲಿ ಅಡುಗೆ ಮಾಡುವಾಗ ತಂದೂರಿ ರೊಟ್ಟಿ ಮೇಲೆ ಉಗುಳಿದ ಆರೋಪದಲ್ಲಿ ಯುವಕನನ್ನು ಬಂಧಿಸಲಾಗಿದೆ. ಸೊಹೈಲ್ ಬಂಧಿತ ಯುವಕ. ಮೀರತ್‌ನಲ್ಲಿ ನಡೆದ ವಿವಾಹವೊಂದರಲ್ಲಿ ತಂದೂರಿ ರೊಟ್ಟಿ ಅಡುಗೆ ಮಾಡುವ ಮೊದಲು ವ್ಯಕ್ತಿಯೊಬ್ಬರು ರೋಟ್ಟಿ ಮೇಲೆ ಉಗುಳುವುದು ರಹಸ್ಯವಾಗಿ ಚಿತ್ರೀಕರಣವಾಗಿತ್ತು. ಈ ಬಗ್ಗೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ. ಮೀರತ್‌ನ ಎಲ್‌ಎಲ್‌ಆರ್‌ಎಂ ಪೊಲೀಸ್ ಠಾಣೆಯ ಹೊರಗೆ ಹಿಂದೂ ಜಾಗ್ರಾನ್ ಮಂಚ್ ಸದಸ್ಯರು ಜಮಾಯಿಸಿದ ಬಳಿಕ ಕೇಸ್ ದಾಖಲಾಗಿದೆ.  

ತಂಗಿ ಮೇಲೆ ಅತ್ಯಾಚಾರ| ಆರೋಪಿ ಪ್ರವೀಣ್ ಬಂಧನ: ಹೀನ ಕೃತಕ್ಕೆ ತಲೆತಗ್ಗಿಸಿದ ಕರಾವಳಿ

up

ಬೆಳ್ತಂಗಡಿ(25-01-2021): 13ವರ್ಷದ ಬಾಲಕಿಯನ್ನು ದೊಡ್ಡಪ್ಪನ ಮಗನೇ ಅತ್ಯಾಚಾರ ಮಾಡಿರುವ ಹೀನ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪುಂಡೈ ಬನ ದಲ್ಲಿ ವರದಿಯಾಗಿದೆ. ಬಾಲಕಿಯ ದೊಡ್ಡಪ್ಪನ ಮಗ ಆಕೆಯನ್ನು ಬಲತ್ಕಾರವಾಗಿ ಕರೆದುಕೊಂಡು ಹೋಗಿ ಅತ್ಯಾಚಾರವನ್ನು ಎಸಗಿದ್ದಾನೆ. ಬಳಿಕ ಬಾಲಕಿಗೆ ಹೊಟ್ಟೆನೋವು ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ಕರದುಕೊಂಡು ಹೋಗಿ ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿಯಾಗಿರುವುದು ಬಹಿರಂಗವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಬಾಲಕಿಯ ಪೋಷಕರು ಆರೋಪಿ ಪ್ರವೀಣ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿ … Read more

ತುಂಗಾನಗರ ಪೋಲಿಸರ ಮಿಂಚಿನ ಕಾರ್ಯಚರಣೆ| ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತಿದ್ದ ರೌಡಿ ಶೀಟರ್ ಬಂಧನ

man arrested

ಶಿವಮೊಗ್ಗ (09-11-2020): ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಪಿಎಸ್ಐ ತಿರುಮಲೆಶ್ ಜಿ.ಹಾಗೂ ತಂಡವು ರೌಡಿ ಶೀಟರ್ ಕಡೇಕಲ್ ಅಬೀದ್ ನನ್ನು ಬಂಧಿಸಿದ್ದಾರೆ. ಗಾಂಜಾವನ್ನ ಸಂಗ್ರಹಿಸಿ ಮಾರುತ್ತಿದ್ದ  ಎಂಬ ಆರೋಪದ ಮೇರೆಗೆ ರೌಡಿ ಶೀಟರ್ ಆಗಿರುವ ಕಡೇಕಲ್ ಅಬೀದನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ರೌಡಿ ಶೀಟರ್ ಕಡೇಕಲ್ ಅಬೀದ್ ಇಂದಿರಾ ನಗರದ ಶ್ರೀರಾಮ್ ನಗರಕ್ಕೆ ಹೋಗುವ ರಸ್ತೆಯ ಪಕ್ಕದ ಲೇಔಟ್ ನಲ್ಲಿ ಗಾಂಜಾವನ್ನ ಸಂಗ್ರಹಿಸಿಕೊಂಡು ಸಾರ್ವಜನಿಕರಿಗೆ  ಮಾರುತ್ತಿದ್ದ . ಡಿವೈಎಸ್ಪಿ … Read more

ಜಾರ್ಖಾಂಡ್: ಆರೋಪಿಗಳು ಜೈಶ್ರೀರಾಂ ಹೇಳಲು ಒತ್ತಾಯಿಸಿಲ್ಲ- ಪೊಲೀಸರ ಸ್ಪಷ್ಟನೆ

man arrested

ಜಾರ್ಖಾಂಡ್(29-09-2020): ಜಾರ್ಖಂಡ್ ನಲ್ಲಿ ಗೋಮಾಂಸ ಸೇವಿಸಿದ್ದಾರೆಂದು 6 ಜನರಿಗೆ ಥಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಸೆಪ್ಟೆಂಬರ್ 16 ರಂದು ಸದರ್ ಪೊಲೀಸ್ ಠಾಣೆ ಪ್ರದೇಶದ ಭೆಡಿಕುದಾರ್ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಒಟ್ಟು ಐದು ಜನರನ್ನು ಈವರೆಗೆ ಬಂಧಿಸಲಾಗಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ರಾಜ್‌ಕಿಶೋರ್ ತಿಳಿಸಿದ್ದಾರೆ. ಮಹಿಳಾ ಸಂತ್ರಸ್ತೆ ನೀಡಿದ ಪೊಲೀಸ್ ದೂರಿನ ಪ್ರಕಾರ, ಆರೋಪಿಗಳು ಸೆಪ್ಟೆಂಬರ್ 16 ರಂದು ಆಕೆಯ ಮನೆಗೆ ಬಂದು ಗಂಡನನ್ನು ಥಳಿಸಿದ್ದರು ಮತ್ತು ಮನೆಯಲ್ಲಿ ದರೋಡೆಯನ್ನು … Read more