ಪಾಕಿಸ್ತಾನ ವಿರುದ್ಧ ಭಾರತ ತಂಡಕ್ಕೆ ಸೋಲು: ಹೃದಯಾಘಾತದಿಂದ ಕ್ರಿಕೆಟ್ ಅಭಿಮಾನಿ ಸಾವು

ಕೊಡಗು: ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸೋಲು ಆದ ಹಿನ್ನಲೆಯಲ್ಲಿ ಮನನೊಂದ ಕ್ರಿಕೆಟ್ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಅಣ್ಣಯ್ಯಗೌಡ ಅವರ ಪುತ್ರ ಡಿ.ಎ.ಉದಯ (55) ಎನ್ನುವರು ಮೃತಪಟ್ಟ ದುರ್ದೈವಿ ಎಂದು ತಿಳಿದು ಬಂದಿದೆ. ಭಾನುವಾರ ರಾತ್ರಿ ಇಂಡಿಯಾ ಪಾಕಿಸ್ತಾನ ಟಿ-20 ಕ್ರಿಕೆಟ್ ಪಂದ್ಯವನ್ನು ಟಿ.ವಿಯಲ್ಲಿ ವೀಕ್ಷಿಸುತ್ತಿದಾಗ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸೋಲು ಆಗಿರುವ ಹತ್ತು ನಿಮಿಷದಲ್ಲೇ … Read more

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ : ಪಾಪ್ಯುಲರ್ ಫ್ರಂಟ್ ಖಂಡನೆ

ಬೆಂಗಳೂರು: ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯ ಮತ್ತು ಅವರ ಪ್ರಾರ್ಥನಾ ಸ್ಥಳಗಳ ಮೇಲಿನ ಹಿಂಸಾಚಾರವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ ಸಲಾಂ ಖಂಡಿಸಿದ್ದಾರೆ. ನೆರೆಯ ದೇಶದಲ್ಲಿ ಕೇಳಿ ಬರುತ್ತಿರುವ ಸಾವು ಮತ್ತು ವಿನಾಶದ ಸುದ್ದಿಗಳು ಅತ್ಯಂತ ಆತಂಕಕಾರಿ ಹಾಗೂ ದುರಾದೃಷ್ಟಕರವಾಗಿವೆ. ಕೆಲವು ಅನಧಿಕೃತ ಆರೋಪಗಳ ಆಧಾರದಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಇತರ ಸಮುದಾಯಗಳಿಗೆ ಸೇರಿದ ಅಮಾಯಕರನ್ನು ಗುರಿಪಡಿಸುವ ವಿಚಾರ ಯಾವುದೇ ನಾಗರಿಕ ಸಮಾಜಕ್ಕೆ ಬೆದರಿಕೆಯಾಗಿದೆ. ಇತರರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಇಂತಹ ಜನರನ್ನು ನಿಯಂತ್ರಿಸಿ ಶಿಕ್ಷೆಗೆ … Read more

ಕರ್ನಾಟಕದ ಮಹಿಳೆಯರು ಎತ್ತ ಹೋಗಬೇಕು?

ಕರ್ನಾಟಕದ ಮಹಿಳೆಯರು ಎತ್ತ ಹೋಗಬೇಕು ? ಮೂಲ : ಜಾನಕಿ ನಾಯರ್  ಅನುವಾದ : ನಾ ದಿವಾಕರ, ಹಿರಿಯ ಲೇಖಕರು ಮಹಿಳೆಯರ ವಿರುದ್ಧ ದ್ವೇಷ ಕಾರುವ ಮಾತುಗಳನ್ನಾಡಲು ಕರ್ನಾಟಕದ ಬಿಜೆಪಿ ನಾಯಕರು ಮತ್ತು ಸಚಿವರು ಪೈಪೋಟಿಯ ಮೇಲೆ ಮುಗಿಬಿದ್ದಿದ್ದಾರೆ. ಎರಡನೆ ಬಾರಿ ಆರೋಗ್ಯ ಸಚಿವರಾಗಿರುವ ಕೆ ಸುಧಾಕರ್, ನಿಮ್ಹಾನ್ಸ್ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡುತ್ತಾ “ ಉದಾತ್ತ ಭಾರತೀಯ ಕುಟುಂಬದ ” ಶಮನಕಾರಕ ಗುಣಲಕ್ಷಣಗಳನ್ನು ಕೊಂಡಾಡಿರುವುದೇ ಅಲ್ಲದೆ ಆಧುನಿಕ ಭಾರತದ ಮಹಿಳೆಯರು ವಿವಾಹವಾಗಲು … Read more

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಗೆ ನನ್ನ ವಿರೋಧವಿಲ್ಲ : ವಿಪಕ್ಷ ನಾಯಕ ಸಿದ್ದರಾಮಯ್ಯ

ಕಲ್ಬುರ್ಗಿ: ಕರ್ನಾಟಕ ಹಿಂದುಳಿದ ಜಾತಿಗಳ ಶಾಶ್ವತ ಆಯೋಗ ನಡೆಸಿರುವುದು ಜಾತಿ ಸಮೀಕ್ಷೆ ಅಲ್ಲ, ಜಾತಿಯೂ ಸೇರಿದಂತೆ ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ. ದುರುದ್ದೇಶದಿಂದ ಈ ಸಮೀಕ್ಷೆಯನ್ನು ಜಾತಿಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಸಮೀಕ್ಷೆಯಲ್ಲಿ ಯಾವುದೇ ಪಕ್ಷಪಾತ, ಪೂರ್ವಗ್ರಹಗಳಿಲ್ಲ. ಸಮೀಕ್ಷೆ ನಡೆಸಿದ ಶಿಕ್ಷಕರಲ್ಲಿ ಎಲ್ಲಾ ಜಾತಿ, ಸಮುದಾಯ, ಧರ್ಮಕ್ಕೆ ಸೇರಿದವರು ಇದ್ದಾರೆ. ಇದು ಯಾವ ಜಾತಿಯ ವಿರುದ್ಧವೂ ಅಲ್ಲ, ಯಾವ ಜಾತಿಯ ಪರವಾಗಿಯೂ ಅಲ್ಲ. ಸಾಮಾಜಿಕ ನ್ಯಾಯದ ಪರವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹಿಂದುಳಿದ … Read more

ಆಮ್ ಆದ್ಮಿ ಪಾರ್ಟಿ ಸೇರಿದ ಖ್ಯಾತ ವಕೀಲ ಜಗದೀಶ್ ಮಹಾದೇವ

ಬೆಂಗಳೂರು: ಕೆಟ್ಟು ಹೋಗಿರುವ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಲು ಆಮ್ ಆದ್ಮಿ ಪಕ್ಷದ ಅವಶ್ಯಕತೆ ಇದೆ. ಸದಾ ಭ್ರಷ್ಟಾಚಾರ, ಅಂತರೀಕ ಕಿತ್ತಾಟದಲ್ಲಿ ಮುಳುಗಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಪಕ್ಷಗಳಿಗೆ ಪರ್ಯಾಯವಾಗಿ ಆಮ್‌ ಆದ್ಮಿ ಪಾರ್ಟಿ(AAP)ಯ ಅವಶ್ಯಕತೆ ರಾಜ್ಯಕ್ಕಿದೆ ಎಂದು ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ.ಎನ್‌.ಜಗದೀಶ್‌ ಮಹಾದೇವ್‌ ಹೇಳಿದ್ದಾರೆ.

ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಇಂದು ನಡೆದ ಸಮಾರಂಭದಲ್ಲಿ ಎಎಪಿಗೆ ಸೇರ್ಪಡೆಗೊಂಡ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಶಕೀಲ್ ಜಗದೀಶ್‌, ಸುಮಾರು 10 ವರ್ಷಗಳಿಂದ ಒಂಟಿಯಾಗಿ ಭ್ರಷ್ಟಾಚಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದೇನೆ. ನನ್ನ ಸಾಮಾಜಿಕ ಸಿದ್ಧಾಂತದ ನಿಲುವಿಗೆ ಎಎಪಿ ಪಕ್ಷ ಹೋಲಿಕೆ ಆಗುತ್ತದೆ. ರಾಜಕೀಯ ಪಕ್ಷ ಸೇರಿಕೊಂಡು ಹೋರಾಟ ನಡೆಸಿದರೆ ಮತ್ತಷ್ಟು ಬಲ ಸಿಗಬಹುದು ಎನ್ನುವ ಕಾರಣಕ್ಕೆ ಎಎಪಿ ಸೇರಿದ್ದೇನೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಜನವಿರೋಧಿ ನೀತಿ ಅನುಸರಿಸುತ್ತಿದೆ. ಈ ನಡುವೆ ಕೇಜ್ರಿವಾಲ್‌ ಆಡಳಿತದಲ್ಲಿ ಕುಡಿಯುವ ನೀರು, ವಿದ್ಯುತ್‌, ವೈದ್ಯಕೀಯ ಸೌಲಭ್ಯ ಮುಂತಾದವುಗಳು ಒಂದು ಮಿತಿಯವರೆಗೆ ಉಚಿತವಾಗಿ ನೀಡುವ ಮೂಲಕ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ. ದೇಶದಲ್ಲಿ ಪೆಟ್ರೋಲ್‌, ಡಿಸೇಲ್‌, ಗ್ಯಾಸ್‌ ಬೆಲೆಯನ್ನು ಮನಬಂದಂತೆ ಹೆಚ್ಚಿಸುವ ಮೂಲಕ ಸಾಮಾನ್ಯ ಜನರನ್ನು ಹೈರಾಣಾಗಿಸುತ್ತಿರುವ ಮೋದಿ ಆಡಳಿತ ವಿರುದ್ಧ ಹೋರಾಡಲು ಯುವಜನತೆ ಮುಂದಾಗಬೇಕು. ಭ್ರಷ್ಟ ಹಾಗೂ ಕೋಮುವಾದಿ ನಾಯಕರೇ ತುಂಬಿರುವ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಪ್ರತಿಜ್ಞೆ ಮಾಡಬೇಕು ಜಗದೀಶ್ ಹೇಳಿದರು.

‘ಒಳ್ಳೆಯ ಜನರು ಒಗ್ಗೂಡಿದರೆ ಸಾಮಾನ್ಯರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಬಹುದು ಎಂಬುದನ್ನು ದೆಹಲಿ ರಾಜಕೀಯವು ನಮಗೆ ತೋರಿಸಿದೆ. ದಶಕಗಳಿಂದ ನಮ್ಮ ರಾಜ್ಯದಲ್ಲಿ ಅನೇಕ ವ್ಯಕ್ತಿಗಳು ಮತ್ತು ಸಂಘಟನೆಗಳು ವಿವಿಧ ಸಮಸ್ಯೆಗಳು ಮತ್ತು ಅನ್ಯಾಯದ ವಿರುದ್ಧ ಪ್ರತ್ಯೇಕವಾಗಿ ಹೋರಾಡುತ್ತಿವೆ. ದೊಡ್ಡ ಪ್ರಮಾಣದ ಬದಲಾವಣೆ ತರಲು ಅಂಥವರೆಲ್ಲರೂ ಒಟ್ಟಾಗಿ ಸೇರುವ ಸಮಯ ಈಗ ಬಂದಿದೆ, ವಕೀಲ ಜಗದೀಶ್ ಅವರು ಪಕ್ಷಕ್ಕೆ ಸೇರಿದ್ದು ಕಾರಣ ಮತ್ತಷ್ಟು ಬಲಬಂದಿದೆ ಎಂದು ಎಎಪಿ (AAP) ರಾಜ್ಯ ಘಟಕದ ಸಂಚಾಲಕ ಪ್ರಥ್ವಿ ರೆಡ್ಡಿ ಹೇಳಿದರು.

ಭ್ರಷ್ಟಾಚಾರದ ವಿರುದ್ಧ, ಅನ್ಯಾಯ ಅತ್ಯಾಚಾರ, ಸೇರಿದಂತೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ಪರ ವಾದ ಮಂಡಿಸಿದ ಜಗದೀಶ್ ಮಹಾದೇವ ಅವರು ‘ವಕೀಲ್ ಸಾಬ್’ ಎಂದೇ ಖ್ಯಾತಿ ಪಡೆದಿದ್ದಾರೆ. ಅಷ್ಟೇ ಅಲ್ಲ ಸಾಮಾಜಿಕ ಕಾರ್ಯಕರ್ತರಾಗಿ ಫೇಸ್ಬುಕ್ ಲೈವ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಜನಸಾಮಾನ್ಯರ ಮುಟ್ಟಿಸುವ ಪ್ರಯತ್ನ ಅವರು ಮಾಡುತ್ತಾರೆ.

ಈ ಸಮಾರಂಭದಲ್ಲಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ, ಮುಖಂಡರಾದ ಲಕ್ಷ್ಮೀಕಾಂತ ರಾವ್‌, ನಂಜಪ್ಪ ಕಾಳೇಗೌಡ, ಕುಶಲಸ್ವಾಮಿ, ಉಷಾ ಮೋಹನ್‌, ಬಿ.ಟಿ.ನಾಗಣ್ಣ, ಸುರೇಶ್‌ ರಾಥೋಡ್‌, ಜಗದೀಶ್‌ ವಿ. ಸದಂ ಮತ್ತಿತರರು

ಈ ವರ್ಷದ ಶೈಕ್ಷಣಿಕ ಕಾರ್ಯಚಟುವಟಿಕೆಗಳು ನಾಳೆಯಿಂದ ಆರಂಭ

ಬೆಂಗಳೂರು: 2021-22 ಶೈಕ್ಷಣಿಕ ವರ್ಷದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ನಾಳೆಯಿಂದ ಆರಂಭವಾಗಲಿದೆ. ಶಾಲೆಗಳಿಗೆ ಮಕ್ಕಳ ಪ್ರವೇಶಾತಿ, ಅಧ್ಯಾಪಕರನ್ನು ಸಜ್ಜುಗೊಳಿಸುವುದು, ವಿವಿಧ ಪಠ್ಯಕ್ರಮಗಳನ್ನು ಬೋಧಿಸಲು ಸಮಯವನ್ನು ನಿಗದಿ ಪಡಿಸುವುದು ಮುಂತಾದ ಕಾರ್ಯಚಟುವಟಿಕೆಗಳು ನಾಳೆಯಿಂದ ಆರಂಭವಾಗಬಹುದು. ಶಾಲೆ ಆರಂಭಿಸುವ ಪೂರ್ವಭಾವಿ ಸಿದ್ಧತೆಗಳನ್ನು ಜೂನ್ 15 ರಿಂದ 30 ರವರೆಗೆ ಮಾಡಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ. ಪ್ರಸಕ್ತ ಸಾಲಿನ (2021-22) ಶೈಕ್ಷಣಿಕ ವರ್ಷ ಜುಲೈ 1 ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಈಗಾಗಲೇ ಪ್ರಕಟಿಸಿದೆ. 5ರಿಂದ 10ನೇ ತರಗತಿ … Read more

ಕೆಎಸ್ಆರ್‍ ಟಿಸಿ ನಷ್ಟ ಪ್ರಯಾಣಿಕರ ತಲೆಗೆ…!?

ಬೆಂಗಳೂರು: ಕೆಎಸ್ಆರ್‍ ಟಿಸಿ ಅನುಭವಿಸುತ್ತಿರುವ ಆರ್ಥಿಕ ನಷ್ಟವನ್ನು ಪ್ರಯಾಣಿಕರ ತಲೆಗೆ ಹಾಕಲಾಗುವುದೇ? ಇಂತಹ ಒಂದು ಸಾಧ್ಯತೆ ಇರುವುದು ಕಂಡು ಬರುತ್ತಿದೆ. ಕೋವಿಡ್ ಮತ್ತು ಅದರ ಜೊತೆಗೇ ಬಂದ ಲಾಕ್ಡೌನ್, ಸಾಮಾನ್ಯ ಜನರಿಗೂ, ವಿವಿಧ ಸಂಸ್ಥೆಗಳಿಗೂ, ಸರಕಾರಕ್ಕೂ ಹಣಕಾಸಿನ ಮುಗ್ಗಟ್ಟನ್ನು ತಂದಿಟ್ಟಿದೆ. ಕೆಎಸ್ಆರ್‍ ಟಿಸಿ ಕೂಡಾ ಇದಕ್ಕೆ ಹೊರತಾಗಿಲ್ಲ. ಬಸ್ಸುಗಳ ಸಂಚಾರವಿಲ್ಲದ ಕಾರಣದಿಂದ ಕೆಎಸ್ಆರ್‍ ಟಿಸಿ ಸಂಸ್ಥೆಯು ಪ್ರತಿನಿತ್ಯವೂ ಕೋಟಿಗಟ್ಟಳೆ ನಷ್ಟವನ್ನು ಅನುಭವಿಸುತ್ತಿದೆ. ಇದನ್ನು ತುಂಬಲು ಪ್ರಯಾಣದ ದರವನ್ನ ಏರಿಸುವ ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ … Read more

ಜೂನ್ ಏಳರಂದು ಲಾಕ್ಡೌನ್ ಕೊನೆಯಾಗುತ್ತಾ!? ಬಿಎಂಟಿಸಿ ಸಿಬ್ಬಂದಿಗಳಿಗೆ ಜೂನ್ ಏಳರಿಂದ ಕರ್ತವ್ಯಕ್ಕೆ ಹಾಜರಾಗಲು ಆದೇಶ..

ಬೆಂಗಳೂರು: ಜೂನ್ ಏಳರಂದು ಲಾಕ್ಡೌನ್ ಕೊನೆಯಾಗುತ್ತಾ? ಇಂತಹ ಒಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ಯಾಕೆಂದರೆ, ಬಿಎಂಟಿಸಿ ಸಂಸ್ಥೆಯು ತನ್ನ ಸಿಬ್ಬಂದಿಗಳಿಗೆ ಜೂನ್ ಏಳರಿಂದ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ! ಹೀಗಿದ್ದರೂ ಜೂನ್ ಏಳರ ಬಳಿಕವೂ ಲಾಕ್ಡೌನ್ ಜಾರಿಯಾಗಬಹುದು ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಸುತ್ತೋಲೆಯಲ್ಲಿ “07-06-2021ರಿಂದ ಹಂತ ಹಂತವಾಗಿ ಅನುಸೂಚಿಗಳ ಆಚರಣೆ ಪ್ರಾರಂಭ ಮಾಡಲು ಉದ್ದೇಶಿಸಲಾಗಿದೆ.” ಎಂಬ ಪದಗಳ ಪ್ರಯೋಗ ಮಾಡಿದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಅನ್ಲಾಕ್ ಮಾಡದೇ, ಹಂತಹಂತವಾಗಿ, ನಿಗದಿತ ಪ್ರಮಾಣದಲ್ಲಿ ಪ್ರಾರಂಭ ಮಾಡಬಹುದೆಂದು ಅಂದಾಜಿಸಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸರಕಾರವು ಲಾಕ್ಡೌನ್ … Read more

ಬಿಎಮ್‍ಟಿಸಿ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಿ ಸುತ್ತೋಲೆ

ಬೆಂಗಳೂರು: ಬಿಎಮ್‍ಟಿಸಿ ಸಿಬ್ಬಂದಿಗಳು ಕಡ್ಡಾಯವಾಗಿ ಲಸಿಕೆ ಹಾಕಿಕೊಳ್ಳಬೇಕಿದೆ. ಬಳಿಕವೇ ಕರ್ತವ್ಯಕ್ಕೆ ಹಾಜರಾಗಲು ಅವಕಾಶವಿರುವುದು ಬಿಎಮ್‍ಟಿಸಿ ಸುತ್ತೋಲೆ ಹೊರಡಿಸಿದೆ. ಸದ್ಯ ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ಬಿಎಮ್‍ಟಿಸಿಯು ತನ್ನ ಸಂಚಾರವನ್ನು ಸ್ಥಗಿತಗೊಳಿಸಿದೆ. ಲಾಕ್ಡೌನ್ ಕೊನೆಗೊಂಡು ಬಸ್ಸುಗಳು ಸಂಚರಿಸಲು ಆರಂಭಿಸುವ ವೇಳೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಬೇಕಿದೆ. ಆದರೆ ಲಸಿಕೆ ತೆಗೆದುಕೊಳ್ಳದವರಿಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಜನರ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಕಾರಣದಿಂದಾಗಿ ಮುಂಜಾಗರೂಕತಾ ಕ್ರಮವಾಗಿ ಈ ಶರತ್ತನ್ನು ವಿಧಿಸಲಾಗಿದೆ. ಲಾಕ್ಡೌನ್ ವೇಳೆ ಮನೆಯಲ್ಲೇ ಇದ್ದು, ಹತ್ತಿರದ ಆಸ್ಪತ್ರೆ ಅಥವಾ ಬಿಎಮ್‍ಟಿಸಿ ಡಿಪೋಗಳಿಗೆ ಹೋಗಿ ಲಸಿಕೆ ಹಾಕಿಕೊಳ್ಳಬೇಕಿದೆ. ಬಿಎಮ್‍ಟಿಸಿ ಡಿಪೋಗಳಲ್ಲೂ ಲಸಿಕೆ ಅಭಿಯಾನ … Read more

ನಾಡಿದ್ದು (ಜೂನ್ ಒಂದು) ರಿಂದ ನಂದಿನಿ ಹಾಲು ಖರೀದಿಸುವವರಿಗೆ ಉಚಿತವಾಗಿ ‘ಹೆಚ್ಚುವರಿ ಹಾಲು’ ಪೂರೈಕೆ

ಬೆಂಗಳೂರು: ಜೂನ್ ಒಂದರಂದು ಪ್ರತಿವರ್ಷವೂ ‘ವಿಶ್ವ ಹಾಲು ದಿನಾಚರಣೆ‘ಯನ್ನು ಆಚರಿಸಲಾಗುತ್ತಿದೆ. ಈ ವರ್ಷಜೂನ್ ಒಂದರಿಂದ ಈ ದಿನಾಚರಣೆಯ ಲಾಭ ಕರ್ನಾಟಕದ ಗ್ರಾಹಕರಿಗೆ ಸಿಗಲಿದೆ. ಜೂನ್ 1 ರಿಂದ 30 ರ ವರೆಗೆ – ಒಂದು ತಿಂಗಳ ಕಾಲ, ನಂದಿನಿ ಸಂಸ್ಥೆಯ ವತಿಯಿಂದ ‘ಹೆಚ್ಚುವರಿ ಹಾಲು ಕುಡಿಯಿರಿ‘ ಎಂಬ ಅಭಿಯಾನದಡಿಯಲ್ಲಿ ಹೆಚ್ಚುವರಿ ಹಾಲನ್ನು ಅದು ತನ್ನ ಗ್ರಾಹಕರಿಗೆ ನೀಡಲಿದೆ. ಶಿವಮೊಗ್ಗ (ದಾವಣಗೆರೆ, ಚಿತ್ರದುರ್ಗ ಒಳಗೊಳ್ಳುವುದು) ಜಿಲ್ಲಾ ಹಾಲು ಒಕ್ಕೂಟ ಮತ್ತು ದಕ್ಷಿಣ ಕನ್ನಡ (ಉಡುಪಿಒಳಗೊಂಡು) ಜಿಲ್ಲಾ ಹಾಲು ಒಕ್ಕೂಟಗಳಿಂದ ಮಾರಾಟವಾಗುವ … Read more