ಮಂಜೇಶ್ವರ: ಸ್ವತಂತ್ರ ಅಭ್ಯರ್ಥಿ ಖದೀಜಾ ಇಬ್ರಾಹಿಂ ಕಚೇರಿ ಉದ್ಘಾಟನೆ

ಮಂಜೇಶ್ವರ(30-11-2020): ಮಂಜೇಶ್ವರ ಮೀಯಪದವು ಮೀಂಜ ಗ್ರಾಮ ಪಂಚಾಯತ್ 8ನೇ ವಾರ್ಡ್ ಬಾಳಿಯೂರುನಿಂದ ಸ್ಪರ್ಧಿಸುತಿರುವ ಜನಕೀಯ ಸ್ವತಂತ್ರ ಅಭ್ಯರ್ಥಿ ಖದೀಜಾ ಇಬ್ರಾಹಿಂ ರವರ ಚುನಾವಣಾ ಕಚೇರಿ ಉದ್ಘಾಟನೆಗೊಂಡಿತು. ಮುಹ್ಮದ್ ಕೋಯ ಅವರು ಕಚೇರಿಯ ಉದ್ಘಾಟನೆಯನ್ನು ಮಾಡಿದ್ದು, ನಿವೃತ ಸರ್ಕಲ್ ಇನ್ಸಪೆಕ್ಟರ್ ರವಿಂದ್ರನ್ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ರಪೀಕ್ ಮುನ್ದೀಲ ಅನುಮೋದನೆ ಮಾಡಿದ್ದು, ಇಬ್ರಾಹಿಂ ಹೊನ್ನಕಟ್ಟೆ ಸ್ವಾಗತಿಸಿದ್ದು, ನೌಪಾಲ್ ವಂದಿಸಿದರು. ಕೊನೆಗೆ ಅಭ್ಯರ್ಥಿಯಾದ ಖದೀಜಾ ಇಬ್ರಾಹಿಂ ರವರು ಸೇರಿದವರಲ್ಲಿ ಮತ ಯಾಚಿಸಿದ್ದು, ಗ್ರಾಮದ ಅಭಿವೃದ್ಧಿಗಾಗಿ ಪರಿಶ್ರಮಿಸುವುದಾಗಿ ಹೇಳಿದ್ದಾರೆ.