ಈಜಲು ಇಳಿದ 7 ಯುವಕರು ನೀರುಪಾಲು!ಇಬ್ಬರ ಮೃತದೇಹ ಪತ್ತೆ, ಮುಂದುವರಿದ ಶೋಧ

penna river

ಕಡಪ(18-12-2020): ತಿರುಪತಿಯ ಏಳು ಯುವಕರು ನಿನ್ನೆ ಸಂಜೆ ಸಿದ್ದವಟಂನ ಪೆನ್ನಾ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ. ಪೊಲೀಸರು ಮತ್ತು ಈಜುಗಾರರ ಶೋಧ ಕಾರ್ಯಾಚರಣೆಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಇಬ್ಬರ ಶವಗಳು ಪತ್ತೆಯಾಗಿದ್ದು, ಘಟನೆ ವರದಿಯಾದ ಕೂಡಲೇ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಸೋಮಶೇಖರ್ ಮತ್ತು ರಾಜೇಶ್ ಎಂಬವರ ಮೃತದೇಹ ಸಿಕ್ಕಿದೆ. ಪೊಲೀಸ್ ವರಿಷ್ಠಾಧಿಕಾರಿ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಶಿವ ಎಂಬ ಯುವಕನ ತಂದೆ ಕಳೆದ ವರ್ಷ ಮೃತಪಟ್ಟಿದ್ದರು. … Read more