ಕಳೆದ ಒಂದು ವರ್ಷದಲ್ಲಿ 8,500ಕ್ಕೂ ಅಧಿಕ ಮಂದಿ ಹಿಂಸಾಚಾರಕ್ಕೆ ಬಲಿ| ಎಐಎಚ್‌ಆರ್‌ಸಿ ತೆರೆದಿಟ್ಟ ಬೆಚ್ಚಿಬೀಳಿಸುವ ವರದಿ

afghan

ಕಾಬೂಲ್(27-01-2021): ಅಪ್ಘಾನಿಸ್ತಾನದಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಯುದ್ಧ ಮತ್ತು ಹಿಂಸಾಚಾರದಲ್ಲಿ 8,500 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಪಘಾನ್ ಸ್ವತಂತ್ರ ಮಾನವ ಹಕ್ಕುಗಳ ಆಯೋಗ (ಎಐಎಚ್‌ಆರ್‌ಸಿ) ತನ್ನ ಇತ್ತೀಚಿನ ವರದಿಯಲ್ಲಿ ಬಹಿರಂಗಪಡಿಸಿದೆ. ಎಐಎಚ್‌ಆರ್‌ಸಿ ಮಾಹಿತಿಯ ಪ್ರಕಾರ, 2019 ಕ್ಕೆ ಹೋಲಿಸಿದರೆ ಅಫ್ಘಾನಿಸ್ತಾನದಲ್ಲಿ ನಾಗರಿಕರ ಸಾವುನೋವು 2020 ರಲ್ಲಿ ಶೇಕಡಾ 21 ರಷ್ಟು ದಾಖಲಾಗಿದೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ. ಘಟನೆಗೆ ತಾಲೀಬಾನ್ ಮೊದಲ ಕಾರಣವಾದರೆ, ಅಪರಿಚಿತ ದುಷ್ಕರ್ಮಿಗಳ ತಂಡವು ವಿಧ್ವಂಸಕ ಕೃತ್ಯವನ್ನು ನಡೆಸಿದೆ. … Read more

ಅಫ್ಘಾನಿಸ್ತಾನ: ಪೊಲೀಸ್ ನೆಲೆಯ ಮೇಲೆ ಆತ್ಮಾಹುತಿ ದಾಳಿ: ನಾಲ್ಕು ಮಂದಿ ಸಾವು

  ಕಾಬೂಲ್‌(09/11/2020): ಅಫ್ಘಾನಿಸ್ತಾನದ ಪೊಲೀಸ್ ನೆಲೆಯ ಮೇಲೆ ಇಂದು ಆತ್ಮಾಹುತಿ ದಾಳಿ ನಡೆದಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ದಕ್ಷಿಣ ಕಂದಹಾರ್ ಪ್ರಾಂತ್ಯದ ಪೊಲೀಸ್ ನೆಲೆಯ ಮೇಲೆ ಕಾರಿನ ಮೂಲಕ ಈ ಆತ್ಮಾಹುತಿ ದಾಳಿ ನಡೆಸಲಾಗಿದ್ದು, ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಲ್ಲದೆ, 40 ಮಂದಿಗೆ ಗಂಭೀರ ಗಾಯಗಳಾಗಿವೆ. ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಯು ವಹಿಸಿಕೊಂಡಿಲ್ಲ.