ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಮತ ಯಾಚಿಸಿದ ಬಿಜೆಪಿ ಮುಖಂಡ!

schindya

ಭೋಪಾಲ್‌(01/10/2020): ಚುನಾವಣೆ ಪ್ರಚಾರ ಮಾಡುತ್ತಾ ಬಿಜೆಪಿ ಮುಖಂಡರೊಬ್ಬರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುವಂತೆ ಕೋರಿದ ಘಟನೆ ನಡೆದಿದೆ. ಉಪ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಬಾಯಿತಪ್ಪಿನಿಂದ ಕಾಂಗ್ರೆಸ್‌ ಪರವಾಗಿ ಮತಯಾಚಿಸಿರುವುದು ಈಗ ವೈರಲ್ ಆಗಿದೆ. ಗ್ವಾಲಿಯರ್‌ನ ದಾಬ್ರ ನಗರದ ಬಿಜೆಪಿ ಅಭ್ಯರ್ಥಿ ಇಮ್ರಾತಿ ದೇವಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸಿಂಧಿಯಾ ಅವರು, ಕಾಂಗ್ರೆಸ್‌ಗೆ ಮತ ನೀಡುವಂತೆ ಕೇಳಿದ್ದಾರೆ. ಈ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.